ಬಂಟ್ವಾಳ: ರಾರಾಸಂ ಫೌಂಡೇಶನ್ ಬಂಟ್ವಾಳ ಇದರ ಆಶ್ರಯದಲ್ಲಿ 8ನೇ ವರ್ಷದ ಸಾಂಸ್ಕ್ರತಿಕ ಕಲರವ ರಾರಾಸಂಭ್ರಮ ಡಿ.25ರಂದು ಬೆಳಿಗ್ಗೆ 9 ರಿಂದ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಲಿದೆ.
ಮಡಂತ್ಯಾರುವಿನ ಸೇಕ್ರೆಡ್ ಹಾರ್ಟ್ ಕಾಲೇಜಿನ ನಿವೃತ್ತ ಕಚೇರಿ ಅಧೀಕ್ಷಕ ಬಿ.ವಿ.ಡಿ.ಆಲ್ಮೇಡಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಚಿತ್ರಕಲಾ ಸಂಘದ ಅಧ್ಯಕ್ಷ ಚೆನ್ನಕೇಶವ ಮಾಸ್ತರ್, ಉಪನ್ಯಾಸಕ ದಾಮೋದರ ಇ, ಜೇಸಿಐ ಮಡಂತ್ಯಾರುವಿನ ನಿಯೋಜಿತ ಅಧ್ಯಕ್ಷ ಅರುಣ್ ಮೋರಸ್, ಪುರಸಭಾ ಸದಸ್ಯ ಹರಿಪ್ರಸಾದ್ ಭಾಗವಹಿಸಲಿದ್ದಾರೆ. ಬಳಿಕ ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ರಗೋಲಿ ಸ್ಪರ್ಧೆ, ಕೈ ಬರಹ ಸ್ಪರ್ಧೆ, ಪೇಪರ್ ಕ್ರಾಫ್ಟ್, ಕವನ ಸ್ಪರ್ಧೆ, ಏಕಾಪಾತ್ರಾಭಿನಯ ಸೇರಿದಂತೆ ವಿವಿಧ ಸ್ಪರ್ಧೆಗಳು, ಮನೋರಂಜನಾ ಆಟಗಳು ವೈಯಕ್ತಿಯ ಹಾಗೂ ಗುಂಪು ವಿಭಾಗದಲ್ಲಿ ನಡೆಯಲಿದೆ.
ಸಂಜೆ 4ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಸುಧಾಕರ ಆಚಾರ್ಯ, ಉದ್ಯಮಿಗಳಾದ ಓಂ ಪ್ರಸಾದ್, ಕೇಶವ ಬಂಟ್ವಾಳ್, ಮೋಹನ್ ಚೌದರಿ, ಭಾಸ್ಕರ ಸಿ. ಮೂಲ್ಯ, ಜೇಸಿಐ ಬಂಟ್ವಾಳದ ನಿಯೋಜಿತ ಅಧ್ಯಕ್ಷ ಯತೀಶ್ ಕರ್ಕೇರಾ, ಕುಲಾಲ ಯುವ ವೇದಿಕೆ ಅಧ್ಯಕ್ಷ ಸುಕುಮಾರ್ ಬಂಟ್ವಾಳ, ಐವನ್ ಫೆರ್ನಾಂಡೀಸ್, ವಸಂತ ಪೂಜಾರಿ ಭಾಗವಹಿಸಲಿದ್ದಾರೆ ಎಂದು ರಾರಾಸಂ ಫೌಂಡೇಶನ್‍ನ ಅಧ್ಯಕ್ಷ ರಾಧಕೃಷ್ಣ ಬಂಟ್ವಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
