ಪೊಳಲಿ: ಪೊಳಲಿ ಸಮೀಪದ ಸೂರ್ಲ ಮಣಿಕಂಠಪುರದ ಶ್ರೀ ಶಾಸ್ತ ನಿವಾಸದ ಮಕರ ಸಂಕ್ರಾಂತಿಯ ಪ್ರಯುಕ್ತ ವಿಶೇಷ ಪೂಜೆ ನಡೆಯಿತು. ಬೆಳಿಗ್ಗೆ ನಾಗತಂಬಿಲ, ಲಕ್ಷ್ಮೀಸತ್ಯನಾರಾಯಣ ಪೂಜೆ ಕಾರ್ಕಳ ಪ್ರಸಾದ್ ಭಟ್ ನೆರವೇರಿಸಿದರು.
ಮಧ್ಯಾಹ್ನ ರಾಮಕೃಷ್ಣ ಪೂಜೆ, ಭಜನೆ, ಸತ್ಸಂಗ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸತ್ಸಂಗವನ್ನು ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಹಾಗೂ ಅವರ ಶಿಷ್ಯವರ್ಗದವರು ನಡೆಸಿಕೊಟ್ಟರು ಈ ಸಂದರ್ಭದಲ್ಲಿ ಸ್ವಾಮಿ ಪ್ರಣವಾನಂದಜೀ ಉಪಸ್ಥಿತರಿದ್ದರು.. ಮಣಿಕಂಠಭಜನಾ ಮಂದಿರದಲ್ಲಿ ಸಂಜೆ 640.ರಿಂದ ಮಕರ ಉತ್ಸವ ನಡೆಯಿತು.

