ಪೊಳಲಿ :ಇತಿಹಾಶ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಸಾಂಪ್ರದಾಯದಂತೆ ಬಿಲ್ಲವ ಸಮಾಜವು ಸೇವಾ ರೂಪವಾಗಿ ನೀಡಿದ ಕೊಡಿಮರವನ್ನು(ಧ್ವಜಸ್ತಂಭ) ಸೋಮವಾರ(ಜ. 21) ಬೆಳಿಗ್ಗೆ 8:30ಕ್ಕೆ ದೇವಳದ ಆವರಣದಲ್ಲಿ ವಾಸ್ತು ಶಿಲ್ಪಿ ಮಹೇಶ್ ಮುನಿಯಂಗಳರವರ ನೇತೃತ್ವದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಾವಿರ ಸೀಮೆಯ ಭಕ್ತಾದಿಗಳು ಹಾಜರಿದ್ದರು.
ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಕಂಚಿನ ಕಲಾಕಾರ ಶ್ರೀಧರ ಆಚಾರ್ಯರ ಮುಂದಾಳತ್ವದಲ್ಲಿ ಕೊಡಿಮರಕ್ಕೆ ಕಂಚಿನ ಹೊದಿಕೆ ಅಳವಡಿಕೆ ಕೆಲಸ ಆರಂಭಗೊಂಡಿತ್ತು. ಧ್ವಜಸ್ತಂಭದ ಆಧಾರಶಿಲೆ, ಕೊಳವೆಕಲ್ಲು, ಧ್ವಜಸ್ತಂಭ ಪೀಠ ಡಿ. 28ರಂದು ಕಾರ್ಕಳದಿಂದ ಶ್ರೀ ಕ್ಷೇತ್ರ ಪೊಳಲಿಗೆ ತರಲಾಗಿತ್ತು.
ಧಾರು ಶಿಲ್ಪಿ ಹರೇಕಳ ಬಾಲಕೃಷ್ಣ ಆಚಾರ್ಯರ ನೇತೃತ್ವದಲ್ಲಿ ಮರದ ಕೆತ್ತನೆ ಕೆಲಸ ಮುಗಿದ ಬಳಿಕ 8,000 ಲೀಟರ್ ಶುದ್ಧ ಎಳ್ಳೆಣ್ಣೆಯಲ್ಲಿ ಅದ್ದಿಟ್ಟ ಕೊಡಿಮರ ಹೊರತೆಗೆಯಲಾಗಿತ್ತು. ಬಳಿಕ ಕೊಡಿಮರ ಪ್ರತಿಷ್ಠಾಪನೆಗೆ ಪೂರ್ವದಲ್ಲಿ ಕ್ರಮಶಃ ಪೂಜಾ ವಿಧಿ ನಡೆಸಲಾಗಿದೆ. ಕಾರ್ಕಳ ಕೃಷ್ಣ ಆಚಾರ್ಯರ ನೇತೃತ್ವದ ನುರಿತ ಶಿಲ್ಪಿಗಳು ಕೊಡಿಮರಕ್ಕೆ ಅಗತ್ಯವಿರುವ ಧ್ವಜಸ್ತಂಭದ ಆಧಾರ ಶಿಲೆ, ಕೊಳವೆಕಲ್ಲು(ದಂಬೆಕಲ್ಲು), ಧ್ವಜಸ್ತಂಭದ ಪೀಠದ ಶಿಲಾಕೃತಿ ಕೆಲಸ ಪೂರ್ಣಗೊಳಿಸಿದ್ದಾರೆ.
ಕೊಡಿಮರಕ್ಕೆ ಅಂದಾಜು 2,500 ಕಿಲೋ ಕಂಚಿನ ಹೊದಿಕೆ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದೆ. ಕೇರಳದ ಪ್ರಸಿದ್ಧ ಶಿಲ್ಪಿ ವಿ ಪಿ ಪ್ರಕಾಶ್ ನೇತೃತ್ವದ ಕಲಾಕಾರರು ಧ್ವಜಸ್ತಂಭದ ತುತ್ತತುದಿಗೆ ಪಂಚಲೋಹದ ಚಿನ್ನದ ಲೇಪನವಿರುವ ನವಿಲಿನ ಕಲಾಕೃತಿ ರಚಿಸಿದ್ದಾರೆ.
ಐದಡಿ ಎತ್ತರ ಮತ್ತು ಮೂರಡಿ ಅಗಲದ ನವಿಲಿನ ಹುಬ್ಬು ಚಿತ್ರವಿರುವ ಬೆಳ್ಳಿಯ ಗರುಡಧ್ವಜದ ಕೆಲಸ ಕಾರ್ಯಗಳು ತುಪ್ಪೆಕಲ್ಲಿನ ದನಂಜಯ ಆಚಾರ್ಯ ಕಾರ್ಯಾಗಾರದಲ್ಲಿ ನಡೆಯುತ್ತಿದೆ. ಸುಮಾರು 66 ಮುಕ್ಕಾಲು ಅಡಿ ಎತ್ತರದ ಕೊಡಿಮರವು ಜಿಲ್ಲೆಯಲ್ಲೇ ಅತಿ ಎತ್ತರದ ಧ್ವಜಸ್ತಂಭವಾಗಿ ನಿಂತಿದೆ. ನಿನ್ನೆ ಸಂಜೆ ದೇವಸ್ಥಾನದ ರಾಜಾಂಗಣಕ್ಕೆ ಗಜಲಕ್ಷ್ಮೀ ಕ್ರೇನ್ ಮೂಲಕ ಕೊಡಿಮರ ತರಲಾಯಿತು.
ಕೊಡಿಮರ ಪ್ರತಿಷ್ಠಾಪನೆ ವೇಳೆ ದೇವಳದ ತಂತ್ರಿಗಳಾದ ಸುಬ್ರಹ್ಮಣ್ಯ ತಂತ್ರಿ, ವೆಂಕಟೇಶ ತಂತ್ರಿ, ಅರ್ಚಕರಾದ ಮಾಧವ ಭಟ್, ನಾರಾಯಣ ಭಟ್, ಕೆ. ರಾಮ ಭಟ್, ಪರಮೇಶ್ವರ ಭಟ್, ವಿಷ್ಣುಮೂರ್ತಿ ನಟ್ಟೋಜ ಚೇರ ಹಿಮಕರ ರಾವ್, ಮಾಧವ ಮಯ್ಯ, ದೇವಳದ ಆಡಳಿತ ಮೊಕ್ತೇಸರ ಅಮ್ಮುಂಜೆಗುತ್ತು ಡಾ. ಮಂಜಯ್ಯ ಶೆಟ್ಟಿ, ಮೊಕ್ತೇಸರರಾದ ತಾರನಾಥ ಆಳ್ವ, ಚೇರಸೂರ್ಯನಾರಾಯಣರಾವ್,ಕಾರ್ಯನಿರ್ವಹಣಾಧಿಕಾರಿ ಪ್ರವೀಣ್,ರಾಜೇಶ ನಾಯಕ್ ಉಳಿಪಾಡಿಗುತ್ತು, ರಮಾನಾಥ ರೈ, ನಾಗರಾಜ ಶೆಟ್ಟಿ, ಚಂದ್ರಪ್ರಕಾಶ್ ಶೆಟ್ಟಿ, ಬೇಬಿ ಕುಂದರ್, ಕೃಷ್ಣರಾಜ್ ಮಾರ್ಲ, ಕೃಷ್ಣ ಕುಮಾರ್ ಪೂಂಜ, ವಿದ್ಯಾಚರಣ್ ಶೆಟ್ಟಿ, ಸೋಮಶೇಖರ್ ಶೆಟ್ಟಿ, ಸುಬ್ರಾಯ ಕಾರಂತ, ಹರೀಶ್ ಶೆಟ್ಟಿ ಏತಮೊಗರುಗುತ್ತು, ಸಂಪತ್ ಕುಮಾರ್ ಶೆಟ್ಟಿ, ವೆಂಕಟೇಶ ನಾವಡ, ಚಂದ್ರಶೇಖರ ಭಂಡಾರಿ, ಎಂಜಿನೀಯರ್ ರಿತೇಶ್ ಮತ್ತು ಗಿತೇಶ್ ಹಾಗೂ ನೂತನ ಧ್ವಜಸ್ತಂಭ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷ ರಾಮದಾಸ ಕೋಟ್ಯಾನ್ ಮಜಿಲಗುತ್ತು, ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಪಚಿನಡ್ಕ, ಪುರುಷ ಎನ್ ಸಾಲ್ಯಾನ್, ಬಳ್ಳಿ ಚಂದ್ರಶೇಖರ, ಗೋಪಾಲಕೃಷ್ಣ ಕೈಕಂಬ, ಉಮೇಶ್ ಪೂಜಾರಿ ಬಾರಿಂಜ, ಜಯಾನಂದ ಅಂಚನ್, ನಾರಾಯಣ ಎಂ ಅಮ್ಮುಂಜೆ, ರಾಜು ಕೋಟ್ಯಾನ್, ಯಶವಂತ ಕೋಟ್ಯಾನ್, ಭುವನೇಶ್ ಪಚಿನಡ್ಕ, ಚಂದಪ್ಪ ಅಂಚನ್ ಮಜಿಲಗುತ್ತು, ಗಿರಿಧರ ಶೆಟ್ಟಿ, ಉದ್ಯಮಿ ಗಂಗಾಧರ ಪೂಜಾರಿ ಕೊಪ್ಪಲ, ಗಣೇಶ ಪೂಜಾರಿ, ಸದಾಶಿವ ಕರ್ಕೇರ ಕಾಜಿಲ, ದೇವಪ್ಪ ಪೂಜಾರಿ, ರಾಮಪ್ಪ ಪೂಜಾರಿ,ಪ್ರಶಾಂತ್ ವಿಮಲಕೋಡಿ,ಲೋಕೇಶ್ ಭರಣಿ,ಚರಣ್, ಸಂಜೀವ ಪೂಜಾರಿ, ರಮೇಶ್ , ನವೀನ್, ದೇವುದಾಸ್, ನಾರಾಯಣ ಪೂಜಾರಿ ಮಳಲಿ ,ಗಣೇಶ್ ಪೂಜಾರಿ, ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.





