ಬಂಟ್ವಾಳ : ನಾಗರಿಕ ಕ್ರಿಯಾ ಸಮಿತಿ ಸಂಚಯಗಿರಿ ಇದರ ವಾರ್ಷಿಕ ಸಹಮಿಲನ ಕಾರ್ಯಕ್ರಮವು ಸಂಚಯಗಿರಿ ಮೈದಾನದಲ್ಲಿ ಜರಗಿತು. ಪುರಸಭೆ ಸದಸ್ಯರಾದ ವಿದ್ಯಾವತಿ ಪ್ರಮೋದ್ ಕುಮಾರ್ ಹಾಗೂ ಜಯಂತಿ ಕುಲಾಲ್ ಭಾಗವಹಿಸಿದ್ದರು. ನಾಗರಿಕ ಕ್ರಿಯಾ ಸಮಿತಿ ಸಮಿತಿ ಅದ್ಯಕ್ಷ ಪ್ರಶಾಂತ್ ಕೋಟ್ಯಾನ್ ಜೇಷ್ಠಪಾಲ್ ಅಧ್ಯಕ್ಷತೆ ವಹಿಸಿದ್ದರು.DSC_1075

 

DSC_0029ವೇದಿಕೆಯಲ್ಲಿ ಸಮಿತಿ ಕಾರ್ಯದರ್ಶಿ ಪ್ರಿಯಾಲತಾ ವಾಮನ್ , ಯುವ ವೇದಿಕೆಯ ಸಚಿನ್ ಉಪಸ್ಥಿತರಿದ್ದರು. ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರ ಸಂಚಾಲಕ ತುಕಾರಾಮ ಪೂಜಾರಿ, ಸುಧಾಕರ ಸಾಲ್ಯಾನ್, ನರಸಿಂಹ ರಾಜು ಮತ್ತು ನಯನಾ ಹೊಳ್ಳ ದಂಪತಿ ಕಲಿಕೆಯಲ್ಲಿ ಸಾಧನೆ ಮಾಡಿದ ಮಕ್ಕಳಾದ ಅಪೂರ್ವ, ವರ್ಷಿತ್, ಅಕ್ಷಯ್ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕೋಶಾಧಿಕಾರಿ ಪ್ರದೀಪ್ ಕುಮಾರ್ ಸ್ವಾಗತಿಸಿದರು. ದಾಮೋದರ್ ಎ. ವಂದಿಸಿ, ನಿರ್ವತ್ತ ಶಿಕ್ಷಕ ಸಂಕಪ್ಪ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *