ಮೂಡುಬಿದಿರೆ: ನಿವೃತ್ತ ಪಶುವೈದ್ಯ, ಸಿದ್ಧಕಟ್ಟೆ ಕುಕ್ಕಿಪಾಡಿ ನಿವಾಸಿ ಡಾ. ಚಂದ್ರಯ್ಯ ಆಚಾರ್ಯ (81) ನ. 26 ರಂದು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.

ಬೆಳ್ತಂಗಡಿ ಪಶುವೈದ್ಯ ಆಸ್ಪತ್ರೆಯಲ್ಲಿ ಪಶುವೈದ್ಯರಾಗಿ ಸೇವೆ ಆರಂಭಿಸಿದ ಅವರು ಪುತ್ತೂರು, ರಾಯಿ, ಉಡುಪಿ, ವಾಮದಪದವು ಆಸ್ಪತ್ರೆಗಳಲ್ಲಿ ಸುಮಾರು 33 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಪಶುಗಳ ಕೃತಕ ಗರ್ಭಧಾರಣೆಯಲ್ಲಿ ಅವರು ವಿಶೇಷ ಪರಿಣತಿಯನ್ನು ಹೊಂದಿದ್ದರು. ಹವ್ಯಾಸಿ ಯಕ್ಷಗಾನ ಕಲಾವಿದ, ತಾಳಮದ್ದಳೆಯ ಅರ್ಥಧಾರಿಯೂ ಆಗಿದ್ದ ಅವರು ಯಕ್ಷಗಾನದಲ್ಲಿ ದೇವಿಮಹಾತ್ಮೆ ಪ್ರಸಂಗದಲ್ಲಿ “ದೇವಿ”ಯ ಪಾತ್ರದಲ್ಲಿ ಮಿಂಚಿದ್ದರು.
