ಮೂಡಬಿದ್ರೆ: ಮೂಡಬಿದ್ರೆಯ ಜೈನ್ ಕಾಲೇಜ್ ಸಮೀಪ ಮುಸ್ಲಿಮರ ಎರಡು ಗುಂಪುಗಳ ಮಧ್ಯೆ ಹೊಡೆದಾಟ ಸಂಭವಿಸಿದ ಘಟನೆ ಗುರುವಾರ ತಡರಾತ್ರಿ ನಡೆದಿದ್ದು, ಬೆಳಕಿಗೆ ಬಂದಿದೆ.
ನಝೀರ್ ಎನ್ನುವವರು ಇಮ್ತಿಯಾಝ್ ಎನ್ನುವವರ ಅಟೋರಿಕ್ಷಾದಲ್ಲಿ ಕೋಟೆಬಾಗಿಲು ಕಡೆಯಿಂದ ಮಹಾವೀರ ಕಾಲೇಜು ಕಡೆ ಪ್ರಯಾಣಿಸುತ್ತಿದ್ದಾಗ ರಹಿಮಾನ್ ಮತ್ತು ಇಲಿಯಾಸ್ ಬೈಕಲ್ಲಿ ಬಂದು ರಿಕ್ಷಾವನ್ನು ಅಡ್ಡಗಟ್ಟಿ ಇಮ್ತಿಯಾಝ್ ಮತ್ತು ನಝೀರ್ ಮೇಲೆ ಹಲ್ಲೆ ಮಾಡಿದ್ದರು ಎಂದು ದೂರಲಾಗಿದೆ. ದೂರಿಗೆ ಪ್ರತಿಯಾಗಿ ರಹಿಮಾನ್ ಕೂಡ ದೂರು ನೀಡಿದ್ದಾರೆ. ಹೊಡೆದಾಟಕ್ಕೆ ಮಸೀದಿಯಲ್ಲಿರುವ ಎಸ್ ಎಸ್ ಎಫ್ ಮತ್ತು ಎಸ್ ಕೆ ಗುಂಪುಗಳ ಮಧ್ಯೆ ಇರುವ ಮನಸ್ತಾಪವೇ ಕಾರಣ ಎನ್ನಲಾಗಿದ್ದು ಬಗ್ಗೆ ಮೂಡಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

