ಮಂಗಳೂರು: ಇಲ್ಲಿನ ತೋಟ ಬೆಂಗ್ರೆಯಲ್ಲಿ ನಡೆದ ಯುವತಿಯ ಸಾಮೂಹಿಕ ಅತ್ಯಾಚಾರದ ಘಟನೆ ಯನ್ನು ವಿಶ್ವ ಹಿಂದೂ ಪರಿಷತ್ ದುರ್ಗಾವಾಹಿನಿ ತೀವ್ರವಾಗಿ ಖಂಡಿಸುತ್ತದೆ ಮತ್ತು ಈ ಬಗ್ಗೆ ಶೀಘ್ರ ಹಾಗೂ ನಿಷ್ಪಕ್ಷ ತನಿಖೆ ನಡೆಸುವಂತೆ ಮತ್ತು ತಪ್ಪಿಸ್ಥರ ವಿರುದ್ಧ ಕಠಿಣ ಹಾಗೂ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆ ಈಗಾಗಲೇ ಪೋಲೀಸ್ ಕಮಿಷನರ್ ರವರಿಗೆ ಮನವಿ ಮಾಡಲಾಗಿದೆ. ಮಾತ್ರವಲ್ಲ ಇಂತಹ ಅಮಾನವೀಯ ಕೃತ್ಯ ಎಸಗಿದ ಆರೋಪಿಗಳನ್ನು ಗಲ್ಲಿಗೇರಿಸುವಂತೆ ದುರ್ಗಾವಾಹಿನಿ ಸರ್ಕಾರವನ್ನು ಆಗ್ರಹಿಸುತ್ತದೆ.
ಸಮಾಜದಲ್ಲಿ ಈ ರೀತಿಯ ಅಮಾನವೀಯ ಕೃತ್ಯಗಳು ನಡೆಯಲು ಕಾರಣ ಡ್ರಗ್ಸ್ ಎಂಬುದು ನಮ್ಮ ಗಮನಕ್ಕೆ ಬಂದಿರುತ್ತದೆ. ಮಾತ್ರವಲ್ಲ ಮಂಗಳೂರಿನಲ್ಲಿ ಇತ್ತೀಚಿಗರ ಡ್ರಗ್ಮಾಫಿಯಾ, ಸೆಕ್ಸ್ ಮಾಫಿಯಾ, ಪಬ್ ಡ್ಯಾನ್ಸ ಬಾರ್ಗಳು ಯಾವುದೇ ಎಗ್ಗಿಲ್ಲದೇ ನಡೆಯುತ್ತಿದೆ. ಪಬ್, ಡಾನ್ಸ್ ಬಾರ್ ಗಳು ತಡ ರಾತ್ರಿಯ ವರೆಗೆ ತೆರೆದಿದ್ದು ಹದಿಹರೆಯದ ಹಾಗೂ ಹದಿನೆಂಟಕ್ಕಿಂತ ಕಡಿಮೆ ವಯಸ್ಸಿನ ಯುವತಿಯರು ತಡರಾತ್ರಿಯವರೆಗೆ ಕುಡಿತ, ಡ್ರಗ್ಸ್ ಮೋಜು ಮಸ್ತಿಮಾಡಿ ರಾತ್ರಿ ವೇಳೆ ಬೀದಿಗಳಲ್ಲಿ ಓಡಾಡುತ್ತಿದ್ದಾರೆ. ಇವೆಲ್ಲಾ ಕಾನೂನು ಬಾಹಿರವಾದರೂ ಯಾವುದೇ ತೊಂದರೆಯಿಲ್ಲದೆ ನಡೆಯುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಇಂತಹ ಕಾನೂನು ಬಾಹಿರ ಕೃತ್ಯಗಳು ಜಾಸ್ತಿಯಾಗುವ ಸಂಭವ ಇದೆ. ಆದುದರಿಂದ ಪೋಲೀಸ್ ಇಲಾಖೆ ಈ ಬಗ್ಗೆ ತಕ್ಷಣ ಕಾನೂನು ಕ್ರಮ ಜರುಗಿಸಿ, ತಡ ರಾತ್ರಿಯ ವರೆಗೆ ಕಾರ್ಯ ನಿರ್ವಹಿಸುತ್ತಿರುವ ಪಬ್ ಡಾನ್ಸ್ ಬಾರ್ ಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗಿ ವಿಶ್ವ ಹಿಂದೂ ಪರಿಷತ್ ದುರ್ಗಾವಾಹಿನಿ ಆಗ್ರಹಿಸುತ್ತದೆ… ಇಲ್ಲವಾದರೆ ಮುಂದಿನ ದಿನಗಳಲ್ಲಿಸಂಘಟನೆ ಈನಿಟ್ಟಿನಲ್ಲಿ ಉಘ್ರ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ದುರ್ಗಾವಾಹಿನಿ ವಿಭಾಗ ಸಂಯೋಜಕಿ ವಿದ್ಯಾಮಲ್ಯ ತಿಳಿಸಿದ್ದಾರೆ.
