ಮೂಡುಬಿದಿರೆ : ಎನ್ಎಸ್ಎಸ್ ಪ್ರತಿಯೊಬ್ಬರಲ್ಲಿಯೂ ಆತ್ಮೀಯತೆಯನ್ನು ಬೆಳೆಸುತ್ತದೆ. ಎನ್ಎಸ್ಎಸ್ ಶಿಬಿರವು ಶ್ರಮದಾನದ ಒಂದು ಭಾಗವಾದರೆ, ಇನ್ನೊಂದೆಡೆ ಶೈಕ್ಷಣಿಕ, ಸಾಂಸ್ಕøತಿಕ ಹಾಗೂ ಸಮಯಪ್ರಜ್ಞೆ ಎಲ್ಲವೂ ಎನ್ಎಸ್ಎಸ್ನ ಭಾಗವಾಗಿದೆಯಲ್ಲದೆ ವಿದ್ಯಾರ್ಥಿಗಳು ಪ್ರಯೋಗಾತ್ಮಕವಾಗಿ ಬೆಳೆಯಲು ಕೂಡಾ ಸಹಕಾರಿಯಾಗಿದೆ ಎಂದು ಶ್ರೀ ಮಹಾವೀರ ಕಾಲೇಜಿನ ಪ್ರಾಂಶುಪಾಲ ಪ್ರೊ/ಹೆಚ್.ಚಂದ್ರಶೇಖರ ದೀಕ್ಷಿತ್ ಹೇಳಿದರು.

ರಾಷ್ಟ್ರೀಯ ಸೇವಾ ಯೋಜನೆಯ ಸ್ವರ್ಣ ಮಹೋತ್ಸವದ ವರ್ಷದಲ್ಲಿ ಮೂಡುಬಿದಿರೆಯ ಶ್ರೀ ಮಹಾವೀರ ಕಾಲೇಜಿನ ವಾರ್ಷಿಕ ವಿಶೇಷ ಶಿಬಿರದಂಗವಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತೋಡಾರು ಇಲ್ಲಿ ಏಳು ದಿನಗಳ ಕಾಲ ಹಮ್ಮಿಕೊಂಡಿದ್ದು, ಶುಕ್ರವಾರ ಸಮಾರೋಪಗೊಂಡ ಎನ್ಎಸ್ಎಸ್ ಶಿಬಿರದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಎಲ್ಲಾ ವಿದ್ಯಾರ್ಥಿಗಳಿಗೂ ಎಲ್ಲ ರೀತಿಯ ಉತ್ತಮ ಅವಕಾಶಗಳು ಸಿಗುವುದಿಲ್ಲ. ಎನ್ಎಸ್ಎಸ್ನಿಂದ ವಿದ್ಯಾರ್ಥಿಗಳ ಜೀವನದಲ್ಲಿ ನೆನಪಿಡಬೇಕಾದ ಅನುಭವ ಆಗಿರುತ್ತದೆ. ಈ ಅನುಭವ ವಿದ್ಯಾರ್ಥಿಗಳಿಗೆ ಪ್ರತಿವರ್ಷವೂ ಸಿಗುತ್ತಿದ್ದು ಇಂತಹ ಅವಕಾಶವನ್ನು ನೀವು ಪಡೆದುಕೊಂಡಿದ್ದೀರಿ ನೀವು ಅದೃಷ್ಟಶಾಲಿಗಳು ಎಂದರು.
ತೋಡಾರು ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಸುನಿಲ್ ಕುಮಾರ್ ಜೈನ್ ಸಮಾರೋಪ ಭಾಷಣಗೈದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯೆ ವೇದಾವತಿ, ಮಹಾವೀರ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್,ಶೆಟ್ಟಿ, ಉದ್ಯಮಿ ಸುಭಾಷ್ ಶೆಟ್ಟಿ, ಕೃಷಿಕ ಪುಷ್ಪದಂತ ಕರ್ಣಾಂತಯ, ತೋಡಾರು ಸಮರ್ಪಣಾ ಸೇವಾ ಟ್ರಸ್ಟ್ನ ಅಧ್ಯಕ್ಷ ಸಂದೇಶ್ ಶೆಟ್ಟಿ, ದಾಮೋದರ ಶೆಟ್ಟಿ, ಮಹಾವೀರ ಕಾಲೇಜಿನ ಎಸ್.ಎಂ.ಸಿ ಅಧ್ಯಕ್ಷ ಅಬ್ದುಲ್ ರೆಹಮಾನ್, ಕಾಲೇಜಿನ ಕ್ಷೇಮಪಾಲನಾ ಅಧಿಕಾರಿ ಡಾ/ಅಜಾದ್ ಅಹಮ್ಮದ್, ಶಾಲಾ ಮುಖ್ಯೋಪಾಧ್ಯಾಯಿನಿ ನಂದಿನಿ ಬಾೈ.ಎಚ್, ಸಹ ಶಿಕ್ಷಕಿ ಸರಿತಾ, ಸಂದೇಶ್ ಶೆಟ್ಟಿ , ಅಬ್ದುಲ್ರೆಹಮಾನ್ , ಡಾ|ಅಜಾಜ್ಅಹಮ್ಮದ್ , ಸಂತೋಷ್ಕುಮಾರ್ಜೈನ್, ,ದಾಮೋದರ್ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಿದ್ದರು.
ರಾಷ್ಟ್ರೀಯ ಸೇವಾ ಸಂಘದ ಯೋಜನಾಧಿಕಾರಿ ಸುಲೋಚನಾ ಪಚ್ಚಿನಡ್ಕ ಶಿಬಿರಕ್ಕೆ ಸಹರಿಸಿದ ಊರ ಗಣ್ಯರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
ವಿದ್ಯಾರ್ಥಿನಿ ತೇಜಸ್ವಿನಿ ಸ್ವಾಗತಿಸಿದರು. ಶಿಬಿರಾರ್ಥಿಗಳಾದ ಶ್ರೀವತ್ಸ ಮತ್ತು ಚೈತ್ರಾ ಅನಿಸಿಕೆ ಹಂಚಿಕೊಂಡರು. ಶ್ರಾವ್ಯ ಕಾರ್ಯಕ್ರಮ ನಿರೂಪಿಸಿದರು. ವೈಷ್ಣವಿ ವಂದಿಸಿದರು.
