ಸುದ್ದಿಬಂಟ್ವಾಳ: ಇಲ್ಲಿನ ಪುರಸಭೆ ವತಿಯಿಂದ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆಯಡಿ ಮಂಗಳವಾರ ತೆರವುಗೊಳಿಸಿದ್ದ ಅನಧಿಕೃತ ಗೂಡಂಗಡಿ ಮತ್ತೆ ಗುರುವಾರ ಪುನರಾರಂಭಗೊಂಡು ಮತ್ತೆ ಗೊಂದಲ ಮೂಡಿಸಿದ ಘಟನೆ ನಡೆದಿದೆ.
ಇದೇ ವೇಳೆ ಮೇಲ್ಸೇತುವೆಯಡಿ ಅನಧಿಕೃತ ರಿಕ್ಷಾ ಪಾಕರ್ಿಂಗ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ದಂಡ ವಸೂಲಿಮಾಡುವುದಾಗಿ ಎಚ್ಚರಿಸಿದ ನಗರ ಕ್ರೈಂ ಇನ್ಸ್ಪೆಕ್ಟರ್ ಚಂದ್ರಶೇಖರಯ್ಯ ವಿರುದ್ಧ ರಿಕ್ಷಾ ಚಾಲಕರು ದಿಢೀರ್ ಪ್ರತಿಭಟನೆ ನಡೆಸಿದ ಘಟನೆಯೂ ನಡೆಯಿತು. ಇದರಿಂದಾಗಿ ಬಿ.ಸಿ.ರೋಡ್ನಲ್ಲಿ ಕೆಲಹೊತ್ತು ನಾಗರಿಕರಿಗೆ ಗೊಂದಲ ಮತ್ತು ಆತಂಕಕ್ಕೆ ಕಾರಣವಾಯಿತು.
ಬಿ.ಸಿ.ರೋಡ್ನಲ್ಲಿ ಪದೇ ಪದೇ ಉಂಟಾಗುತ್ತಿರುವ ಟ್ರಾಫಿಕ್ ಸಮಸ್ಯೆಗೆ ಸಂಬಂಧಿಸಿದಂತೆ ಇಲ್ಲಿನ ಅಕ್ರಮ ಗೂಡಂಗಡಿ ತೆರವಿಗೆ ಬಂಟ್ವಾಳ ಪುರಸಭೆಯಲ್ಲಿ ಎರಡೆರಡು ಬಾರಿ ನಿರ್ಣಯ ಕೈಗೊಂಡಿತ್ತು. ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಮತ್ತು ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ ಮತ್ತಿತರ ಅಧಿಕಾರಿಗಳು ನಗರ ಪೊಲೀಸರೊಮದಿಗೆ ಧಾವಿಸಿ ಬುಧವಾರ ತೆರವುಗೊಳಿಸಿದ್ದರು. ಈ ನಡುವೆ ಗುರುವಾರ ಮತ್ತೆ ಕೆಲವು ಗೂಡಂಗಡಿಗಳು ಅಲ್ಲಿ ಪ್ರತ್ಯಕ್ಷವಾಗಿರುವುದನ್ನು ಕಂಡು ಮತ್ತೆ ತೆರವುಗೊಳಿಸಬೇಕಾಯಿತು. ಇದೇ ವೇಳೆ ರಿಕ್ಷಾ ಚಾಲಕರು ಕೂಡಾ ಟ್ರಾಫಿಕ್ ಸಮಸ್ಯೆಗೆ ಪರೋಕ್ಷವಾಗಿ ಕಾರಣವಾಗುತ್ತಿದ್ದು, ಇಂತಹವರ ವಿರುದ್ಧ ನಿದರ್ಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಕ್ರೈಂ ಇನ್ಸ್ಪೆಕ್ಟರ್ ಚಂದ್ರಶೇಖರಯ್ಯ ಎಚ್ಚರಿಸಿದ್ದಾರೆ.
ಇನ್ನೊಂದೆಡೆ ಬಿ.ಸಿ.ರೋಡ್ನಲ್ಲಿ ವ್ಯಾಪಕವಾಗಿರುವ ಅಕ್ರಮ ವಾಹನ ಪಾಕರ್ಿಂಗ್ ಕೂಡಲೇ ತೆರವುಗೊಳಿಸುವಂತೆ ಆಗ್ರಹಿಸಿ ವಕೀಲ ರಾಜಾರಾಮ ನಾಯಕ್ ಎಂಬವರು ಇತ್ತೀಚೆಗೆ ತಹಶೀಲ್ದಾರ್, ಜಿಲ್ಲಾಧಿಕಾರಿ, ಎಸ್ಪಿ ಮತ್ತು ನಗರ ಪೊಲೀಸರಿಗೆ ದೂರು ಸಲ್ಲಿಸಿದ್ದರು.
111p

By suddi9

Leave a Reply

Your email address will not be published. Required fields are marked *