ಬಂಟ್ವಾಳ:ತಾಲೂಕಿನ ರಾಯಿ ಶ್ರೀ ಸತ್ಯನಾರಾಯಣ ಸೇವಾ ಸಮಿತಿ ವತಿಯಿಂದ ಪ್ರತೀ ವರ್ಷದಂತೆ ಇದೇ 6ರಂದು ಬೆಳಿಗ್ಗೆ ಇಲ್ಲಿನ ಅಶ್ವತ್ಥ ಕಟ್ಟೆಯಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಅದೇ ದಿನ ರಾತ್ರಿ ಇಲ್ಲಿನ ಕೈತ್ರೋಡಿ ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿ ವತಿಯಿಂದ ಕೈತ್ರೋಡಿ ಕ್ವಾರ್ಟರ್ಸ್ ಮೈದಾನದಲ್ಲಿ ಕಟೀಲು ಮೇಳದವರಿಂದ 26ನೇ ವರ್ಷದ ‘ಅಶ್ವಮೇಧ-ಅಶ್ವಮೇಧ-ಅಶ್ವಮೇಧ’ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.
