ಇರಾ:ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು ದ.ಕ.ಜಿಲ್ಲಾ.ಪಂಚಾಯತ್ ಮಂಗಳೂರು,ತಾಲೂಕು.ಪಂ.ಬಂಟ್ವಾಳ,ಇರಾ ಗ್ರಾಮ ಪಂಚಾಯತ್,ದ.ಕ.ಜಿ.ಪಂ.ಉನ್ನತ್ತೀಕರಿಸಿದ ಶಾಲೆ ತಾಳಿತ್ತಬೆಟ್ಟು ಇರಾ ಹಾಗೂ ಸಮುದಾಯ ಸೇವಾ ಸಂಸ್ಥೆಯ ಸಹಯೋಗದೊಂದಿಗೆ ರಾಷ್ಟೀಯ ಗ್ರಾಮೀಣ ಕುಡಿಯುವ ನೀರು ಕಾರ್ಯಕ್ರಮದಡಿ ನೀರು ಮತ್ತು ನೈರ್ಮಲ್ಯ ಕುರಿತ ವಿಶೇಷ ಗ್ರಾಮಸಭೆಯು ಇಂದು ಇರಾ ಮಲಯಾಳಿ ಬಿಲ್ಲವ ಸಭಾ ಭವನದಲ್ಲಿ ನಡೆಯಿತು.
ಅದ್ಯಕ್ಷತೆಯನ್ನು ವಹಿಸಿದ ಇರಾ ಗ್ರಾಮ ಪಂಚಾಯತ್ ನ ಅದ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆಯವರು ಜೀವ ಸಂಕುಲದ ಅವಿಬಾಜ್ಯ ಅಂಗವಾಗಿರುವ ನೀರನ್ನು ಸದ್ಬಳಕೆ ಮಾಡುವುದರೋದಿಗೆ ಮುಂದಿನ ಜನಾಂಗಕ್ಕಾಗಿ ಸಂರಕ್ಷಿಸುವ ಜಾಗ್ರತಿ ಪ್ರತಿಯೊರ್ವರಿಂದಲೂ ನಡೆಯಬೇಕಾಗಿದೆ ಎಂದರು.ನೀರು ಮತ್ತು ನೈರ್ಮಲ್ಯ ಸಂಪನ್ಮೂಲ ಅಧಿಕಾರಿ ತೇಜಸ್ ಮತ್ತು ಕೃಷ್ಣ ಪ್ರೊಡಕ್ಷ್ಸನ್ ಬೆಂಗಳೂರಿನ ದಿವಾಕರ ಬಾಳೆಪುಣಿ ಯವರು ನೀರು ಮತ್ತು ನೈರ್ಮಲ್ಯದ ಬಗ್ಗೆ ಮಾಹಿತಿ ನೀಡಿದರು.
ಗ್ರಾ.ಪಂ ನ ಉಪಾದ್ಯಕ್ಷರಾದ ಶ್ರೀಮತಿ ಚಂದ್ರಾವತಿ ಎ ಕರ್ಕೇರಾ,ಗ್ರಾ.ಪಂ ಸದಸ್ಯರಾದ ಮೊಯಿದು ಕುಂಞ,ಗೋಪಾಲ ಅಶ್ವಥಡಿ,ದೇವದಾಸ ಅಡಪ,ಶ್ರೀಮತಿ ವಾರ್ವತಿ ನಾಯ್ಕ, ಮತ್ತು ಪಂಚಾಯತ್ ಅಭಿವೃದ್ಧಿ .ಅಧಿಕಾರಿ ನಳಿನಿ ಎ.ಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಶಾಲಾ ಮಕ್ಕಳಿಗಾಗಿ ನೀರು ಮತ್ತು ನೈರ್ಮಲ್ಯದ ಬಗ್ಗೆ ಬಾಷಣ ಹಾಗೂ ಪ್ರಬಂಧ ಸ್ಪರ್ದೆ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಸ್ವಚ್ಚತಾ ಜಾಥಾದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಜಾತ ಟಿ.ಯಸ್ ಸ್ವಾಗತಿಸಿ ಶಿಕ್ಷಕರಾದ ಜಾನ್ ಫೆರ್ನಾಂಡಿಸ್ ದನ್ಯವಾದ ಸಲ್ಲಿಸಿ ಶಂಕರ್ ಕಾರ್ಯಕ್ರಮ ನಿರೂಪಿಸಿದರು.

