ಬಂಟ್ಟಾಳ: ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನ ವಾರ್ಷಿಕ ವಿಶೇಷ ಶಿಬಿರವು ಡಿ. 7ರಿಂದ ಡಿ.13ರವರೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಂಟ್ಟಾಳ ತಾಲೂಕಿನ ನಡುಮೊಗರು ಎಂಬಲ್ಲಿ ನಡೆಯಲಿದೆ. ಡಿ7ರಂದು ಸಂಜೆ ಗಂಟೆ 5.00ಕ್ಕೆ ನಡೆಯುವ ಶಿಬಿರದ ಉದ್ಘಾಟನೆಯನ್ನು ಬಂಟ್ಟಾಳ ವಿಧಾನಸಭಾಕ್ಷೇತ್ರದ ಶಾಸಕ ರಾಜೇಶ್ ನಾೈಕ್ ಉಳಿಪಾಡಿಗುತ್ತು ನೆರವೇರಿಸಲಿದ್ದಾರೆ.
ಅಧ್ಯಕ್ಷತೆಯನ್ನು ಕಾಲೇಜಿನ ಸಂಚಾಲಕರಾದ ಕೂಡಿಗೆ ಪ್ರಕಾಶ್ ಶೆಣೈ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ| ಪಾಂಡುರಂಗ ನಾಯಕ್ ಪ್ರಾಂಶುಪಾಲರು ಎಸ್.ವಿ.ಎಸ್ಕಾಲೇಜು, ಡಾ| ಹೆಚ್.ಅರ್ ಸುಜಾತ ಉಪಪ್ರಾಂಶುಪಾಲರು, ಕೆ.ಎನ್.ಶಿವರಾಂ ಶೆಟ್ಟಿ, ನಡುಮೊಗರುಗುತ್ತು, ಗೀತಾ ಶ್ರೀಧರ ಪೂಜಾರಿ, ಅಧ್ಯಕ್ಷರು, ಗ್ರಾ.ಪಂ. ಮಣಿನಾಲ್ಲೂರು, ಬೇಬಿ ಕೃಷ್ಣಪ್ಪ, ಸದಸ್ಯರು, ತಾ.ಪಂ. ಬಂಟ್ಟಾಳ, ಆದಂಕುಂಞ, ಸದಸ್ಯರು, ಗ್ರಾ.ಪಂ. ಮಣಿನಾಲ್ಲೂರು, ಸಂಪತ್ಕುಮಾರ್ ಶೆಟ್ಟಿ, ಮಾಜಿ ಅಧ್ಯಕ್ಷರು, ಸಾಮಾಜಿಕ ನ್ಯಾಯ ಸಮಿತಿ ಬಂಟ್ಟಾಳ, ಕೆ.ಎನ್. ಸಾಯಿಗಿರಿಧರ ಶೆಟ್ಟಿ ನಡುಮೊಗರುಗುತ್ತು ಉದ್ಯಮಿ, ಮಂಗಳೂರು, ಶಿವಪ್ರಕಾಶ್ ಎನ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ನಾರಾಯಣ ಪೂಜಾರಿ ಬೊಲ್ಲುಕಲ್ಲು, ಪ್ರಗತಿಪರಕೃಷಿಕರು, ಚಂದ್ರಹಾಸ ಅಧ್ಯಕ್ಷರು, ಎಸ್.ಡಿ.ಎಂ.ಸಿ., ನಡುಮೊಗರು ಶಾಲೆ, ಚಂದ್ರ ಕೆ., ಮುಖ್ಯೋಪಾಧ್ಯಾಯರು, ದ.ಕ.ಜಿ.ಪಂ.ಹಿ.ಪ್ರಾ. ಶಾಲೆ, ನಡುಮೊಗರು, ರೋಹಿನಾಥ್ ಡೆಚ್ಚಾರು, ಅಧ್ಯಕ್ಷರು, ಯುವಕ ಮಂಡಲ (ರಿ), ನಡುಮೊಗರು, ಡಾ| ರಾಜಾರಾಂ, ದಂತ ವೈದ್ಯರು, ಉಪ್ಪಿನಂಗಡಿ, ವಿನಯ, ಅಧ್ಯಕ್ಷರು, ಜನನಿ ನವೋದಯ ಸ್ವಸಹಾಯ ಸಂಘ, ನಡುಮೊಗರು, ಮೊದಲಾದವರು ಭಾಗವಹಿಸಲಿದ್ದಾರೆ, ಎಂದು ಕಾಲೇಜಿನ ಎನ್.ಎಸ್.ಎಸ್ ಯೋಜನಾಧಿಕಾರಿಗಳಾದ ಡಾ| ಮಂಜುನಾಥ ಉಡುಪ ಹಾಗೂ ಕಿಟ್ಟು ರಾಮಕುಂಜ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
