ಬಂಟ್ವಾಳ| ಶ್ರೀ ವೆಂಕಟರಮಣ ಸ್ವಾಮೀ ಕಾಲೇಜು ಪ್ರಥಮ ಬಿಎ ವಿದ್ಯಾರ್ಥಿ ಹರ್ಷಿತ್ ಕೆ. ಮತ್ತು ಪ್ರಥಮ ಬಿಎಸ್ಸಿ ವಿದ್ಯಾರ್ಥಿ ಮಿಲ್ಟನ್ ಪಿಂಟೋ ಇವರು ಆಕಾಶವಾಣಿಯ ರಾಷ್ಟ್ರೀಯ ಯುವದಿನಾಚರಣೆಯ ಪ್ರಯುಕ್ತ ಮಹಾತ್ಮ ಗಾಂಧೀಜಿ-150 ವಿಷಯದ ಕುರಿತು ಮಂಗಳೂರು ನಿಲಯ ವ್ಯಾಪ್ತಿ ಪ್ರದೇಶದ ಉಡುಪಿ, ದಕ್ಷಿಣಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ಕಾಲೇಜು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ರಸಪ್ರಶ್ನೆ ಸ್ಪರ್ಧೆಯ ಪೂರ್ವಭಾವಿ ಸುತ್ತಿನಲ್ಲಿ ಪ್ರಥಮ ಸ್ಥಾನ ಗಳಿಸಿರುತ್ತಾರೆ.
ಅವರು ಜನವರಿ 03, 2019ರಂದು ಬೆಂಗಳೂರು ಕ್ರಸ್ಟ್ ವಿಶ್ವವಿದ್ಯಾಲಯದ ಸ್ಕೈ ವಿವ್ಯೋ ಅಡಿಟೋರಿಯಮ್‍ನಲ್ಲಿ ನಡೆಯುವ ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆಗೆ ಮಂಗಳೂರು ಆಕಾಶವಾಣಿ ಪ್ರತಿನಿಧಿಗಳಾಗಿ ಭಾಗವಹಿಸಲಿದ್ದಾರೆ. ಇವರಿಗೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ-ಉಪನ್ಯಾಸಕೇತರ ವರ್ಗ ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
