ಗುರುಪುರ :ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ)ಧೂಮಾವತಿ,ಬಂಟ ಪರಿವಾರದೈವಗಳ ಸಂಪೂರ್ಣ ನವೀಕೃತ ಶೀಲಾಮಯ ದೈವಸ್ಥಾನದಲ್ಲಿ ಭಾನುವಾರ ಬೆಳಗ್ಗೆ ಕುಡುಪು ನರಸಿಂಹತಂತ್ರಿಗಳ ನೇತೃತ್ವದಲ್ಲಿ ವೀಶೇಷ ಹೋಮ-ಹವನಗಳೊಂದಿಗೆ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಆರಂಭಗೊಂಡಿತು. ಫೆ.7ರಂದು ಬ್ರಹ್ಮಕಲಶೋತ್ಸವ ನಡೆಯಲಿದೆ.

ದೈವಸ್ಥಾನದ ತಂತ್ರಗಳಾದ ಜಿ.ಟಿಅಣ್ಣು ಹಾಗೂ ವಾಸುದೇವಭಟ್ ಉಪಸ್ಥಿತಯಲ್ಲಿ ಪೂಜೆ ನಡೆದ ಬಳಿಕ ದೈವಸ್ಥಾನದ ಆಡಳಿತ ಮೊಕ್ತೇಸರ ಗಡಿಕಾರ ಪ್ರಮೋದ್ ಕುಮಾರ್ ರೈ ಮುಂದಾಳ್ತ್ವದಲ್ಲಿ ತೋರಣ ಪೂಜೆ, ಉಗ್ರಾಣಪೂಜೆ ನೆರವೇರಿತು. ದೈವಸ್ಥಾನದ ಪ್ರಧಾನ ದೈವ ಪಾತ್ರಿಗಳಾದ ಚಂದ್ರಹಾಸ ಪೂಜಾರಿ ಮತ್ತು ತನಿಯಪ್ಪ ಪೂಜಾರಿ ಉಪಸ್ಥಿತಿಯಲ್ಲಿ ದೈವಗಳ ಭಂಡಾರದ ಮೆನೆಯಲ್ಲಿ ವಿಶೇಷ ಪ್ರಾರ್ಥನೆ ನೆರವೇರಿತು.
ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ರಾವಿರಾಜ ಶೆಟ್ಟಿ, ಪುರುಷೋತ್ತಮ ಮಲ್ಲಿ, ಕೋಶಾಧಿಕಾರಿಗಳಾದ ಪುರಂದರ ಮಲ್ಲಿ, ಯಶವಂತ ಕೋಟ್ಯಾನ್, ಸಂಘಟನಾ ಕಾರ್ಯದರ್ಶಿಗಳಾದ ಕಿಟ್ಟಣ್ಣ ರೈ, ರಾಜು ಎನ್ ಶೆಟ್ಟಿ, ಸುಧಾಕರ ಶೆಟ್ಟಿ ಹಾಗೂ ಸದಾಶಿವ ಸಾಲ್ಯಾನ್, ರವೀಂದ್ರ ಶೆಟ್ಟಿ, ಶೆಡ್ಡೆ ಮಂಜುನಾಥ ಭಂಡಾರಿ, ಉಮೇಶ ಮುಂಡ,ಬೆಳ್ಳಿಬೆಟ್ಟುಗುತ್ತು ಪ್ರವೀಣ್ ಕುಮಾರ್ ಶೆಟ್ಟಿ, ದಾಮೋದರ ನಿಸರ್ಗ, ಸದಾನಂದ ಗಾಂಭೀರ್, ಪ್ರೇಮನಾಥ ಮಾರ್ಲ, ಚಂದ್ರಹಾಸ ಕಾವ, ಸತೀಶ್ ಕಾವ, ನಳಿನಿ ಶೆಟ್ಟಿ, ರವಿ ಶಟ್ಟಿ ಕತಾರ್, ಯತಿರಾಜ ಶೆಟ್ಟಿ, ಸುದರ್ಶನ ಶೆಟ್ಟಿ ಪೆರ್ಮಂಕಿ ,ಸಚಿನ್ ಅಡಪ ಮೊದಲಾದವರಿದ್ದರು.
ಹೊರೆಕಾಣಿಕೆ ಶೋಭಾ ಯಾತ್ರೆ:

ಬಳಿಕ ಸಾವಿರಾರು ಮಂದಿ ಭಕ್ತರಿಗೆ ಮಹಾ-ಅನ್ನ ಸಂತರ್ಪಣೆ ಜರುಗಿತು. ಸಂಜೆ ಗುರುಪುರ ಪೇಟೆಯ ಜಂಗಮ ಮಠದಲ್ಲಿ ಸಂಗ್ರಹಿಸಲಾದ ಊರ ಹಾಗೂ ಪರವೂರ ಭಕ್ತರ ಸೇವಾ ರೂಪದ ಭವ್ಯ ಹೊರೆಕಾಣಿಕೆ ಭವ್ಯ ಮೆರವಣಿಯೊಂದಿಗೆ ದೈವಸ್ಥಾನಕ್ಕೆ ಸಾಗಿ ಬಂತು. ಈ ಸಂದರ್ಭದಲ್ಲಿ ನೂರಾರು ವಾಹನಗಳು ಇದ್ದವು. ಮೆರವಣಿಗೆಯಲ್ಲಿ ಗುರುಪುರ ಜಂಗಮ ಮಠದ ರುದ್ರಮುನಿ ಸ್ವಾಮೀಜಿ, ವಿಷ್ಣು ಕಾಮತ್, ರಾಜೇಶ್, ಪದ್ಮಾನಾಭ ಶೆಟ್ಟಿ ,ಯಶವಂತ ಶೆಟ್ಟಿ, ದೇವ್ ದಾಸ್ ಅಂಚನ್ ಸಹಿತದೈವಸ್ಥಾನದ ಹಲವು ಗಣ್ಯರು ಇದ್ದರು.








