ಬಂಟ್ವಾಳ:ದೇಶದಲ್ಲಿ ನಗರ ಪ್ರದೇಶಗಳ ಮಾದರಿಯಲ್ಲಿ ಗ್ರಾಮೀಣ ಪ್ರದೇಶಗಳನ್ನು ಕೂಡಾ ಅಭಿವೃದ್ಧಿ ಪಡಿಸುವುದರ ಜೊತೆಗೆ ಪ್ರತೀ ಮನೆಗೆ ಉಜ್ವಲ, ಆಯುಷ್ಮಾನ್ ಭಾರತ ಮತ್ತಿತರ ಜನಪ್ರಿಯ ಯೋಜನೆಗಳನ್ನು ತಲುಪಿಸುವ ಮೂಲಕ ಮಧ್ಯಮವರ್ಗದ ಜನರನ್ನು ಮೇಲೆತ್ತಿ ಸದೃಢ ಭಾರತ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವಿರತ ಶ್ರಮಿಸುತ್ತಿದ್ದಾರೆ ಎಂದು ಶಾಸಕ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಹೇಳಿದ್ದಾರೆ.
ಇಲ್ಲಿನ ಅರಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧೆಡೆ ಅನುಷ್ಠಾನಗೊಂಡ ಕುಡಿಯುವ ನೀರು ಮತ್ತಿತರ ಅಭಿವೃದ್ಧಿ ಕಾಮಗಾರಿಗಳಿಗೆ ಸೋವiವಾರ ಸಂಜೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ತುಂಗಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

5btl-Arala
ರೂ 50 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ:
ಇಲ್ಲಿನ ದೆಂಬುಡೆ ವಿದ್ಯುತ್ ಪರಿವರ್ತಕ ಉದ್ಘಾಟನೆ ಸಹಿತ ರೂ 6ಲಕ್ಷ ವೆಚ್ಚದ ಕುಟ್ಟಿಕಳ ನರೇಗಾ ರಸ್ತೆ, ರೂ 1.25ಲಕ್ಷ ವೆಚ್ಚದಲ್ಲಿ ಸಂಗಬೆಟ್ಟು-ತಾರಿಪಡ್ಪು ಕುಡಿಯುವ ನೀರಿನ ಟ್ಯಾಂಕ್, ರೂ 7.25ಲಕ್ಷ ವೆಚ್ಚದಲ್ಲಿ ಅರಳ ಕಲ್ಲೇರಿ ಪ್ರಾಥಮಿಕ ಶಾಲಾ ಕೊಠಡಿ ಉದ್ಘಾಟಿಸಿದರು. ಅರಳ ಗ್ರಾಮ ಪಂಚಾಯಿತಿನಲ್ಲಿ ರೂ 20ಲಕ್ಷ ವೆಚ್ಚದ ಮೇಲಂತಸ್ತಿನ ಕಟ್ಟಡ ಸಹಿತ ರೂ 5ಲಕ್ಷ ವೆಚ್ಚದ ಪಾಚಿಲೋಡಿ-ಸಂಗಬೆಟ್ಟು ಕಾಂಕ್ರೀಟು ರಸ್ತೆ, ರೂ 10ಲಕ್ಷ ವೆಚ್ಚದಲ್ಲಿ ಅರಳ ಕೋಟೆ ಕಾಂಕ್ರೀಟು ರಸ್ತೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರು.

ಇದೇ ವೇಳೆ ಅರ್ಹ 80 ಮಂದಿ ಫಲಾನುಭವಿಗಳಿಗೆ ಉಜ್ವಲ ಯೋಜನೆಯಡಿ ಉಚಿತ ಅಡುಗೆ ಅನಿಲ ಕಿಟ್, ವಿಕಲಚೇತನರಿಗೆ ಚೆಕ್, 16 ಮಂದಿಗೆ 94 ಸಿ ಹಕ್ಕುಪತ್ರ ವಿತರಿಸಿದರು.ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನ ಮತ್ತು ಅರಳ-ಕಲ್ಲೊಟ್ಟೆಗೆ ಭೇಟಿ ನೀಡಿ ಶಿಥಿಲಗೊಂಡ ಸೇತುವೆ ವೀಕ್ಷಿಸಿದರು. ತಾಲ್ಲೂಕು ಪಂಚಾಯಿತಿ ಸದಸ್ಯ ಪ್ರಭಾಕರ ಪ್ರಭು, ಗ್ರಾಮ ಪಂಚಾಯಿತಿ ಸದಸ್ಯರಾದ ಲಕ್ಷ್ಮೀಧರ ಶೆಟ್ಟಿ, ಎಂ.ಬಿ.ಆಶ್ರಫ್, ಲಕ್ಷ್ಮೀಧರ ಪೂಜಾರಿ, ರಂಜನಿ, ಜೈನಾಬ್, ಜುಲೇಕ, ಪ್ರಮುಖರಾದ ನಂದರಾಮ ರೈ, ರಂಜನ್ ಕುಮಾರ್ ಅರಳ, ಪಿಡಿಒ ಉತ್ತಮ್ ಬನ್ಸೊಡೆ, ಕಾರ್ಯದರ್ಶಿ ಉದಯ ಸಿದ್ಧಕಟ್ಟೆ, ಕಂದಾಯ ನಿರೀಕ್ಷಕ ನವೀನ ಕುಮಾರ್, ಗ್ರಾಮಕರಣಿಕ ಅಮೃತಾಂಶು ಮತ್ತಿತರರು ಇದ್ದರು.

ಗ್ರಾಮ ಪಂಚಾಯಿತಿ ಉಪಧ್ಯಕ್ಷ ಜಗದೀಶ ಆಳ್ವ ಅಗ್ಗೊಂಡೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸದಸ್ಯ ಡೊಂಬಯ ಬಿ.ಅರಳ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *