ಬಂಟ್ವಾಳ:ಇಲ್ಲಿನ ಅಮ್ಮೆಮಾರು ಎಂಬಲ್ಲಿ ಮದುವೆ ಕಾರ್ಯಕ್ರಮದ ನೆಪದಲ್ಲಿ ಸ್ನೇಹಿತನಿಮದ ಪಡೆದ ಕಾರನ್ನು ಮರಳಿ ನೀಡದೆ ವಂಚಿಸಿದ ಘಟನೆ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.
ಆರೋಪಿಗಳನ್ನು ಇಲ್ಲಿನ ನಿವಾಸಿ ಫಾರೂಕ್ ಮತ್ತು ಬೆಂಗಳೂರು ನಿವಾಸಿ ಸೋಹೆಬ್ ಎಂದು ಗುರುತಿಸಲಾಗಿದೆ. ಕೆಲವು ದಿನಗಳ ಹಿಂದೆ ಇಲ್ಲಿನ ನಿವಾಸಿ ರಫೀಕ್ ಮತ್ತು ಆಸ್ಮ ದಂಪತಿ ಖರೀದಿಸಿದ್ದ ಕಾರನ್ನು ಸಂಬಂಧಿಕರ ಮದುವೆಗೆ ಹೋಗುವ ನೆಪದಲ್ಲಿ ಸ್ಥಳೀಯ ನಿವಾಸಿ ಫಾರೂಕ್ ಎಂಬಾತನು ಪಡೆದು ಬಳಿಕ ಆತನ ಸ್ನೇಹಿತ ಬೆಂಗಳೂರಿನ ಸೋಹೆಬ್ ಎಂಬಾತನಿಗೆ ನೀಡಿದ್ದನು ಎನ್ನಲಾಗಿದೆ.
ಆದರೆ ಕೆಲವು ದಿನಗಳ ಬಳಿಕ ಈ ದಂಪತಿ ಕಾರನ್ನು ವಾಪಾಸು ಕೇಳಿದಾಗ ನೀಡದಿರುವ ಬಗ್ಗೆ ಅವರು ಪೊಲೀಸರಿಗೆ ದೂರಿಕೊಂಡಿದ್ದರು. ಇದೇ ವೇಳೆ ಪೊಲೀಸರು ವಿಚಾರಣೆ ನಡೆಸಿದಾಗ ಬೆಂಗಳೂರಿನ ಬಿಟಿಎಂ ಲೇ-ಔಟ್ ನಿವಾಸಿ ಸೋಹೆಬ್ ಎಂಬಾತನ ಮನೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
