ಗುರುಪುರ : ಶ್ರೀ ವಜ್ರದೇಹಿ ಮಠದ ಶ್ರೀ ಗುರುರಾಮಾಂಜನೇಯ ದೇವರ ಸನ್ನಿಧಿಯಲ್ಲಿ ಜನವರಿ 3ರಿಂದ 5ರವರೆಗೆ ಬ್ರಹ್ಮಶ್ರೀ ಅರುಣ್ ಭಟ್ ಖಂಡಿಗೆ ನೇತೃತ್ವದಲ್ಲಿ `ವಜ್ರದೇಹಿ ಜಾತ್ರೆ’ ಜರುಗಲಿದೆ.ಜ. 3ರಂದು ಬೆಳಿಗ್ಗೆ ತೋರಣ ಮುಹೂರ್ತ, ನವಕ ಕಲಶಾಭಿಷೇಕ ಹಾಗೂ ಕೂರ್ಮ ಮಹಾಸಾಲಿಗ್ರಾಮ ಮತ್ತು ಅನಂತ ಪದ್ಮನಾಭ ಮಹಾಸಾಲಿಗ್ರಾಮಕ್ಕೆ ಮಹಾಮಜ್ಜನದೊಂದಿಗೆ ಜಾತ್ರೆ ಆರಂಭಗೊಳ್ಳಲಿದೆ.gur-dec-20-rajashekaranda swamy

ಸಂಜೆ 5ಕ್ಕೆ ಶ್ರೀದೇವರಿಗೆ ರಂಗಪೂಜೆ, ಬಳಿಕ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಾದದೊಂದಿಗೆ ಶ್ರೀ ವಜ್ರದೇಹಿ ಬಳಗ(ಗುರುಪುರ) ಸಂಸ್ಥೆಯ ಸಪ್ತಮ ವಾರ್ಷಿಕೋತ್ಸವ ಹಾಗೂ ಸಭಾ ಕಾರ್ಯಕ್ರಮ ಜರುಗಲಿದೆ. ಅತಿಥಿಗಳಾಗಿ ಸುರೇಂದ್ರ ಕಂಬಳಿ(ಅಧ್ಯಕ್ಷ, ಕೆಪಿಟಿಸಿಎಲ್ ಮಂಗಳೂರು), ಸಚಿನ್ ಅಡಪ(ತಾಪಂ ಸದಸ್ಯ), ಮುರಳೀಧರ ಶೆಟ್ಟಿ ಎಡಪದವು(ಅಧ್ಯಕ್ಷ, ಶ್ರೀರಾಮ ಮಂದಿರ ಎಡಪದವು), ಅರವಿಂದ ಬೋಳಾರ್(ರಂಗಭೂಮಿ ಕಲಾವಿದ), ಪ್ರಮೋದ್ ಕುಮಾರ್ ರೈ(ಆಡಳಿತ ಮೊಕ್ತೇಸರ, ಮುಂಡಿತ್ತಾಯ ದೈವಸ್ಥಾನ), ಬೊಂಡಾಲ ಸಚ್ಚಿದಾನಂದ ಶೆಟ್ಟಿ, ಪ್ರವೀಣ್ ಶೆಟ್ಟಿ ಬೆಳ್ಳಿಬೆಟ್ಟುಗುತ್ತು ಪಾಲ್ಗೊಳ್ಳುವರು.gur-dec-20-vajradehi god

ಜ. 4ರಂದು ಮಧ್ಯಾಹ್ನ ಸ್ವಾಮೀಜಿ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ. ಅತಿಥಿಗಳಾಗಿ ನಳಿನ್ ಕುಮಾರ್ ಕಟೀಲ್(ಸಂಸದ), ಸಿಬಿಡಿ ಭಾಸ್ಕರ ಶೆಟ್ಟಿ ಬೇಲಾಪುರ, ಧರ್ಮಪಾಲ ದೇವಾಡಿಗ ಮುಂಬೈ, ಕ್ಯಾ. ಬೃಜೇಶ್ ಚೌಟ, ಸುನೀಲ್ ಕೆ ಆರ್, ಸುಧಾಕರ ಶೆಟ್ಟಿ(ಹೋಟೆಲ್ ಉದ್ಯಮಿ), ರವೀಂದ್ರ ಶೆಟ್ಟಿ ಬಜಗೋಳಿ(ಉದ್ಯಮಿ), ಸುರೇಶ್ ಶೆಟ್ಟಿ(ಹೋಟೆಲ್ ಉದ್ಯಮಿ), ಪ್ರದೀಪ್ ಕೋಟ್ಯಾನ್, ಲ. ಕಿಶೋರ್ ಶೆಟ್ಟಿ(ಉದ್ಯಮಿ), ಗುರ್ಮೆ ಸುರೇಶ್ ಶೆಟ್ಟಿ, ಮುಂಬೈ ಖಾಂದೇಶ್ ಭಾಸ್ಕರ ಶೆಟ್ಟಿ, ಹರಿಕೃಷ್ಣ ಬಂಟ್ವಾಳ, ದಿನೇಶ್ ಶೆಟ್ಟಿ(ಚಿತ್ರ ನಿರ್ಮಾಪಕ) ಭಾಗವಹಿಸುವರು. ಈ ಸಂದರ್ಭದಲ್ಲಿ ಶಾಸಕರಾದ ಸುನಿಲ್ ಕುಮಾರ್, ಡಾ. ಭರತ್ ಶೆಟ್ಟಿ, ರಾಜೇಶ್ ನಾಯ್ಕ್, ಹರೀಶ್ ಪೂಂಜರಿಗೆ ಗೌರವ ಅಭಿನಂದನೆ ಮತ್ತು ವಿರಾರ್ ಶಂಕರ ಶೆಟ್ಟಿ, ಸುಬ್ರಹ್ಮಣ್ಯ ಭಟ್ ಹಾಗೂ ಕಿಶೋರ್‍ಗೆ ಪ್ರಶಸ್ತಿ ಪ್ರದಾನ. ಮಧ್ಯಾಹ್ನ 2 ಗಂಟೆಗೆ `ಮಸ್ಕಿರಿ ಕುಡ್ಲ’ ಕಲಾವಿದರಿಂದ `ತೆಲಿಕೆ ಬಂಜಿ ನಿಲಿಕೆ’ ಮನೋರಂಜನಾ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ. ರಾತ್ರಿ 8.30ಕ್ಕೆ ರವಿ ಆಚಾರ್ಯ ಗುರುಪುರರಿಗೆ ಗೌರವ ಸಮರ್ಪಣೆ, ರಿಥಮಿಕ್ ಯೋಗ ಪಟು ಕುಮಾರಿ ಶಿಫಾಲಿಗೆ ಸನ್ಮಾನ. ಬಳಿಕ ಕೂಟದ ಕಲಾವಿದೆರ್ ಇವರಿಂದ `ತಿರುಪತಿ ತಿಮ್ಮಪ್ಪೆ’ ನಾಟಕ ಪ್ರದರ್ಶನಗೊಳ್ಳಲಿದೆ.

 

ಜ. 5ರಂದು ಬೆಳಿಗ್ಗೆ 6ರಿಂದ ಪವಮಾನಾಭಿಷೇಕ, ಸಾಮೂಹಿಕ ಆಶ್ಲೇಷ ಬಲಿ, ಬೆಳಿಗ್ಗೆ 11ಕ್ಕೆ ಧರ್ಮ ದೈವಗಳ ಭಂಡಾರ ಏರಲಿದೆ. 12ಕ್ಕೆ ಸಾಮೂಹಿಕ ಶನೀಶ್ವರ ಪೂಜೆ, ಸಂಜೆ 5.30ಕ್ಕೆ ಮೈಸಂದಾಯ ನೇಮ, 7ರಿಂದ ರತ್ನಾಕರ ಜೋಗಿ ಪೆರಾರ ಮತ್ತು ಬಳಗದವರಿಂದ `ನಾದ ವೈಭವ’, ರಾತ್ರಿ 9ಕ್ಕೆ ಕುಸಲ್ದ ಕಲಾವಿದೆರ್ ಇವರಿಂದ `ಮಂಗೆ ಮಲ್ಪೊಡ್ಚಿ’ ತುಳು ನಾಟಕ ಪ್ರದರ್ಶನಗೊಳ್ಳಲಿದೆ. ರಾತ್ರಿ 8ರಿಂದ ಶ್ರೀ ರಕ್ತೇಶ್ವರಿ, ಅಣ್ಣಪ್ಪ ಧರ್ಮದೈವಗಳ ನೇಮ ನಡೆಯಲಿದೆ. ಮೂರೂ ದಿನ ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ ಇದೆ ಎಂದು ಮಠದ ಸ್ವಾಮೀಜಿಯವರ ಪತ್ರಿಕಾ ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *