ಬಂಟ್ವಾಳ: ಇಲ್ಲಿನ ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಷಷ್ಠಿ ಮಹೋತ್ಸವ ಮತ್ತು ದೇವರ ಬಲಿ ಉತ್ಸವ ಗುರುವಾರ ನಡೆಯಿತು.  ಕ್ಷೇತ್ರದ ತಂತ್ರಿ ಬಾಲಕೃಷ್ಣ ಪಾಂಗಣ್ಣಾಯ ಇವ ಮಾರ್ಗದರ್ಶನದಲ್ಲಿ ಪ್ರಧಾನ ಅರ್ಚಕ ಡಿ.ರಾಮಚಂದ್ರ ಭಟ್ ಮತ್ತು ಅರ್ಚಕ ಡಿ.ಹರೀಶ್ ಭಟ್ ಇವರ ಪೌರೋಹಿತ್ಯದಲ್ಲಿ ದೇವರಿಗೆ ಪಂಚಾಮೃತ ಮತ್ತು ಪವಮಾನ ಅಭಿಷೇಕ, ತುಲಾಭಾರ ಸೇವೆ, ಮಹಾಪೂಜೆ, ಷಷ್ಠಿ ಮಹೋತ್ಸವ, ದೇವರ ಬಲಿ ಉತ್ಸವ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.13btl-Rayee-1
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಉತ್ಸವ ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ ದರ್ಬೆ , ಲಲಿತಾ ವಸಂತ ಕುಮಾರ್ ಪಡ್ರಾಯಿಗುತ್ತು, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸೋಮಪ್ಪ ಮಡಿವಾಳ, ಜಿ.ರಾಮಸುಂದರ ಗೌಡ, ನಾರಾಯಣ ಗೌಡ ಮೀಯಾಲು, ಸತೀಶ ಪೂಜಾರಿ ಕಾರಂಬಡೆ, ವೆಂಕಪ್ಪ ಮಲೆತ್ತಾಯ, ಪ್ರೇಮ ರವೀಂದ್ರ ಸಪಲ್ಯ, ಪ್ರೇಮ ರಮೇಶ ಪೂಜಾರಿ, ಭಜನಾ ಮಂಡಳಿ ಅಧ್ಯಕ್ಷ ದಿನೇಶ್ ಭಟ್ ದೈಲಾ, ತಾಲ್ಲೂಕು ಪಂಚಾಯಿತಿ ಸದಸ್ಯೆ ಮಂಜುಳಾ ಸದಾನಂದ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *