ಬಂಟ್ವಾಳ ತಾಲೂಕು ಪಂಚಾಯತ್ 2017-18ನೇ ಸಾಲಿನ ಜಮಾಬಂದಿ ಕಾರ್ಯಕ್ರಮ ಡಿ.4 ರಂದು ಮಂಗಳವಾರ ಪೂರ್ವಾಹ್ನ ಗಂಟೆ 10.30ಕ್ಕೆ ತಾಲೂಕು ಪಂಚಾಯತ್ನ ಎಸ್.ಜಿ.ಎಸ್.ವೈ.ಸಭಾಂಗಣದಲ್ಲಿ ಮಾನ್ಯ ಉಪಕಾರ್ಯದರ್ಶಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಂಗಳೂರು ಇವರು ಸಾರ್ವಜನಿಕರ ಸಮಕ್ಷಮ ನಡೆಯಲಿದೆ.
ವಿಷಯ:
ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಟಾನ, ಜನತೆಯ ಪಾಲ್ಗೊಳ್ಳವಿಕೆಯನ್ನು ಖಾತರಿಪಡಿಸಿಕೊಳ್ಳುವುದು ಮತ್ತು ಪ್ರೋತ್ಸಾಹಿಸುವುದು, ಪಾರದರ್ಶಕತೆ ಒದಗಿಸುವುದು ಮತ್ತು ನಾಗರಿಕರಿಗೆ ಮಾಹಿತಿ ದೊರಕುವಂತೆ ಮಾಡುವುದು , ಸಾರ್ವಜನಿಕ ಕುಂದುಕೊರತೆ ಪರಿಹಾರ ಮತ್ತು ತಾಲೂಕು ಪಂಚಾಯತ್ನ ಸ್ಪಂದನಶೀಲ ಆಡಳಿತವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ 2017-18 ನೇ ಸಾಲಿನಲ್ಲಿನ ತಾಲೂಕು ಪಂಚಾಯತಿ ಮತ್ತು ವಿವಿಧ ಇಲಾಖೆಗಳಲ್ಲಿನ ಜಮಾ – ಖರ್ಚಿನ ಬಗ್ಗೆ ಸಾರ್ವಜನಿಕರ ಸಮ್ಮುಖದಲ್ಲಿ ಜಮಾಬಂದಿಯನ್ನು ನಡೆಸಲಾಗುವುದು.ಎಂದು ತಾಲೂಕು ಪಂಚಾಯತಿಯ ಪ್ರಕಟನೆ ತಿಳಿಸಿದೆ.
