ಬಂಟ್ವಾಳ : ದ.ಕ-ಉಡುಪಿ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘ ಬಂಟ್ವಾಳ ವಲಯ ಮತ್ತು ಚ್ಯಾಂಪೋಲ್ ಲೂಬ್ರಿಕೆಂಟ್ಸ್ ಇದರ ಸಹಯೋಗದೊಂದಿಗೆ ಸ್ನೇಹ ಸಮ್ಮಿಲನ ಕಾರ್ಯಕ್ರಮಬಂಟ್ವಾಳರೋಟರಿ ಸಭಾಭವನದಲ್ಲಿ ನಡೆಯಿತು. ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ಗುಣಪಾಲ್ ಎಂ. ಕಾರ್ಯಕ್ರಮ ಉದ್ಘಾಟಿಸಿ , ಮೆಕ್ಯಾನಿಕ್ ಕೆಲಸವು ಕಲಿತಷ್ಟು ಮುಗಿಯದ ಅಧ್ಯಾಯ , ತಾನು ಶ್ರೇಷ್ಠ ಎಂಬ ಭಾವನೆ ಸಲ್ಲದು ಮೆಕ್ಯಾನಿಕ್ ಗಳು ವಾಹನದ ವೈದ್ಯರು ಎಂದು ನುಡಿದರು. 
ಗ್ಯಾರೇಜು ಮಾಲಕರು ತಮ್ಮ ವೃತ್ತಿ ಬಾಂಧವರಿಗಲ್ಲದೆ ಸಮಾಜದ ಇತರರಿಗೂ ಸೇವೆಯನ್ನು ಮಾಡುತ್ತಿರುವುದು ಅಭಿನಂದನೀಯ ಎಂದು ಸಂಚಾರಿ ಪೋಲೀಸ್ ಠಾಣಾ ಉಪನಿರೀಕ್ಷಕಿ ಮಂಜುಳಾ ಕೆ.ಎಂ.ಹೇಳಿದರು. ಇದೇ ವೇಳೆ ಇಂಗ್ಲೆಂಡ್ ನಲ್ಲಿ ನಡೆದ ಅಂತರಾಷ್ಟ್ರೀಯ ಚೆಸ್ ಸ್ಪರ್ಧೆಯ ಪ್ರಶಸ್ತಿ ವಿಜೇತೆ ಕು.ಯಶಸ್ವಿ ಕೆ. ಮತ್ತು ಸಾನಿಧ್ಯ ವಸತಿ ಶಾಲೆ ಮಂಗಳೂರಿನ ಆಡಳಿತಾಧಿಕಾರಿ ಡಾ.ವಸಂತ್ ಕುಮಾರ್ ಶೆಟ್ಟಿ ಯವರನ್ನು ಸನ್ಮಾನಿಸಲಾಯಿತು. ಬಂಟ್ವಾಳ ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ಬಿ.ವಿಶ್ವನಾಥ ಅಧ್ಯಕ್ಷತೆ ವಹಿಸಿದ್ದರು.
ರೋ.ಸಂಜೀವ ಪೂಜಾರಿ , ಚ್ಯಾಂಪೋಲ್ ಲೂಬ್ರಿಕೆಂಟ್ಸ್ ಪ್ರಬಂಧಕ ಚೇತನ್.ಪಿ , ಕಾರ್ಯದರ್ಶಿ ಸುಧೀರ್, ಕೋಶಾಧಿಕಾರಿ ಪ್ರಶಾಂತ್ ಭಂಡಾರಕಾರ್, ಉಪಾಧ್ಯಕ್ಷರುಗಳಾದ ರಮೇಶ್ ಭಂಡಾರಿ, ರಾಜಾ ಬೈಪಾಸ್, ಜತೆ ಕಾರ್ಯದರ್ಶಿ ಗಳಾದ ಸಿದ್ದೀಕ್ ಮೆಲ್ಕಾರ್, ಗೋಡ್ವಿನ್ ಪಿಂಟೋ, ಸಂಘಟನಾ ಕಾರ್ಯದರ್ಶಿ ಗಳಾದ ಗಣೇಶ್ ಸುವರ್ಣ, ಜಗ ದೀಶ್ ರೈ ವೇದಿಕೆಯಲ್ಲಿದ್ದರು. ಸಾನಿಧ್ಯ ವಸತಿ ಶಾಲೆ ಮತ್ತು ಜೀವಿತ್ ಬರಿಮಾರು ರವರಿಗೆ ಸಂಘದ ವತಿಯಿಂದ ಸಹಾಯಧನ ನೀಡಲಾಯಿತು. ನಿಕಟಪೂರ್ವ ಅಧ್ಯಕ್ಷ ರಾಜೇಶ್ ಸಾಲಿಯಾನ್ ಸ್ವಾಗತಿಸಿದರು. ನವೀನ್ ವಂದಿಸಿ, ಮಾಜಿ ಅಧ್ಯಕ್ಷ ಸುಧಾಕರ್ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ನಂತರ ಸಾನಿಧ್ಯ ವಸತಿ ಶಾಲಾ ಭಿನ್ನ ಸಾಮರ್ಥ್ಯದ ಮಕ್ಕಳಿಂದ ’ಅಮ್ಮ’ಪ್ರಹಸನ ಜರಗಿತು.
