ಬಂಟ್ವಾಳ:ಇಲ್ಲಿನ ಕೊಯಿಲದಲ್ಲಿ ಕಳೆದ 25 ವರ್ಷಗಳ ಹಿಂದೆ ಆರಂಭಗೊಂಡ ಸರ್ಕಾರಿ ಪ್ರೌಢಶಾಲೆಯಲ್ಲಿ ಇದೇ 23ರಂದು ಬೆಳಿಗ್ಗೆ ಸಂಜೆ 10 ಗಂಟೆಗೆ ಶಾಲಾ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ. ಇದೇ ವೇಳೆ ಇಲ್ಲಿನ ಲಯನ್ಸ್ ಕ್ಲಬ್ ಮಾಜಿ ವಲಯಾಧ್ಯಕ್ಷ ದಿವಂಗತ ಎಂ.ದೇವಪ್ಪ ಶೆಟ್ಟಿ ಮಾವಂತೂರು ಇವರ ಸ್ಮರಣಾರ್ಥ ರೂ 5.5ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ರಂಗ ಮಂದಿರವನ್ನು ಮೃತರ ಪತ್ನಿ ಶಶಿಕಲಾ ಡಿ.ಮಾವಂತೂರು ಇವರು ಉದ್ಘಾಟಿಸುವರು. ನಿವೃತ್ತ ಮುಕ್ಯಶಿಕ್ಷಕರಾದ ದಾಮೋದರ ರಾವ್ ಮತ್ತು ನಾರಾಯಣ ನಾಯಕ್ ಕರ್ಪ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವರು.
ಅಂದು ಸಂಜೆ ಗಂಟೆ 6.30ಕ್ಕೆ ಶಾಸಕ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸದಸ್ಯ ಭೋಜೇ ಗೌಡ, ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ್, ಸದಸ್ಯ ಎಂ.ತುಂಗಪ್ಪ ಬಂಗೇರ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ದಯಾನಂದ ಸಪಲ್ಯ ಮತ್ತಿತರ ಗಣ್ಯರು ಭಾಗವಹಿಸುವರು. ಅಂದು ಮಧ್ಯಾಹ್ನ 2ಗಂಟೆಗೆ ವಿವಿಧ ಮನೋರಂಜನಾ ಕಾರ್ಯಕ್ರಮ ಮತ್ತು ರಾತ್ರಿ 8 ಗಂಟೆಗೆ ಮಂಗಳೂರು ರಾಮ್ ಪ್ರಕಾಶ್ ವರ್ಮಾಸ್ ತಂಡದಿಮದ ಸಂಗೀತ ರಸಮಂಜರಿ ನಡೆಯಲಿದೆ ಎಂದು ಮುಖ್ಯಶಿಕ್ಷಕ ಸುಧೀರ್ ಜಿ. ತಿಳಿಸಿದ್ದಾರೆ.
