ಅರ್ಕುಳ ತುಪ್ಪೆಕಲ್ಲಿನ ಶ್ರೀ ಉಳ್ಳಾಕ್ಲು ಮಗೃಂತಾಯಿ ದೈವಸ್ಥಾನದ ಬಳಿಯಿರುವ ಅರ್ಕುಳ ಚಾರಿಟೇಬಲ್ ಟ್ರಸ್ಟ್ ( ರಿ) ಇದರ ಸಭಾಂಗಣದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ *ಯಂಗ್ ಫ್ರೆಂಡ್ಸ್* ಹಾಗೂ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಸ್ಲಂ ಮೋರ್ಚಾ ಮತ್ತು ಬಿಜೆಪಿ ವೈದ್ಯಕೀಯ ಪ್ರಕೋಶ್ತ ಸಹಯೋಗದೊಂದಿಗೆ ನಡೆಯಿತು. ಇದರ ನೇತೃತ್ವವನ್ನು ಸ್ಲಂ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ್ ತುಪ್ಪೆಕಲ್ಲು ವಹಿಸಿದರು.ಇದರಲ್ಲಿ 150ಕ್ಕೂ ಹೆಚ್ಚು ಜನ ಉಪಯೋಗವನ್ನು ಪಡೆದುಕೊಂಡರು..
ಅರ್ಕುಳ ಬೀಡಿನ ಧರ್ಮದರ್ಶಿಗಳಾದ ವಜ್ರನಾಭ ಶೆಟ್ಟಿ ಹಾಗೂ ಮಾಜಿ ಸಚಿವರಾದ ಕೃಷ್ಣ ಜೆ ಪಾಲೆಮಾರ್ ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು.ಈ ಸಂಧರ್ಭದಲ್ಲಿ ಡಾ.ಅಣ್ಣಯ್ಯ ಕುಲಾಲ್(ರಾಜ್ಯ ಸಹ ಸಂಚಾಲಕರು ವೈದ್ಯಕೀಯ ಪ್ರಕೋಶ್ತ), ಡಾ. ರಾಘವೇಂದ್ರ ಭಟ್(ಜಿಲ್ಲಾ ಸಂಚಾಲಕರು ವೈದ್ಯಕೀಯ ಪ್ರಕೋಶ್ತ), ಬಿ.ಜೆ.ಪಿ ಸ್ಲಂ ಮೋರ್ಚಾ ಜಿಲ್ಲಾಧ್ಯಕ್ಷರಾದ ರಾಮ ಅಮೀನ್ ಪಚ್ಚನಾಡಿ,ಬಿ.ಜೆ.ಪಿ ಸ್ಲಂ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ್ ತುಪ್ಪೆಕಲ್ಲು ಮತ್ತು ಚೇತಕ್ ಪೂಜಾರಿ,ಸ್ಲಂ ದಕ್ಷಿಣ ಮಂಡಲ ಅಧ್ಯಕ್ಷರಾದ ಪಮ್ಮಿ ಕೊಡಿಯಾಲ್ ಬೈಲ್,ಉದ್ಯಮಿ ಜನಾರ್ಧನ ಅರ್ಕುಳ,ಅಡ್ಯಾರ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರತಿಮಾ, ರಿಟೇಲ್ ಮ್ಯಾನೇಜರ್ ಕಂಪ ಸದಾನಂದ ಆಳ್ವ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶ್ರೀಮತಿ ಆಶಾ ನಿರೂಪಣೆ ಮಾಡಿದರು.

