ಪೊಳಲಿ:ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನವು ಇದೀಗ ಜೀರ್ಣೋದ್ಧಾರಗೊಂಡು ಮಾರ್ಚ್ 4ರಿಂದ ಪುನ: ಪ್ರತಿಷ್ಠೆ, ಅಷ್ಠಬಂಧ, ನೂತನ ಧ್ವಜಸ್ತಂಭ ಮಾರ್ಚ್ 13ರವರೆಗೆ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕವು ನಡೆಯಲಿದೆ.
ಇಲ್ಲಿಯ ದೇವಸ್ಥಾನ ಮುಜರಾಯಿ ಇಲಾಖೆಗೆ ಒಳಪಟ್ಟರು. ಈ ದೇವಸ್ಥಾನವು ಸಾವಿರ ಸೀಮೆಗೆ ಸೇರಿದ್ದರಿಂದ ಭಕ್ತಾಧಿಗಳು ತಮ್ಮ ಅಳಿಲು ಸೇವೆಯಿಂದ ತನ್ನ ಕೈಲಾದ ಸೇವೆಯ ಮೂಲಕ ದೇವಸ್ಥಾನದ ಕೆಲಸದಲ್ಲಿ ಕೈಜೋಡಿಸಿದ್ದಾರೆ. ಸುಮಾರು ಎರಡು ವರ್ಷಗಳ ಮುಂಚೆ ಇಲ್ಲಿ ಕೆಲಸ ಆರಂಭಗೊಂಡಿದ್ದು, ಸರಕಾರವೇ ಎಲ್ಲ ಕೆಲಸ ಮಾಡುತ್ತಿದ್ದರೆ ಇಷ್ಟು ದಿನಗಳಲ್ಲಿ ಭವ್ಯ ದೇವಸ್ಥಾನ ಎದ್ದು ನಿಂತಿರಲು ಸಾಧ್ಯವೇ ಇರುತ್ತಿರಲಿಲ್ಲ.
ಪೊಳಲಿ ರಾಜರಾಜೇಶ್ವರಿ ದೇವಸ್ಥಾನ ಭಕ್ತರ ನಿರಂತರ ಸೇವೆಯಿಂದಾಗಿ ಭವ್ಯವಾಗಿ ಎದ್ದು ನಿಂತಿದೆ.
ಇಲ್ಲಿ ಪ್ರತಿ ದಿನ ಏನಿಲ್ಲವೆಂದರೂ ಕನಿಷ್ಠ 200ರಿಂದ 500 ಮಂದಿ ಭಕ್ತರು ಕರಸೇವೆಯ ಮೂಲಕ ನಿರಂತರ ದೇಗುಲ ನವೀಕರಣ ಕಾರ್ಯದಲ್ಲಿ ಕೈಜೋಡಿಸುತ್ತಾ ಬರುತ್ತಿದ್ದಾರೆ. ದೇವಸ್ಥಾನದ ಪಂಚಾಂಗಕ್ಕೆ ಅಡಿಗಲ್ಲು ಹಾಕಿದಾಗಿನಿಂದ ಪ್ರತಿದಿನ ನೂರಾರು ಮಂದಿ ಕರಸೇವೆಯಲ್ಲಿ ತೊಡಗಿಕೊಂಡು ದೇವಸ್ಥಾನ ನವೀಕರಣಕ್ಕೆ ಸಾಥ್ ನೀಡಿದ್ದಾರೆ. ಚಿಕ್ಕ ಬಾಲಕರಿಂದ ಹಿಡಿದು 75 ವರ್ಷದ ವೃದ್ಧರು, ಮಹಿಳೆಯರು ಸೇರಿ, ಹಲಾವಾರು ಸಂಘ ಸಂಸ್ಥೆಯವರೊಂದಿಗೆ ಪ್ರತಿಯೊಬ್ಬ ಭಕ್ತರು ಯಾವುದಾದರೊಂದು ತನ್ನ ಕೈಲಾದ ಕೆಲಸವನ್ನು ದೇವಿಯ ಸೇವೆ ಎಂಬಂತೆ ಮಾಡಿಕೊಂಡು ಬರುತ್ತಿದ್ದಾರೆ.
ಕೆಲಸ ಇಲ್ಲದಿದ್ದ ಪಕ್ಷದಲ್ಲಿ ಕಲ್ಲು ಹೆಕ್ಕುವುದು, ಕಸ ತೆಗೆಯುವುದು ಹೀಗೆ ತನಗೆ ಸಿಕ್ಕ ಕೆಲಸವನ್ನು ಪ್ರಸಾದ ರೂಪದಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ. ಪೊಳಲಿ ದೇಗುಲದ ನಿರ್ಮಾಣ ಕಾರ್ಯದಲ್ಲಿ ಕ್ರೇನ್‍ಗಳಂಥಾ ತಂತ್ರಜ್ಞಾನಗಳನ್ನು ಬಳಸಿದ್ದರೂ ಸಹ ಕರಸೇವಕರು ಮಾತ್ರ ಪ್ರತಿದಿನ ಹೊಸ ಹುಮ್ಮಸ್ಸಿನಿಂದ ನಿರಂತರ ಕರಸೇವೆಯಲ್ಲಿ ತೊಡಗಿಕೊಂಡು ಬರುತ್ತಿದ್ದಾರೆ.
ಕರಸೇವೆಗೆಂದೇ ಇಲ್ಲಿ ನಾನಾ ಜಿಲ್ಲೆ, ರಾಜ್ಯಗಳಿಂದ ನೂರಾರು ಮಂದಿ ಆಗಮಿಸುತ್ತಿದ್ದು, ಬೆಳಗ್ಗಿನ್ನಿಂದ ರಾತ್ರಿ ತನಕ ಸೇವೆ ಸಲ್ಲಿಸಿ ದೇವರ ಪ್ರಸಾದ ಸ್ವೀಕರಿಸಿ ತೆರಳುತ್ತಿರುವುದು ಇಲ್ಲಿನ ನಿತ್ಯದ ಕೆಲಸ. ಕರಸೇವಕರ ಊಟೋಪಚಾರದ ವ್ಯವಸ್ಥೆಯನ್ನು ಸ್ವತಃ ದೇವಸ್ಥಾನದ ಆಡಳಿತ ಮಂಡಳಿಯೇ ವಹಿಸಿಕೊಂಡರು ದಿನ ನಿತ್ಯ ಬೆಳಗ್ಗಿನ ನಾಷ್ಟ, ಮಧ್ಯಾಹ್ನದ ಭೋಜನ, ರಾತ್ರಿ ಗಂಜಿ-ಚಟ್ಟಿ-ಮಜ್ಜಿಗೆ ನೀಡಲಾಗುತ್ತಿದೆ ಗಂಜಿಊಟ ತಯಾರು ಮಾಡುವಲ್ಲಿಯೂ ಸೇವೆ ಮಾಡುವ ಮೂಲಕ ಇಲ್ಲಿಯ ಭಕ್ತರು ಒಂದಲ್ಲಒಂದು ಸೇವೆಯಲ್ಲಿ ನಿರತರಾಗಿದ್ದಾರೆ.
ರಾತ್ರಿ 11ರ ಸುಮಾರಿಗೆ ಕರಸೇವೆ ಮುಕ್ತಾಯಗೊಳ್ಳುತ್ತಿದ್ದು, ಭಕ್ತರು ಗಂಜಿ-ಚಟ್ನಿ-ಮಜ್ಜಿಗೆ ಸ್ವೀಕರಿಸಿ ಸಂತೃಪ್ತಿಯಿಂದ ತೆರಳುತ್ತಿರುವುದನ್ನು ಇಲ್ಲಿ ದಿನನಿತ್ಯ ಕಾಣಬಹುದು.






