ಬಂಟ್ವಾಳ : ಇಂಗ್ಲೀಷ್ ವ್ಯವಹಾರ ಭಾಷೆ. ಭಾಷಾ ವಿಷಯದ ಪರಿಜ್ಞಾನ ಸ್ಪರ್ಧಾತ್ಮಕ ಯುಗದಲ್ಲಿ ಆಗತ್ಯವಾಗಿ ಇರಬೇಕು ಎಂದು ಭಾರತೀಯ ಸ್ಟೇಟ್ ಬ್ಯಾಂಕಿನ ನಿವೃತ ಸಿಬ್ಬಂದಿ ಮತ್ತು ತರಬೇತುದಾರ ಚಂದ್ರಶೇಖರ ರಾವ್ ಎಂ. ಹೇಳಿದರು.
ಅವರು ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜಿನ ಇಂಗ್ಲೀಷ್ ಸಂಘದ ಅಶ್ರಯದಲ್ಲಿ ನಡೆದ ‘ಆಂಗ್ಲ ಭಾಷೆ-ಕಲಿಕೆ ಮತ್ತು ಪ್ರಾಮುಖ್ಯತೆ’ ಎಂಬ ವಿಷಯದ ಕುರಿತು ಮಾತನಾಡಿದರು.
ಪ್ರತಿ ಭಾಷೆಗೂ ಆದರದೇ ಆದ ಮಹತ್ವ ಮತ್ತು ಮೌಲ್ಯಗಳಿವೆ. ವಿದ್ಯಾರ್ಥಿ ಓದುವ, ಆಲಿಸುವ ಹವ್ಯಾಸ ಬೆಳೆಸಿಕೊಂಡಾಗ ಭಾಷಾ ಜ್ವಾನಭಂಡಾರ ಮತ್ತು ವ್ಯಾಕರಣಬದ್ಧತೆ ಪ್ರಗತಿಯಾಗುತ್ತದೆ.
ಸ್ವಆಸಕ್ತಿಯಿಂದ ಯಾವುದೇ ಹಿಂಜರಿಕೆ ಇಲ್ಲದೇ ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳುವ ಮನೋಪ್ರವೃತ್ತಿ ಬೆಳೆಸಿಕೊಳ್ಳಬೇಕು. ಕಲೆ ಮತ್ತು ಸಂಸ್ಕøತಿಯನ್ನು ಅರ್ಥೈಸಿಕೊಳ್ಳಲು ಭಾಷೆಯ ಅರಿವು ಅಗತ್ಯ. ವಿದ್ಯಾರ್ಥಿಯ ಸರ್ವಾಂಗೀಣ ಪ್ರಗತಿಗೆ ಭಾಷಾ ವ್ಯಾಮೋಹವು ಅತೀ ಮುಖ್ಯ ಎಂದರು.ಎಸ್.ವಿ.ಎಸ್. ಪ. ಪೂ. ಕಾಲೇಜು ಪ್ರಾಂಶುಪಾಲೆ ಶಶಿಕಲಾ ಕೆ. ಅಧ್ಯಕ್ಷತೆ ವಹಿಸಿದರು.
ಇಂಗ್ಲೀಷ್ ಸಂಘದ ಅಧ್ಯಕ್ಷೆ ಮತ್ತು ಆಂಗ್ಲ ಭಾಷಾ ಉಪನ್ಯಾಸಕಿ ಪ್ರಭಾವತಿ ಎಸ್. ಅತಿಥಿ ಪರಿಚಯಿಸಿದರು. ಇಂಗ್ಲೀಷ್ ಸಂಘದ ಕಾರ್ಯದರ್ಶಿ ದಿವ್ಯಶ್ರೀ ಆಚಾರ್ಯ ಕೆ. ಸ್ವಾಗತಿಸಿ, ಜತೆ ಕಾರ್ಯದರ್ಶಿ ವೆಂಕಟೇಶ್ ಪೈ. ವಂದಿಸಿದರು. ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿ ರಾಮನಾಥ ಶೆಣೈ ಕಾರ್ಯಕ್ರಮ ನಿರೂಪಿಸಿದರು.
