ಮೂಡುಬಿದಿರೆ: ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಬುಧವಾರ ಧನ್ವಂತರಿ ಪೂಜೆ ಮತ್ತು ಶಿಷ್ಯೋಪನಯನ ಸಂಸ್ಕಾರ ಕಾರ್ಯಕ್ರಮ ನಡೆಯಿತು.
ಬೆಳಗ್ಗೆ ಗಂ.7ರಿಂದ ಅಲಂಗಾರು ಈಶ್ವರ ಭಟ್ ಮತ್ತು ವೈದಿಕ ಬಳಗದವರು ಧನ್ವಂತರಿ ಹೋಮ ಪೂಜೆ ನೆರವೇರಿಸಿದರು.

alvas dhanvanthari pooja (1)

ದೂರದರ್ಶನ ಕಲಾವಿದ ಎಂ.ಎಸ್ ಗಿರಿಧರ್ ನಿರ್ದೇಶನದಲ್ಲಿ ಆಳ್ವಾಸ್ ಆಯುರ್ವೇದ ವಿದ್ಯಾರ್ಥಿಗಳು ಭಕ್ತಿಗಾನ ಸುಧಾ ಕಾರ್ಯಕ್ರವವನ್ನು ಪ್ರಸ್ತುತ ಪಡಿಸಿದರು. ಆಯುರ್ವೇದ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ “ಶಿಷ್ಯೋಪನಯನ ಸಂಸ್ಕಾರ” ಕಾರ್ಯಕ್ರಮವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮತ್ತು ಪ್ರಾಚಾರ್ಯ ಡಾ.ಬಿ ವಿನಯಚಂದ್ರ ಶೆಟ್ಟಿ ಹಾಗೂ ಹಿರಿಯ ಪ್ರಾಧ್ಯಾಪಕರು ಮುನ್ನಡೆಸಿದರು.

alvas dhanvanthari pooja (2)

ಸಂದರ್ಭದಲ್ಲಿ ಟ್ರಸ್ಟಿಗಳಾದ ವಿವೇಕ ಆಳ್ವ, ಡಾ.ವಿನಯ್ ಆಳ್ವ, ಡಾ. ಹನಾ. ವಿ. ಆಳ್ವ, ಬೋಧಕ-ಬೋಧಕೇತರ ಸಿಬಂದಿ ಹಾಗೂ ಆಹ್ವಾನಿತರು ಪಾಲ್ಗೊಂಡಿದ್ದರು.

By suddi9

Leave a Reply

Your email address will not be published. Required fields are marked *