ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಸವಿತಾ ಸಮಾಜ, ಮಂಗಳೂರು ಹಾಗೂ ಸವಿತಾ ಸೌಹಾರ್ದ ಸಹಕಾರಿ ನಿಯಮಿತ, ಬಿ.ಸಿ.ರೋಡ್, ಬಂಟ್ವಾಳ ಇದರ ಜಂಟಿ ಆಶ್ರಯದಲ್ಲಿ ಅವಿಭಜಿತ ದ.ಕ.ಜಿಲ್ಲೆಯಲ್ಲಿ ಸವಿತಾ ಸಮಾಜ ಸಂಘಟನೆಯನ್ನು ಸಂಘಟಿಸಿದವರಲ್ಲೋರ್ವರಾದ ದಿವಂಗತ ವಿಠಲ ಭಂಡಾರಿ ಇವರ ಸಂಸ್ಮರಣಾ ಕಾರ್ಯಕ್ರಮವು ಮಂಗಳವಾರ ಬೆಳಿಗ್ಗೆ ಗಂಟೆ 10-00 ಕ್ಕೆಮಂಗಳಾದೇವಿಯ ಶ್ರೀ ದೇವಿ ನಿಲಯದಲ್ಲಿ ನಡೆಯಲಿದೆ .
ಕರ್ನಾಟಕ ಸರಕಾರವು ಅಸಂಘಟಿತ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ `ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ’ ಯನ್ನು ಪರಿಚಯಿಸಿದ್ದು ಇದರಲ್ಲಿ ಕ್ಷೌರಿಕ ವೃತ್ತಿದಾರರನ್ನು ಕೂಡ ಸೇರಿಸಿ ಸ್ಮಾರ್ಟ್ ಕಾರ್ಡ್ ಬಗ್ಗೆ ಮಾಹಿತಿ ನಡೆಯಲಿದೆ ಹಾಗೂ ಮಂಗಳೂರು ನಗರ ವ್ಯಾಪ್ತಿಕ್ಕೊಳಪಟ್ಟ ಎಲ್ಲಾ ಎಲ್ಲಾ ಕ್ಷೌರಿಕ ಬಂಧುಗಳ ಕ್ಷೌರಿಕ ವೃತ್ತಿ ಬಾಂಧವರ ಸಮಾಲೋಚನ ಸಭೆಯು ನಡೆಯಲಿದೆ .
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಕ.ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಆನಂದ ಭಂಡಾರಿ, ಹೊಸಬೆಟ್ಟು ಇವರು ವಹಿಸಲಿದ್ದಾರೆ ಸ್ಮಾರ್ಟ್ ಕಾರ್ಡ್ ಬಗ್ಗೆ ಮಾಹಿತಿ ಯನ್ನು ಮಂಗಳೂರಿನ ಕಾರ್ಮಿಕ ಅಧಿಕಾರಿ ವಿಲ್ಮಾ ಎಲಿಜಬೆತ್ ತಾವ್ರೊ ನೀಡಲಿದ್ದಾರೆ.
ಅತಿಥಿಗಳಾಗಿ ಸವಿತಾ ಸೌಹಾರ್ದ ಸಹಕಾರಿ ನಿ. ಬಿ.ಸಿ.ರೋಡ್ ಇದರ ಅಧ್ಯಕ್ಷರ ವಿಶ್ವನಾಥ ಬಂಟ್ವಾಳ, ಉಪಾಧ್ಯಕ್ಷರ ಸುರೇಶ್ ನಂದೊಟ್ಟು . ದ.ಕ.ಜಿಲ್ಲಾ ಸವಿತಾ ಸಮಾಜದ ಮಾಜಿ ಜಿಲ್ಲಾಧ್ಯಕ್ಷರ ದಿನೇಶ್ ಎಲ್. ಬಂಗೇರ, ಹೊಸಬೆಟ್ಟು ಮತ್ತು ಜಿಲ್ಲಾ ಪ್ರತಿನಿಧಿ ವಸಂತ್ತಬಾಗವಹಿಸಲಿದ್ದಾರೆ ಸ್ಮಾರ್ಟ್ ಕಾರ್ಡ್ ಅರ್ಜಿಗಳನ್ನು ಭರ್ತಿ ಮಾಡಲು ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕ, ಇತ್ತೀಚಿನ ಎರಡು ಭಾವಚಿತ್ರದ ಪ್ರತಿ, ಜನ್ಮ ದಿನಾಂಕ ಪ್ರಮಾಣಿಕರಣಕ್ಕಾಗಿ ಜನನ ಪ್ರಮಾಣ ಪತ್ರ/ಚಾಲನಾ ಪರವಾನಿಗೆ/ಶಾಲಾ ದಾಖಲೆ/ವೈದ್ಯರಿಂದ ವಯಸ್ಸಿನ ಬಗ್ಗೆ ಪ್ರಮಾಣ ಪತ್ರ ನೀಡಬೇಕಾಗಿ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
