ಉಡುಪಿ; ನಗರದ ಕವಿ ಮುದ್ದಣ ಮಾರ್ಗ ಇಲ್ಲಿಯ ಶ್ರೀನಿತ್ಯಾನಂದ ಮಂದಿರ- ಮಠಕ್ಕೆ ಭಾನುವಾರ ದಿನ ಆಗಮಿಸಿದ ನಾಥ ಪಂಥ ಸಂಪ್ರದಾಯದ, ಕೇರಳ ಮೂಲದ ‘ಶ್ರೀಶ್ರೀ ಶಾಂತಿನಾಥ ತಪಸ್ವಿ ಬಾಬಾ’ ಅವರು ಗುರು ದರ್ಶನ ಮಾಡಿದರು,.ರಾತ್ರಿಯ ಪೂಜೆಯಲ್ಲಿ ಭಾಗಿಯಾದರು. ಅವರನ್ನು ಕ್ಷೇತ್ರದ ಅಧ್ಯಕ್ಷರಾದ ಎರ್ಮಾಳ್ ಶಶಿಧರ್ ಶೆಟ್ಟಿ ಅವರು ಸ್ವಾಗತಿಸಿದರು.IMG-20190203-WA0112

ಶ್ರೀ ವಾಸುದೇವಾನಂದ ಸರಸ್ವತಿ ಸ್ವಾಮೀಜಿಗಳು, ಉಪಧ್ಯಾಕ್ಷರಾದ ಶಶಿಕುಮಾರ್ ಶೆಟ್ಟಿ, ಅರ್ಚಕ ಆರೂರು ಕೃಷ್ಣಮೂರ್ತಿ ಭಟ್, ಆಶ್ರಮಸೇವಕ ತಾರಾನಾಥ್ ಮೇಸ್ತ ಶಿರೂರು, ಹಾಗೂ ಶ್ರೀನಿತ್ಯಾನಂದ ಮಂದಿರದ ಆಡಳಿತ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶ್ರೀ ಶಾಂತಿನಾಥ ಬಾಬಾ ರವರ ಜಡೆಕಟ್ಟಿದ ತಲೆಕೂದಲು 7 ಅಡಿವರೆಗೆ ಉದ್ದ ಬೆಳೆದಿರುವುದು ಭಕ್ತರ ಗಮನ ಸೆಳೆಯಿತು. ಭಾನುವಾರ ದಿನ ಮಂದಿರದಲ್ಲಿ ಮೊಕ್ಕಾಂ ಹೂಡಿದ ಶ್ರೀಗಳು ಮರುದಿನ ಬೆಳಿಗ್ಗೆ ಉತ್ತರ ಪ್ರದೇಶದ ಪ್ರಯಾಗ್ ರಾಜ್, ಇಲ್ಲಿ ನಡೆಯುವ ಪವಿತ್ರ ಕುಂಭಮೇಳದಲ್ಲಿ ಭಾಗಿಯಾಗಲು ಪ್ರಯಾಣ ಬೆಳೆಸಿದರು.

By suddi9

Leave a Reply

Your email address will not be published. Required fields are marked *