ಎಡಪದವು: ನಮ್ಮ ಪರಿಸರದಲ್ಲಿ ಪಕ್ಷಿಗಳಿಗೂ ಕೂಡ ಬದುಕುವ ಹಕ್ಕಿದೆ. ಅವುಗಳು ಆಹಾರ ಮತ್ತು ನೀರಿನ ಕೊರತೆಯಿಂದ ವಲಸೆ ಹೋಗುವುದನ್ನು ತಪ್ಪಿಸಲು ಬೇಸಿಗೆ ಕಾಲದಲ್ಲಿ ನೀರು ಮತ್ತು ಆಹಾರವನ್ನು ಅವುಗಳಿಗೆ ನೀಡಬೇಕು ಎಂದು ಗುಬ್ಬಚ್ಚಿಗೂಡು ಜಾಗೃತಿ ಕಾರ್ಯಾಗಾರದ ಸಂಚಾಲಕಿ ರಮ್ಯಾ ನಿತ್ಯಾನಂದ ಶೆಟ್ಟಿ ಬದ್ಯಾರು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.
ಅವರು ಅಂಗನವಾಡಿ ಕೇಂದ್ರ ಬಡಗಎಡಪದವು ಇಲ್ಲಿ ನಡೆದ `ಗುಬ್ಬಚ್ಚಿಗೂಡು’ ಎನ್ನುವ ಅಳಿವಿನಂಚಿನಲ್ಲಿರುವ ಪಕ್ಷಿಸಂಕುಲಗಳ ಉಳಿವಿಗೆ ಸಸ್ಯರಾಶಿಗಳ ಮಹತ್ವ ಜಾಗೃತಿ ಕಾರ್ಯಗಾರದಲ್ಲಿ ಮಾತನಾಡಿದರು.
ಗುಬ್ಬಚ್ಚಿಗೂಡು ಜಾಗೃತಿ ಕಾರ್ಯಾಗಾರದ ರೂವಾರಿ ನಿತ್ಯಾನಂದ ಶೆಟ್ಟಿ ಅವರು ಪಕ್ಷಿಗಳ ಬಗ್ಗೆ ಆಸಕ್ತಿ ವಹಿಸಿ ಅವುಗಳ ಚಲನವಲನಗಳನ್ನು ಗಮನಿಸಬೇಕು. ಅವುಗಳ ರಕ್ಷಣೆ ನಮ್ಮ ಕರ್ತವ್ಯವಾಗಬೇಕು ಎಂದು ಮಕ್ಕಳಿಗೆ ತಿಳಿಸಿದರು.
ಈ ವೇಳೆ ಪಕ್ಷಿಗಳಿಗೆ ನೀರಿಡುವ ಮಣ್ಣಿನ ಪಾತ್ರೆಯನ್ನು ಮಕ್ಕಳಿಗೆ ಉಚಿತವಾಗಿ ನೀಡಿ, ಪಕ್ಷಿಗಳಿಗೆ ಗೂಡು ಹಾಗೂ ನೀರಿಡುವ ಪಾತ್ರೆಯನ್ನು ಇಡುವದ ವಿಧಾನದ ಬಗ್ಗೆ ಪ್ರಾತ್ಯಕ್ಷಿಕೆ ಮೀಡಲಾಯಿತು. ಈ ವೇಳೆ ಅಂಗನವಾಡಿ ಶಿಕ್ಷಕಿ ಶೋಭಾ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *