ಮೂಡುಬಿದಿರೆ: ಹಿಂದೂ ಸಮಾಜದಲ್ಲಿ ನಂಬಿಕೆ, ಶ್ರದ್ದೆಯ ಅಡಿಪಾಯದಲ್ಲಿ ಇದ್ದು, ಅಂತಹ ನಂಬಿಕೆಗಳಿಗೆ ಕೈ ಹಾಕುವ ದುಸ್ಸಾಹಸ ಬೇಡ. ಈ ರೀತಿಯ ಕಾರ್ಯ ಅನ್ಯಧರ್ಮೀಯರಿಗಿಂತಲೂ ಹಿಂದೂ ರಾಜಕೀಯ ನಾಯಕರಿಂದಲೇ ನಡೆಯುತ್ತಿರುವುದು ಕಳವಳಕಾರಿ ಎಂದು ಪುತ್ತೂರಿನ ಶ್ರೀ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.

ಶ್ರೀ ಕ್ಷೇತ್ರ ತೋಡಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನ, ಬ್ರಹ್ಮಶ್ರೀ ಬೈದರ್ಕಳ ಗರಡಿ ಇಲ್ಲಿ ಬ್ರಹ್ಮಕಲಶೋತ್ಸವದಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ಮೊಕ್ತೇಸರ ವಿಶಾಲ್‍ಕೀರ್ತಿ ಬಲಿಪ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬ್ರಹ್ಮಕಲಶ ಸಮಿತಿ ಉಪಾಧ್ಯಕ್ಷ ಶಾಂತಿ ಪ್ರಸಾದ್ ಹೆಗ್ಡೆ ಕೇರ್ದಿಲ, ಪ್ರಧಾನ ಕಾರ್ಯದರ್ಶಿ, ಬೆಂಗಳೂರಿನ ಉದ್ಯಮಿ ಅರುಣ್ ರೈ, ತೋಡಾರು, ಗೌರವ ಸಲಹೆಗಾರ, ಉದ್ಯಮಿ ರಮಾನಂದ ಶೆಟ್ಟಿ ಚೆನ್ನೊಟ್ಟು ತೋಡಾರು, ಸೇವಾ ಸಮಿತಿಯ ಮುಡೋಡಿಗುತ್ತು ಉದಯಕುಮಾರ್ ಜೈನ್ ಭಾಗವಹಿಸಿದ್ದರು. ಕಾರ್ಯದರ್ಶಿ ಪ್ರೇಮನಾಥ ಶೆಟ್ಟಿ ಕಾವುಲ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ದಿವಾಕರ ಶೆಟ್ಟಿ ಚೆನ್ನೊಟ್ಟು ತೋಡಾರು ನಿರೂಪಿಸಿ ವಂದಿಸಿದರು. ಸೀತಾರಾಮ ಶೆಟ್ಟಿ ತೋಡಾರು ಸಾಂಸ್ಕøತಿಕ ಕಲಾಪ ನಿರ್ವಹಿಸಿದರು.
