ಕೈಕಂಬ: ಉಳಾಯಿಬೆಟ್ಟು ಶ್ರೀ ಮಹಮ್ಮಾಯಿ ಸ್ಪೋಟ್ರ್ಸ್ ಕ್ಲಬ್ (ರಿ.) ಇದರ ಬೆಳ್ಳಿಹಬ್ಬ ಹಾಗೂ ಕಟ್ಟಡ ದಶಮಾನೋತ್ಸವ ಪ್ರಯುಕ್ತ ಲಯನ್ಸ್ ಕ್ಲಬ್ ಮಂಗಳೂರು-ಕಾವೂರು ಇದರ ಸಹಕಾರದೊಂದಿಗೆ ಮುಕ್ತ ವಾಲಿಬಾಲ್ ಪಂದ್ಯಾಟ’ವು ಇತ್ತೀಚೆಗೆ ಸಾಲೆ ಶ್ರೀ ವಿಶ್ವನಾಥ ಮಹಾಗಣಪತಿ ದೇವಸ್ಥಾನದ ಎದುರುಗಡೆ ಜರಗಿತು.
ಉದ್ಘಾಟನಾ ಸಮಾರಂಭವನ್ನು ದೀಪ ಬೆಳಗಿಸುವುದರ ಮೂಲಕ ಹಾಗೂ ರಿಬ್ಬನ್ ಕತ್ತರಿಸುವ ಮೂಲಕ ಕ್ಯಾ| ಬೃಜೇಶ್ ಚೌಟ ಉದ್ಘಾಟಿಸಿದರು. ಜಿಲ್ಲೆಯ ಹೆಸರುವಾಸಿ ತಂಡಗಳು ಭಾಗವಹಿಸಿದ್ದ ಈ ಪಂದ್ಯಾಟದಲ್ಲಿ ರಾಷ್ಟ್ರಮಟ್ಟದ ಆಟಗಾರರು ಭಾಗವಹಿಸಿದ್ದರು. ಈ ಪಂದ್ಯಾಟದ ಪ್ರಥಮ ಹಾಗೂ ದ್ವಿತೀಯ ಪ್ರಶಸ್ತಿಯನ್ನು ಚುಕ್ಕಿಫ್ರೆಂಡ್ಸ್ ತಂಡ ಪಡೆಯಿತು. ತೃತೀಯ ವಾಸುಕಿ ಫ್ರೆಂಡ್ಸ್ ಹಾಗೂ ಚತುರ್ಥ ಪ್ರಶಸ್ತಿಯನ್ನು ಜೆ.ಕೆ.ಫ್ರೆಂಡ್ಸ್ ಪಡೆಯಿತು.
ಉತ್ತಮ ಆಲ್‍ರೌಂಡರ್ ಪ್ರಶಸ್ತಿಯನ್ನು ಚುಕ್ಕಿ ಫ್ರೆಂಡ್ಸ್‍ನ ಅನುಷ್, ಉತ್ತಮ ಪಾಸರ್ ಪ್ರಶಸ್ತಿಯನ್ನು ಚುಕ್ಕಿ ಫ್ರೆಂಡ್ಸ್‍ನ ಸರ್ಪರಾಜ್, ಉತ್ತಮ ಅಟ್ಯಾಕರ್ ಪ್ರಶಸ್ತಿಯನ್ನು ಜೆ.ಕೆ.ಫ್ರೆಂಡ್ಸ್‍ನ ಮುಕೇಶ್ ಪಡೆದುಕೊಂಡರು.
ಸಮಾರಂಭದ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷರಾದ ವಸಂತ ಕುಮಾರ್ ವಹಿಸಿದ್ದರು. ಸಮಾರಂಭದಲ್ಲಿ ಲಯನ್ಸ್ ಕ್ಲಬ್ ಮಂಗಳೂರು-ಕಾವೂರು ಇದರ ಅಧ್ಯಕ್ಷರಾದ ಸತೀಶ್ ಶೆಟ್ಟಿ ಕಡಂಬಿಲ, ಶ್ರೀನಿವಾಸ ಮಾಣೈ ಮಾಂಜ, ರಾಮಕೃಷ್ಣ ಮಾಣೈ ಮಾಂಜ, ಸೌಮ್ಯ ಪಂಡಿತ್, ರಾಜ್‍ಕುಮಾರ್ ಶೆಟ್ಟಿ ತಿರುವೈಲುಗುತ್ತು, ಮನೋಜ್ ಶೆಟ್ಟಿ ಪೆರ್ಮಂಕಿ, ಯೂಸುಫ್, ಅಬ್ದುಲ್ ರಹಿಮಾನ್, ಶರೀಫ್, ಅಬ್ದುಲ್ ಕುಂಞÂ, ರಾಜೀವ ಶೆಟ್ಟಿ ಸಲ್ಲಾಜೆ, ವಿಶ್ವನಾಥ ಶೆಟ್ಟಿ ಉಳಾಯಿಬೆಟ್ಟುಗುತ್ತು, ಕಮಲಾಕ್ಷ ತಲ್ಲಿಮಾರು, ಸುದರ್ಶನ್ ಶೆಟ್ಟಿ ಪೆರ್ಮಂಕಿ, ಉಮೇಶ್ ಕೋಟ್ಯಾನ್, ಕ್ಲಬ್‍ನ ಅಧ್ಯಕ್ಷರಾದ ಚಂದ್ರಶೇಖರ ತಲ್ಲಿಮಾರು, ನಿರಂಜನ್ ಶೆಟ್ಟಿ ಸಾಲೆಮನೆ, ಹರಿಕೇಶ್ ಶೆಟ್ಟಿ ನಡಿಗುತ್ತು ಉಪಸ್ಥಿತರಿದ್ದರು. ಜಯರಾಮ ರೈ ಉಳಾಯಿಬೆಟ್ಟುಗುತ್ತು ಕಾರ್ಯಕ್ರಮ ನಿರೂಪಿಸಿದರು.
