ಬಂಟ್ವಾಳ: ಚೆನ್ನೈತ್ತೋಡಿ ಉನ್ನತೀಕರಿಸಿದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿಸೆಂಬರ್.22ರಂದು ನಡೆಯುವ ಶಾಲಾ “ಶತಮಾನೋತ್ಸವ ಸಂಭ್ರಮ”ದ ಆಮಂತ್ರಣ ಪತ್ರಿಕೆಯನ್ನು ಸಿ.ಎ.ಬ್ಯಾಂಕ್ ಸಿದ್ದಕಟ್ಟೆಯ ಸಿಇಓ ಶೀನ ಶೆಟ್ಟಿ ಬಿಡುಗಡೆಗೊಳಿಸಿದರು. ಸರ್ವರ ಸಹಕಾರದೊಂದಿಗೆ ಶಾಲಾ ಶತಮಾನೋತ್ಸವವು ಅರ್ಥಪೂರ್ಣವಾಗಿ ಸಂಪನ್ನಗೊಳ್ಳಲಿದೆ. ಈ ನಿಟ್ಟಿನಲ್ಲಿ ವಿದ್ಯಾಭಿಮಾನಿಗಳೆಲ್ಲರೂ ಕೈಜೋಡಿಸಬೇಕಾಗಿದೆ ಎಂದು ಅವರು ಹೇಳಿದರು. ಶತಮಾನೋತ್ಸವ ಸಮಿತಿ ಅಧ್ಯಕ್ಷ ಹಂಝ ಎ.ಬಸ್ತಿಕೋಡಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಎ.ಗೋಪಾಲ ಅಂಚನ್ ಶತಮಾನೋತ್ಸವದಲ್ಲಿ” ಜವಾಬ್ಧಾರಿ- ಸಿದ್ಧತೆ-ಸಂಘಟನೆ” ಬಗ್ಗೆ ಮಾಹಿತಿ ನೀಡಿದರು.IMG-20181206-WA0009
ಮಕ್ಕಳ ಪ್ರತಿಭಾ ಪುರಸ್ಕಾರ, ಸಾಂಸ್ಕøತಿಕ ವೈಭವ, ನಾಟಕ, ಯಕ್ಷಗಾನ, ನೂತನ ಭೋಜನ ಶಾಲೆಯ ಉದ್ಘಾಟನೆ, ಗುರುವಂದನೆ, ಸಾಧಕರಿಗೆ ಸನ್ಮಾನ, ಪುಸ್ತಕ ಮತ್ತು ವಸ್ತುಗಳ ಪ್ರದರ್ಶನ ಸಹಿತ ವಿವಿಧ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಶತಮಾನೋತ್ಸವ ಸಂಭ್ರಮವನ್ನು ಮಾದರಿಯಾಗಿ ನಡೆಸುವ ಬಗ್ಗೆ ಚರ್ಚಿಸಲಾಯಿತು.
ಚೆನ್ನೈತ್ತೋಡಿ ಗ್ರಾಮ ಪಂಚಾಯತು ಅಧ್ಯಕ್ಷ ಯತೀಶ್ ಎಂ.ಶೆಟ್ಟಿ, ಮಾಜಿ ಅಧ್ಯಕ್ಷರುಗಳಾದ ಶ್ರೀಧರ ಜಿ.ಪೈ, ನವೀನ್‍ಚಂದ್ರ ಶೆಟ್ಟಿ, ಮುಖ್ಯ ಶಿಕ್ಷಕಿ ಜಾನೆಟ್, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಪ್ರಮೀಳ, ಶತಮಾನೋತ್ಸವ ಸಮಿತಿ ಸಂಚಾಲಕ ನಾರಾಯಣ ಶೆಟ್ಟಿ ಪರಾರಿ, ಪ್ರಧಾನ ಕಾರ್ಯದರ್ಶಿ ಡೇನಿಸ್ ಫೆರ್ನಾಂಡೀಸ್, ಸಮಿತಿ ಪ್ರಮುಖರಾದ ಅಮ್ಮು ರೈ ಹರ್ಕಾಡಿ, ಸಿ.ಅನಂತ ಪೈ, ಪುರುಷೋತ್ತಮ ಶೆಟ್ಟಿ ಬಾರೆಕ್ಕಿನಡೆ, ಚಂದ್ರಶೇಖರ ಶೆಟ್ಟಿ, ಪ್ರಕಾಶ್ ಗಟ್ಟಿ, ಸತೀಶ್ ಅಂತರಗುತ್ತು, ಸತೀಶ್ ಮಾದೆರೊಟ್ಟು, ಅರುಣ್ ಕುಮಾರ್ ಇಂದ್ರ, ಶಿಕ್ಷಕಿಯರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಮೊದಲಾದವರಿದ್ದರು. ಶಿಕ್ಷಕ ಸಂತೋಷ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *