ವಿಟ್ಲ:ವೆಸ್ಟನ್ ಇನ್‍ಸ್ಟಿಟ್ಯೂಟ್ ಆಫ್ ಮಾರ್ಷಲ್ ಆಟ್ರ್ಸ್, 11ನೇ ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಪಂದ್ಯಾಟದಲ್ಲಿ ಕಟಾ, ಕುಮಿಟೆ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿಟ್ಲದ ವಿದ್ಯಾರ್ಥಿಗಳು ಕಟಾ, ಕುಮಿಟೆ ವಿಭಾಗದಲ್ಲಿ ಪ್ರಥಮ , ದ್ವಿತೀಯ, ತೃತೀಯ ಬಹುಮಾನಗಳನ್ನು ಪಡೆದಿರುತ್ತಾರೆ.SHV_9212

ಪ್ರಜ್ಞಾಕುಮಾರಿ 8ನೇ ತರಗತಿ ಸಿಂಗಲ್ ಕಟಾದಲ್ಲಿ ಪ್ರಥಮ, ಗ್ರೂಪ್ ಕಟಾದಲ್ಲಿ ದ್ವಿತೀಯ ಹಾಗೂ ಕುಮಿಟೆಯಲ್ಲಿ ಪ್ರಥಮ ಸ್ಥಾನ. ಲಿಖಿತ್ 8ನೇ ತರಗತಿ ಕುಮಿಟೆಯಲ್ಲಿ ಪ್ರಥಮ ಹಾಗೂ ಸಿಂಗಲ್ ಕಟಾದಲ್ಲಿ ಪ್ರಥಮ ಸ್ಥಾನ. ಸುಧೀನ್ ಎನ್.ಆಚಾರ್ಯ 8ನೇ ತರಗತಿ ಸಿಂಗಲ್ ಕಟಾದಲ್ಲಿ ಪ್ರಥಮ ಹಾಗೂ ಗ್ರೂಪ್ ಕಟಾದಲ್ಲಿ ದ್ವಿತೀಯ ಸ್ಥಾನ. ಸ್ವಸ್ತಿ ಕೃಷ್ಣ ಪಿ 7ನೇ ತರಗತಿ ಸಿಂಗಲ್ ಕಟಾದಲ್ಲಿ ಪ್ರಥಮ ಹಾಗೂ ಗ್ರೂಪ್ ಕಟಾದಲ್ಲಿ ದ್ವಿತೀಯ ಸ್ಥಾನ.

ಸೌಜನ್ಯ 4ನೇ ತರಗತಿ ಸಿಂಗಲ್ ಕಟಾದಲ್ಲಿ ದ್ವಿತೀಯ, ಗ್ರೂಪ್ ಕಟಾದಲ್ಲಿ ದ್ವಿತೀಯ ಹಾಗೂ ಕುಮಿಟೆಯಲ್ಲಿ ತೃತೀಯ ಸ್ಥಾನ. ರಿತ್ವಿಕ್ 3ನೇ ತರಗತಿ ಸಿಂಗಲ್ ಕಟಾದಲ್ಲಿ ತೃತೀಯ ಹಾಗೂ ಗ್ರೂಪ್ ಕಟಾದಲ್ಲಿ ದ್ವಿತೀಯ ಸ್ಥಾನ. ತ್ರಿಶಾ ಪಿ 3ನೇ ತರಗತಿ ಗ್ರೂಪ್ ಕಟಾದಲ್ಲಿ ಪ್ರಥಮ ಹಾಗೂ ಸಿಂಗಲ್ ಕಟಾದಲ್ಲಿ ಪ್ರಥಮ ಸ್ಥಾನ. ಪ್ರಥಮ್ ಎಸ್ 2ನೇ ತರಗತಿ ಗ್ರೂಪ್ ಕಟಾದಲ್ಲಿ ತೃತೀಯ ಹಾಗೂ ಸಿಂಗಲ್ ಕಟಾದಲ್ಲಿ ದ್ವತೀಯ ಸ್ಥಾನ.

ಜಿ.ಎಮ್.ಅಕ್ಷರಶ್ಯಾಮ ಭಟ್ 2ನೇ ತರಗತಿ ಗ್ರೂಪ್ ಕಟಾದಲ್ಲಿ ತೃತೀಯ ಸ್ಥಾನ ಹಾಗೂ ಸಿಂಗಲ್ ಕಟಾದಲ್ಲಿ ಪ್ರಥಮ ಸ್ಥಾನ. ಪ್ರಣಮ್ ಎಸ್. 1ನೇ ತರಗತಿ ಗ್ರೂಪ್ ಕಟಾದಲ್ಲಿ ತೃತೀಯ ಹಾಗೂ ಸಿಂಗಲ್ ಕಟಾದಲ್ಲಿ ತೃತೀಯ ಸ್ಥಾನಗಳಿಸಿರುತ್ತಾರೆ. ಕರಾಟೆ ಶಿಕ್ಷಕ ಮಾಧವ ಅಳಿಕೆ ಇವರಿಂದ ತರಬೇತಿ ಪಡೆದಿರುತ್ತಾರೆ.

By suddi9

Leave a Reply

Your email address will not be published. Required fields are marked *