ಕೈಕಂಬ:ಯಕ್ಷತರಂಗಿಣಿ ಕೈಕಂಬ ಈ ಸಂಸ್ಥೆಯ ಹನ್ನೆರಡನೆಯ ವಾರ್ಷಿಕೋತ್ಸವವು ಶ್ರೀ ಹನುಮಗಿರಿ ಮೇಳದ ರಂಗಸ್ಥಳದಲ್ಲಿ ಜರುಗಿತು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಹೊಟೇಲ್ ಶ್ರೀರಾಮ್ ಮತ್ತು ಮಂಜುಶ್ರೀ ಕಾಂಪ್ಲೆಕ್ಸ್‍ನ ಮಾಲಕರಾಗಿರುವ ಹರಿರಾವ್, ಡಾ.ಶ್ರೀ ಪತಿ ಕಿನ್ನಿಕಂಬಳ, ನಿವೃತ್ತ ಕನ್ನಡ ಅಧ್ಯಾಪಕರಾದ ಮಾಧವ ಮಯ್ಯ ಉಪಸ್ಥಿತರಿದ್ದರು.
ಕಲಾವಿದರಾಗಿರುವ ಎಂ,ಕೆ.ರಮೇಶ್ ಆಚಾರ್ಯ, ಶ್ರೀ ಬೆಳ್ಳಾರೆ, ಮಂಜುನಾಥ ಭಟ್, ರಘುನಾಥ ಶೆಟ್ಟಿ ಬಾಯಾರು, ರವೀಂದ್ರ ಶೆಟ್ಟಿ ಹೊಸಂಗಡಿ, ಚಂದ್ರಹಾಸ ಪೂಜಾರಿ ತುಂಬೆ, ಇವರನ್ನು ಸನ್ಮಾನಿಸಲಾಯಿತು. ಯಕ್ಷತರಂಗಿಣಿಯ ಸದಸ್ಯರಾಗಿರುವ ವಿ.ಸಿ.ಶೇಖರ, ರಾಜೀವ ಕೆ., ಸುರೇಶ್ ಆಚಾರ್ಯ ಎ.ಜಿ, ನವೀನ್ ಆಚಾರ್ಯ, ರಾಜೇಶ ಭಟ್, ಪಾಲ್ಗೊಂಡಿದ್ದರು. ಸನ್ಮಾನ ಪತ್ರಗಳನ್ನು ಶ್ರೀಧರ ರಾವ್ ಕೈಕಂಬ, ರಮೇಶ್ ರಾವ್ ಕೈಕಂಬ, ಸತೀಶ ಶೆಟ್ಟಿ ಕಂದಾವರ, ಉಮೇಶ್ ಭಂಡಾರಿ, ಪ್ರಾಣೇಶ್ ವಾಚಿಸಿದರು. ಚಂದ್ರಹಾಸ ಆಚಾರ್ಯರಿಗೆ ವೈದ್ಯಕೀಯ ನೆರವು ನೀಡಲಾಯಿತು.

13vp varshikosthava
ಯಕ್ಷತರಂಗಿಣಿಯ ಮುಖ್ಯ ಸಂಚಾಲಕ ಉಮೇಶ್ ಭಂಡಾರಿ ಪ್ರಸ್ತಾಪಿಸಿದರು. ಶಿವರಾಯ ಪ್ರಭು ಧನ್ಯವಾದವಿತ್ತರು. ಪೊಂಪೈ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾಗಿರುವ ಮಹೇಶ್ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಹನುಮಗಿರಿ ಮೇಳದ ಕಲಾವಿದರಿಂದ ಶ್ರೀ ಶನೀಶ್ವರ ಮಹಾತ್ಮೆ ಯಕ್ಷಗಾನ ಜರುಗಿತು.

By suddi9

Leave a Reply

Your email address will not be published. Required fields are marked *