ಬಂಟ್ವಾಳ:    ಕಾಶ್ಮೀರದ ಪುಲ್ವಾಮದಲ್ಲಿ ಭಾರತೀಯ ಸೈನಿಕರ ಮೇಲೆ ನಡೆದ ಉಗ್ರರ ದಾಳಿಯನ್ನು ಖಂಡಿಸಿ ಹಾಗೂ  ಹುತಾತ್ಮರಾದ ವೀರ ಯೋಧರಿಗೆ ಕಲ್ಲಡ್ಕ ಶ್ರೀರಾಮ ಮಂದಿರದ ರಾಜ ಗೋಪುರದ ಮುಂಭಾಗ  ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು ನುಡಿನಮನ ಸಲ್ಲಿಸಿ ಮಾತನಾಡಿದ ಆರ್ ಎಸ್ ಎಸ್ ಮುಖಂಡ  ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಮಾತನಾಡಿ, ನಮಗೆಲ್ಲಾ ಸವಾಲಿನ ದಿನ ಬಂದಿದೆ, ಮನುಷ್ಯ ಬದುಕಲು ಅಸಾಧ್ಯವಾದ ಜಾಗದಲ್ಲಿ ದೇವ ಸ್ವರೂಪಿಗಳಾದ ಸೈನಿಕರನ್ನು ರಾಕ್ಷಸರು ಮೋಸದಲ್ಲಿ ಕೊಂದರು. 1947 ರಲ್ಲಿ ದೇಶ ವಿಭಜನೆಯ ಘಟನೆಯಿಂದಾಗಿ ನಾವು ಇಂದು ಈ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದೇವೆ ಎಂದರು.
IMG-20190215-WA0063
ಈ ದೇಶದ ವ್ಯವಸ್ಥೆಯನ್ನು ನಾಶ ಮಾಡಬೇಕೆಂಬ ಪ್ರಯತ್ನ ನಡೆಯುತ್ತಿದ್ದು, ಅಲ್ಲಿನ ರಾಜ್ಯದಲ್ಲಿ ಬಹುತೇಕ ಜನ ಉಗ್ರಗಾಮಿಗಳಿಗೆ ಬೆಂಬಲ ಕೊಡುವವರಿದ್ದು, ಇಂತಹ ಘಟನೆಗಳು ನಡೆಯುತ್ತದೆ. ಎಲ್ಲಿಯವರೆಗೂ ಪಾಕಿಸ್ತಾನ ಇರುತ್ತದೆ ಅಲ್ಲಿಯವರೆಗೆ ಇಂತಹ ಸಮಸ್ಯೆಗಳು ನಡೆಯುತ್ತಲೇ ಇರುತ್ತದೆ ಎಂದ ಡಾ.ಭಟ್ ಅದಕ್ಕಾಗಿ  ಒಂದು ಸಲ ಪಾಕಿಸ್ತಾನವನ್ನು ನಾಶಮಾಡಬೇಕು   ಈ ನಿಟ್ಟಿನಲ್ಲಿ ಸೈನಿಕರಿಗೆ ಶಕ್ತಿ ಕೊಡುವಂತ ಕಾರ್ಯ  ಹಳ್ಳಿ, ಹಳ್ಳಿಗಳಲ್ಲಿ ನಡೆಯಬೇಕಾಗಿದೆ ಎಂದರು.  ಅಖಂಡ ಭಾರತ ಸಂಕಲ್ಪ ಈಡೇರುವ ಸಮಯ ಬಂದಿದ್ದು, ರಾತ್ರಿ ಹಗಲು  ನಮ್ಮ ಸಮಾಜವನ್ನು ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಈ. ಶೃದ್ದಾಂಜಲಿ ಸಭೆ ಕೇವಲ ಪ್ರಚಾರಕ್ಕಾಗಿ ಅಲ್ಲ, ಉಗ್ರರ ವಿರುದ್ಧ ಸೇಡು ತೀರಿಸಲು ವೀರ ಯೋಧರಿಗೆ ನೈತಿಕ ಸ್ಥೈರ್ಯ ತುಂಬುವುದಕ್ಕಾಗಿ ಎಂದ ಅವರು ಮಡಿದ ವೀರ ಯೋಧರ ಬಲಿದಾನವನ್ನು ಸವಾಲಾಗಿ ಸ್ವೀಕರಿಸಬೇಕು ಎಂದು ಸರಕಾರವನ್ನು   ಒತ್ತಾಯಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ,ಮಾಜಿ ಜಿಪಂ ಸದಸ್ಯ ಚೆನ್ನಪ್ಪ ಕೋಟ್ಯಾನ್,ತಾಪಂ ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು,  ಕೃಷ್ಣಪ್ಪ ,ಸುಜಿತ್ ಕೊಟ್ಟಾರಿ, ಯತಿನ್ ಕುಮಾರ್ ಎಳ್ತಿಮಾರ್  ಹಾಗೂ ದೇಶಭಕ್ತ ತರುಣರು ಭಾಗವಹಿಸಿದ್ದರು.
IMG-20190215-WA0065

By suddi9

Leave a Reply

Your email address will not be published. Required fields are marked *