ಪೊಳಲಿ:ವಿಜಯ ಬ್ಯಾಂಕ್ನ್ನು ಬರೋಡಾ ಬ್ಯಾಂಕಿನೊಂದಿಗೆ ವಿಲೀನ ಪ್ರಕ್ರಿಯೆಗೆ ಮುಂದಾಗಿರುವ ಕೇಂದ್ರ ಸರ್ಕಾರದ ನೀತಿ ವಿರೋಧಿಸಿ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಸದಸ್ಯರು ಗುರುವಾರ ಪೊಳಲಿಯ ವಿಜಯ ಬ್ಯಾಂಕ್ ಶಾಖೆಯ ಎದುರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಅಮ್ಮುಂಜೆ ಗ್ರಾಪಂ ಅಧ್ಯಕ್ಷೆ ಪ್ರೇಮಾ, ಇಬ್ರಾಹೀಂ ನವಾಜ್ ಬಡಕಬೈಲು, ವೀಣಾ ಆಚಾರ್ಯ, ಚಂದ್ರಶೇಖರ ಭಂಡಾರಿ,ಯೋಗಿಶ್ಪೂಜಾರಿ, ಉಮೇಶ್ ಆಚಾರ್ಯ, ಚಂದ್ರಹಾಸ ಪಳ್ಳಿಪಾಡಿ,ಹರಿಪ್ರಸಾದ್ ಶೆಟ್ಟಿ, ರಾಜು ಕೋಟ್ಯಾನ್, ಪ್ರಸಾದ್ ಪಲ್ಲಿಪಾಡಿ, ಮೊಹಮ್ಮದ್ ಬಡಕಬೈಲ್, ಗೀತೇಶ್, ಉಪೇಂದ್ರ ಆಚಾರ್ಯ , ಮೋಹನ್ ಶೆಟ್ಟಿ ಮೊದಲಾದವರಿದ್ದರು.

