ಕೈಕಂಬ: ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಗುರುಪುರ ಹೋಬಳಿ ಮಟ್ಟದ ಜನಸ್ಪಂದನ ಕಾರ್ಯಕ್ರಮ ಮಂಗಳವಾರ ಎಡಪದವು ಶ್ರೀ ರಾಮ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶಾಸಕ ಡಾ. ವೈ.ಭರತ್ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಗುರುಪುರ ಹೋಬಳಿ ಮಟ್ಟದಲ್ಲಿ ಜನಸ್ಪಂದನ ಕಾರ್ಯಕ್ರಮದಲ್ಲಿ ಒಂದೇ ಸೂರಿನಡಿ ಜನತೆಗೆ ಸೌಲಭ್ಯವನ್ನು ಒದಗಿಸಬೇಕೆಂದು ಕಾರ್ಯಕ್ರವನ್ನು ಹಮ್ಮಿಕೊಂಡಿದ್ದು. ದ.ಕ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಮಂಗಳೂರು ತಹಶೀಲ್ದಾರ್, ಆರೋಗ್ಯ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ಸರ್ವ ಅಧಿಕಾರಿಗಳ ಸಹಕಾರದಿಂದ ಯಶಸ್ವಿಯಾಗಿದೆ. ಎಂಸಿಎಫ್ ಕಂಪನಿಯು ಅಂಗವಿಕಲರಿಗೆ ವೀಲ್‍ಚೇಯರ್, ವಾಕರ್, ಸ್ಟಿಕ್ ಮತ್ತಿತರ ಪರಿಕರ ನೀಡಿ ಸಾಮಾಜಿಕ ಜವಾಬ್ದಾರಿ ಅಡಿ ಸೌಲಭ್ಯ ಒದಗಿಸಿದೆ ಎಂದರು.2901malali1

ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಸುರತ್ಕಲ್ ಹೋಬಳಿ ಮಟ್ಟದಲ್ಲಿ ಎರಡನೇ ಜನಸ್ಪಂದನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದರು. ಜಿ.ಪಂ. ಸದಸ್ಯ ಯು.ಪಿ ಇಬ್ರಾಹಿಂ ಮಾತನಾಡಿ ಗುರುಪುರ ಕೈಕಂಬದ ನಾಡಕಚೇರಿಗೆ ನೂತನ ಕಟ್ಟಡ ಒದಗಿಸಲು ಶಾಸಕರಲ್ಲಿ ಮನವಿ ಮಾಡಿಕೊಂಡರು. ಜಿಲ್ಲಾ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಜನಾರ್ಧನ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು, ಎಂಸಿಎಫ್ ಅಧಿಕಾರಿ ಡಾ.ಯೋಗೀಶ್ , ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಅಧಿಕಾರಿಗಳು, ತಾಲೂಕು ಅಧಿಕಾರಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷರು, ಪಿಡಿಒ ಅಧಿಕಾರಿಗಳು ಉಪಸ್ಥಿತರಿದ್ದರು. ಕರ್ನಾಟಕ ಸರಕಾರ ದ.ಕ ಪಂ. ಮಂಗಳೂರು ,ತಾ.ಪಂ. ಗುರುಪುರ ಹೋಬಳಿಯ ಗ್ರಾಮಪಂಚಾಯಿತಿಗಳು ಸಹಕಾರ ನೀಡಿದ್ದವು.

2901malali2

ಸುಮಾರು 2500ಕ್ಕೂ ಮಿಕ್ಕಿ ಹೋಬಳಿಯ ಜನತೆ ವಿವಿಧ ಸೌಲಭ್ಯಗಳನ್ನು ಪಡೆಯಲು ಜನಸ್ಪಂದನದಲ್ಲಿ ಭಾಗವಹಿಸಿದ್ದರು. ಇನ್ನೂ ಅನೇಕ ಮಂದಿ ಕೃಷಿ, ಆರೋಗ್ಯ, ಮತ್ತಿತರ ಸೌಲಭ್ಯಗಳ ಮಾಹಿತಿ ಪಡೆದರು. ಅಂಗ ವಿಕಲರ ಓಡಾಟಕ್ಕಾಗಿ ವೀಲ್ ಚೇಯರ್ ಸೌಲಭ್ಯ ನೀಡಲಾಗಿತ್ತು. ಎಲ್ಲಾ ವಿಭಾಗದ ಅಧಿಕಾರಿಗಳು, ಅಂಗನವಾಡಿ, ಆಶಾ ಕಾರ್ಯಕರ್ತರು, ಗ್ರಾಮ ಪಂಚಾಯತ್ ಅಧಿಕಾರಿಗಳು ಸಹಿತ ಸಾರ್ವಜನಿಕರಿಂದ ಅರ್ಜಿ ಪಡೆದು ವಿಲೇವಾರಿ ಮಾಡಿದರು. ಕಾರ್ಯಕ್ರಮದಲ್ಲಿ 600 ಹಕ್ಕು ಪತ್ರ, 300 ಮಾಸಾಶನ, 25 ವೀಲ್‍ಚೇಯರ್, 28 ಅಲೆಮಾರಿ ಕುಟುಂಬಗಳಿಗೆ ಹಕ್ಕು ಪತ್ರ, ಉಜ್ವಲ ಯೋಜನೆಯಡಿ 300 ಮಂದಿಗೆ ಗ್ಯಾಸ್ ಕಿಟ್ ವಿತರಣೆ, 161 ಮಂದಿ ಅಂಗವಿಕಲರಿಗೆ ಪ್ರಮಾಣ ಪತ್ರ ವಿತರಣೆ ನಡೆಯಿತು.2901malali3
ಸರಕಾರದ ಎಲ್ಲ ಇಲಾಖೆಗಳಿಂದ ಸಾರ್ವಜನಿಕರ ಅರ್ಜಿ ಸ್ವೀಕಾರ, ಫಲಾನುಭವಿಗಳಿಗೆ ಮಾಹಿತಿ ಆದೇಶ ಪತ್ರಗಳ ವಿತರಣೆ, ಕಂದಾಯ ಇಲಾಖೆಯಿಂದ ಹಕ್ಕು ಪತ್ರ ವಿತರಣೆ, ಮಾಹಿತಿ ನೀಡಿಕೆ, ಆರೋಗ್ಯ ಇಲಾಖೆಯಿಂದ ಅಂಗವಿಕಲರಿಗೆ ಸವಲತ್ತು ವಿತರಣೆ ಗುರುತು ಚೀಟಿ ವಿತರಣೆ ,ಮಾಹಿತಿ ನೀಡಿಕೆ,ಕೃಷಿ ಇಲಾಖೆಯಿಂದ ಸವಲತ್ತುಗಳ ವಿತರಣೆ, ಮಾಹಿತಿ ನೀಡಿಕೆ, ಪಂಚಾಯಿತಿಗಳಿಂದ ವಿವಿಧ ಸೌಲಭ್ಯಗಳ ಅರ್ಜಿ ಸ್ವೀಕಾರ, ಫಲಾನುಭವಿಗಳಿಗೆ ಮಾಹಿತಿ ಸೂಕ್ತ ಮಾರ್ಗದರ್ಶನ ನೀಡಲಾಯಿತು. ತಾಪಂ ಕಾರ್ಯನಿರ್ವಣಾಧಿಕಾರಿ ರಘು ನೋಡಲ್ ಅಧಿಕಾರಿಯಾಗಿದ್ದರು.
* ಉತ್ತಮ ಸ್ಪಂದನೆ
ಜನಸ್ಪಂದನ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು ಯಶಸ್ವಿಯಾಗಿದೆ. ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲರಿಗೂ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಗಂಜಿಮಠ ಅನುರಾಧ ಆನ್‍ಲೈನ್ ಸೊಲ್ಯುಷನ್ ಗಂಜಿಮಠ ಇದರ ಮಾಲಕರಾದ ಹರೀಶ್ ಕಾಮತ್ ಅವರು ಸ್ಥಳದಲ್ಲೇ ಸಂಪೂರ್ಣ ಉಚಿತ ಜೆರಾಕ್ಸ್ ವ್ಯವಸ್ಥೆ ಕಲ್ಪಿಸಿದರು. ಛಾಯಾಚಿತ್ರ ಸೇರಿ ಹಲವು ವ್ಯವಸ್ಥೆಯೂ ಇತ್ತು.

By suddi9

Leave a Reply

Your email address will not be published. Required fields are marked *