ಕ್ರೀಡೆಯು ಮನುಕುಲದ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ಅಗತ್ಯವಾಗಿದೆ. ನಮ್ಮ ದೈನಂದಿನ ನಿಬಿಡ ಜೀವನ ಶೈಲಿಯಲ್ಲಿ ಉತ್ತಮ ಆರೋಗ್ಯವನ್ನು ಕಾಪಾಡಲು ವ್ಯಾಯಾಮದ ಅವಶ್ಯಕತೆ ನಮಗೆಲ್ಲರಿಗೂ ಇದೆ, ಕ್ರೀಡೆ ವಿವಿಧ ದೇಶಗಳ ನಡುವಿನ ಸಂಪರ್ಕ ಸೇತುವೆಯಾಗಿದೆ ಎಂದು ಎಸ್.ಡಿ.ಎಂ ಕೈಗಾರಿಕಾ ತರಬೇತಿ ಸಂಸ್ಥೆ ಮಂಗಳಜ್ಯೋತಿ, ವಾಮಂಜೂರು ಇಲ್ಲಿನ ವಾರ್ಷಿಕ ಕ್ರೀಡಾಕೂಟ-2018 ಉದ್ಘಾಟಿಸಿ ಮಾತನಾಡಿದ ಶ್ರೀಯುತ ದಿನೇಶ ಆಚಾರ್ಯ ಮಾರುತಿ ಹೈಟೆಕ್ ಜಿಮ್, ಮಹಾಲಕ್ಷ್ಮೀ ಕಾಂಪ್ಲೆಕ್ಸ್ ಮಂಗಳೂರು ನುಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಆಡಳಿತಾಧಿಕಾರಿಯವರಾದ ಶ್ರೀಯತ ಗಣೇಶ ಭಟ್.ವಿ ಇವರು ಕೀಡಾಪಟುಗಳಿಗೆ ಸರಕಾರದಿಂದ ದೊರೆಯುವ ಸವಲತ್ತುಗಳನ್ನು ಸದುಪಯೋಗಿಸಬೇಕು ಹಾಗೂ ಮುಂದಿನ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ತಮ್ಮನ್ನು ತೊಡಗಿಸಿ ಹೆಚ್ಚಿನ ಪದಕಗಳನ್ನು ಗಳಿಸುವ ವಿಪುಲ ಅವಕಾಶಗಳನ್ನು ಬಲಸಿಕೊಳ್ಳಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಎಸ್ ಡಿ ಎಂ ವiಂಗಳಜ್ಯೋತಿ ಪ್ರೌಢ ಶಾಲಾ ಮುಖ್ಯಸ್ಥರಾದ ರಮೇಶ್ ಆಚಾರ್, ಪ್ರಾಥಮಿಕ ಶಾಲೆಯ ಮುಖ್ಯಸ್ಥರಾದ ಶ್ರೀಮತೀ ಮಾರ್ಯೆಟ್ ಮಸ್ಕರೇನಸ್, ಹಿರಿಯ ತರಬೇತಿ ಅಧಿಕಾರಿ ಶ್ರೀಮತೀ ಫ್ಲಾವಿಯಾ ಡಿ ಸೋಜಾ, ದೈಹಿಕ ಶಿಕ್ಷಣ ಶಿಕ್ಷಕರಾದ ಶೇಖರ್ ಕಡ್ತಲ ಉಪಸ್ಥಿತರಿದ್ದರು. ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಯುತ ನರೇಂದ್ರ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಕುಮಾರಿ ಸುಪ್ರಭಾ ಅವರು ಧನ್ಯವಾದಗೈದರು ಹಾಗೂ ಐಟಿಐ ತರಬೇತಿ ಅಧಿಕಾರಿ ಕುಮಾರಿ ಪ್ರಿಯಾ ಅವರು ಕಾgiರ್Àುಕ್ರಮವನ್ನು ನಿರೂಪಿಸಿದರು.
