ಬಾಳ್ತಿಲ ಬಸದಿಯಲ್ಲಿ ಮಿಲನ್ ಅಧ್ಯಕ್ಷರಾದ ವೀರ್ ಬಿೃಜೇಶ್ ಜೈನ್ ಬಾಳ್ತಿಲಬೀಡು ಇವರ ಅಧ್ಯಕ್ಷತೆಯಲ್ಲಿ ‘ಜಿನಭಜನೆ – ಅಭಿನಂದನೆ’ ಎಂಬ ವೈಶಿಷ್ಟಪೂರ್ಣ ಕಾರ್ಯಕ್ರಮ ಜ 13ಆದಿತ್ಯವಾರ ಜರುಗಿತು. ಈ ಸಂದರ್ಭದಲ್ಲಿ ಭಾರತೀಯ ಜೈನ್ ಮಿಲನ್ ವಲಯ-8 ಮಂಗಳೂರು ವಿಭಾಗದಲ್ಲಿ ಜಿನಭಜನೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 46 ತಂಡಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದ ಪದ್ಮಶ್ರೀ ಜಿನಭಜನಾ ತಂಡ – ಜೈನ್ ಮಿಲನ್ ಬಜೆಗೋಳಿ ಇವರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಸದ್ರಿ ಸ್ಪರ್ಧೆಯಲ್ಲಿ ಭಾಗವಹಿಸಿದ ಪಾಣೆಮಂಗಳೂರು ತಂಡ ಮತ್ತು ಸಿದ್ದಕಟ್ಟೆ ತಂಡ ಹಾಗೂ ಬಜೆಗೋಳಿ ತಂಡದವರಿಂದ ವಿವಿಧ ಜಿನಭಜನೆಯನ್ನು ಹಾಡುವುದರ ಮೂಲಕ ವೈಶಿಷ್ಟಪೂರ್ಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ಜೈನ್ ಮಿಲನ್ ಮಾಜಿ ಅಧ್ಯಕ್ಷ ವೀರ್ ಪಿ.ಕೆ.ಯಶೋಧರ್ ಇವರು ಭಾವ ಪೂರ್ಣ ಭಜನೆಯನ್ನು ಹಾಡುವುದರ ಮೂಲಕ ಸಭೆಯ ಮೆರುಗನ್ನು ಹೆಚ್ಚಿಸಿದರು.

IMG-Jinabhajaneಇದೇ ಸಂದರ್ಭದಲ್ಲಿ ಇತ್ತೀಚೆಗೆ ಭಾರತೀಯ ಜೈನ್ ವಲಯ-8 ರ ಮಂಗಳೂರು ವಿಭಾಗದ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ವೀರ್ ಸುದರ್ಶನ್ ಜೈನ್ ಪಂಜಿಕಲ್ಲು ಹಾಗೂ ಕಾರ್ಯದರ್ಶಿಯಾಗಿ ಮರು ಆಯ್ಕೆಯಾದ ವೀರ್ ಸುಭಾಶ್ಚಂದ್ರ ಜೈನ್ ಇವರುಗಳನ್ನು ಅಭಿನಂದಿಸಿ ಕ್ರಮವಾಗಿ ವೀರ್ ಹರ್ಷರಾಜ್ ಬಲ್ಲಾಳ್ ಹಾಗೂ ವೀರ್ ಡಾ| ಸುದೀಪ್ ಅಭಿನಂದನಾ ಮಾತುಗಳನ್ನು ನುಡಿದರು. ವೇದಿಕೆಯಲ್ಲಿ ಹಿರಿಯರಾದ ವೀರ್ ಅರ್ಕಕೀರ್ತಿ ಇಂದ್ರ ಸಿದ್ದಕಟ್ಟೆ, ವೀರ್ ಭಗವಾನ್‍ದಾಸ್ ಬಿ.ಸಿ.ರೋಡ್ ಮತ್ತು ಕಾರ್ಯದರ್ಶಿ ವೀರಾಂಗನಾ ಗೀತಾ ಜಿನಚಂದ್ರ ಉಪಸ್ಥಿತರಿದ್ದರು.
ಮಿಲನ್ ಅಧ್ಯಕ್ಷ ವೀರ್ ಬಿೃಜೇಶ್ ಜೈನ್ ಪ್ರಾಸ್ತವಿಸಿ ಸ್ವಾಗತಿಸಿದರು, ಕೋಶಾಧಿಕಾರಿ ವೀರ್ ಚಂದ್ರಕಾಂತ್ ಜೈನ್ ವಂದಿಸಿದರು ಹಾಗೂ ವೀರ್ ಉದಯಕುಮಾರ್ ಮಧ್ವ ಇವರು ವಂದಿಸಿದರು.

By suddi9

Leave a Reply

Your email address will not be published. Required fields are marked *