ಬಜ್ಪೆ: ಮಹಿಳೆಯರು ತಮ್ಮ ಹಕ್ಕುಗಳನ್ನು ಪ್ರತಿಪಾದಿಸಲು ಒಗ್ಗಟ್ಟಾಗಬೇಕು ಎಂದು ಪೆರ್ಮುದೆ ಗ್ರಾ. ಪಂ. ಅಧ್ಯಕ್ಷರಾದ ಸಂದೇಶ್ ಜಿ.ಕೆ. ಹೇಳಿದರು.
ಅವರು ಗುರುವಾರ ಪೆರ್ಮುದೆ ಗ್ರಾ. ಪಂ ವಠಾರದಲ್ಲಿ ನಡೆದ ಮಹಿಳಾ ಗ್ರಾಮಸಭೆಯ ಅಧ್ಯಕ್ಷಷತೆ ವಹಿಸಿ ಮಾತಾಡುತ್ತಿದ್ದರು.

IMG_20140101_092238206 IMG_20140101_092230925 IMG_20140101_084300431 IMG_20140101_083654360 11 IMG_20140101_060456512 IMG_20140101_061411540 IMG_20140101_083605360 11 bajpe 2
ಬ್ರೇಕ್ ಥ್ರೂ ಸಂಸ್ಥೆಯ ಮಂಜುಳಾ ಸುನಿಲ್ ಅವರು ಕಲಾವಿದೆ ಸುನಿಲಾ ಜಾರಂದಗುಡ್ಡೆ ಅವರು ಅಭಿನಯಿಸಿದ `ದುರ್ಗಾ’ ಎಂಬ ಕೌಟುಂಬಿಕ ದೌರ್ಜನ್ಯದ ನಾಟಕದ ಬಗ್ಗೆ ಮಾತಾಡುತ್ತಾ ಹಿಂಸೆ ಇರದೆ ಸುಮ್ಮನಿರದೆ ದನಿ ಎತ್ತಿ ಮಾತಾಡಬೇಕು ಎಂದರು. ಸಮನ್ವಯ ಸಂಸ್ಥೆಯ ಆಶಾಲತ ಅವರು ಮಹಿಳಾ ಸಶಕ್ತತೆ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಪಂ. ಉಪಾಧ್ಯಕ್ಷೆ ಹೇಮಾಲತಾ, ಪಂ.ಸದಸ್ಯರಾದ ಪುಷ್ಪಾ, ಆಗ್ನೆಸ್ ರೌನ್ಸಿಯೆಸ್ಸೋ ಮತ್ತಿತರರು ಉಪಸ್ಥಿತರಿದ್ದರು.. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕರಾದ ಮಾಧುರಿ ಸ್ವಾಗತಿಸಿದರು. ಚಂದ್ರಾವತಿ ಧನ್ಯವಾದ ಅರ್ಪಿಸಿದರು.

By suddi9

Leave a Reply

Your email address will not be published. Required fields are marked *