ಬಂಟ್ವಾಳ: ಇಲ್ಲಿನ ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ವಾಷರ್ಿಕ ಷಷ್ಠಿ ಮಹೋತ್ಸವ ಪ್ರಯುಕ್ತ ದೇವರ ಬಲಿ ಉತ್ಸವ ಗುರುವಾರ ಸಂಭ್ರಮದಿಂದ ನೆರವೇರಿತು.13btl-Badanady-1
ತಂತ್ರಿ ಶ್ರೀಪಾದ ಪಾಂಗಣ್ಣಾಯ ಇವರ ಮಾರ್ಗದರ್ಶನದಲ್ಲಿ ಪ್ರಧಾನ ಅರ್ಚಕ ಸುಂದರ ರಾವ್ ಮತ್ತು ಅರ್ಚಕ ನಾಗೇಶ್ ರಾವ್ ಇವರ ಪೌರೋಹಿತ್ಯದಲ್ಲಿ ದೇವರಿಗೆ ಉಷಾಪೂಜೆ, ಪಂಚಾಮೃತ, ಪವಮಾನ, ನವಕ ಕಲಶಾಭಿಷೇಕ, ಸ್ಕಂದಯಾಗ, ಸಾಮೂಹಿಕ ಆಶ್ಲೇಷಾ ಬಲಿ, ಶ್ರೀ ಬ್ರಹ್ಮಲಿಂಗೇಶ್ವರ ದೇವರಿಗೆ ಏಕಾದಶ ರುದ್ರಾಭಿಷೇಕ, ಮಧ್ಯಾಹ್ನ ಷಷ್ಠಿ ಮಹೋತ್ಸವ, ಬ್ಯಾಂಡ್ ವಾದ್ಯ, ಚೆಂಡೆ, ಕೊಂಬು ವಾದನ ಸಹಿತ ಇಲ್ಲಿನ ಭಜನಾ ಮಂಡಳಿ ಸದಸ್ಯರ ಭಜನೆಯೊಂದಿಗೆ ದೇವರ ಬಲಿ ಮತ್ತು ಪಲ್ಲಕಿ ಉತ್ಸವ ನಡೆಯಿತು. ಮಧ್ಯಾಹ್ನ ನಡೆದ ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡರು.
ಸಂಜೆ ಭಜನೆ, ದುಗರ್ಾ ನಮಸ್ಕಾರ ಪೂಜೆ ಹಾಗೂ ರಾತ್ರಿ ಪರಿವಾರ ದೈವಗಳ ನೇಮೋತ್ಸವ ನಡೆಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ. ಪ್ರಕಾಶ ಕುಮಾರ್ ಜೈನ್, ಸದಸ್ಯರಾದ ಜಗದೀಶ ಕೊಯಿಲ, ಸತೀಶ ಕುಮಾರ್ ಕೊಯಿಲ, ಬಾಲಕೃಷ್ಣ ಶೆಟ್ಟಿ ಬಗ್ಗಂಬೋಳಿ, ಚಂದ್ರಶೇಖರ ಆಚಾರ್ಯ, ಬೈದಗುತ್ತು, ದಾಮೋದರ ನಾಯ್ಕ್ ಬೈರಾಡಿ, ಯಶೋಧ ಶೇಖರ ಶೆಟ್ಟಿ ಕಂಬಳದಡ್ಡ, ಸುಲೋಚನಾ ಭೋಜರಾಜ ಕೊಡಂಗೆ, ರಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ದಯಾನಂದ ಸಪಲ್ಯ, ಸದಸ್ಯೆ ಶೋಭಾ ಎನ್. ಚಿಂಗಲಚ್ಚಿಲ್, ಪ್ರಮುಖರಾದ ಮೋಹನ್ ಕೆ.ಶ್ರೀಯಾನ್ ರಾಯಿ, ಕೆ.ರವೀಂದ್ರ ಪೂಜಾರಿ, ಯಶೋಧರ ಶೆಟ್ಟಿ ದೇರಾಜೆ, ಆನಂದ ಪೂಜಾರಿ ಅಂತರ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *