ಅಡ್ಡೂರು : ಮಂಗಳೂರಿನ ಕಂಕನಾಡಿಯ ಟ್ಯಾಲೆಂಟ್ ಕಾನ್ಫರೆನ್ಸ್ ಸಭಾಗೃಹದಲ್ಲಿ ಟ್ಯಾಲೆಂಟ್ ರೀಸರ್ಚ್ ಫೌಂಡೇಶನ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಮಾಜಸೇವೆಗಾಗಿ ಅಡ್ಡೂರಿನ ಫೈವ್ ಸ್ಟಾರ್ ಯಂಗ್ ಬಾಯ್ಸ್‍ಗೆ ಲಭಿಸಿದ ಅಲ್ ಹಜ್ ಮೌಲಾನ ಇ ಎಂ ಶಾಫಿ ಪ್ರಶಸ್ತಿ ಮೊತ್ತ 10,000 ರೂ ನಗದನ್ನು `ನಂಡೋ ಪೆಂಙಲ್ ಅಭಿಯಾನ’ದ ಮದುವೆ ಕಾರ್ಯಕ್ರಮಕ್ಕೆ ದೇಣಿಗೆಯಾಗಿ ಹಸ್ತಾಂತರಿಸಿ ಮಾನವೀಯತೆ ಮೆರೆಯಿತು.gur-nov-19-adduru five star-2

ಟ್ಯಾಲೆಂಟ್ ರೀಸರ್ಚ್ ಫೌಂಡೇಶನ್ ರಾಷ್ಟ್ರೀಯ ಶಿಕ್ಷಣ ದಿನಾಚರಣೆ, ಅಲ್ ಹಜ್ ಬಿ ಎ ಮೊೈದಿನ್ ಹಾಗೂ ಅಲ್ ಹಜ್ ಮೌಲಾನ ಇ ಎಂ ಶಾಫಿ ಪ್ರಶಸ್ತಿ ಪ್ರದಾನ ಮಾಡಿತು.

ಫೈವ್ ಸ್ಟಾರ್ ಅಧ್ಯಕ್ಷ ಹಬೀಬ್ ಕಟ್ಟಪುಣಿ ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತ, “ನಾವು ಹಮ್ಮಿಕೊಳ್ಳುವ ಪ್ರತಿಯೊಂದು ಸಮಾಜಮುಖಿ ಕಾರ್ಯಕ್ಕೆ ಪ್ರೋತ್ಸಾಹ ನೀಡುತ್ತ ಬಂದಿರುವ ದಾನಿಗಳಿಗೆ ಈ ಪ್ರಶಸ್ತಿ ಅರ್ಪಿಸುತ್ತೇವೆ. ಕ್ಲಬ್ಬಿನ ಪ್ರತಿಯೊಬ್ಬ ಸದಸ್ಯರು ಹಾಗೂ ಕೊಲ್ಲಿ ರಾಷ್ಟ್ರಗಳಲ್ಲಿರುವ ಅನಿವಾಸಿ ಸದಸ್ಯರಿಗೆ ಕೃತಜ್ಞತೆ” ಎಂದರು.

By suddi9

Leave a Reply

Your email address will not be published. Required fields are marked *