ಬಂಟ್ವಾಳ: ವಿಶ್ವ ಶೌಚಾಲಯ ದಿನ ಕಾರ್ಯಕ್ರಮದ ಪೂರ್ವಭಾವಿ ಸಭೆ ತಾ.ಪಂ.ಅದ್ಯಕ್ಷ ಚಂದ್ರಹಾಸ ಕರ್ಕೇರ ಅದ್ಯಕ್ಷ ತೆಯಲ್ಲಿ ಉಪಾಧ್ಯಕ್ಷ ಅಬ್ಬಾಸ್ ಆಲಿ ಉಪಸ್ಥಿತಿಯಲ್ಲಿ  ಎಸ್.ಜಿ.ಆರ್.ಎಸ್.ವೈ . ಸಭಾಂಗಣದಲ್ಲಿ ನಡೆಯಿತು.
ನ .19 ರಂದು ಬೆಳಿಗ್ಗೆ 10 ಗಂಟೆಗೆ ಸ್ಪರ್ಶ ಸಭಾಂಗಣದಲ್ಲಿ ವಿಶ್ವಶೌಚಾಲಯ ದಿನ ನಡೆಸುವ ಬಗ್ಗೆ ದಿನ ನಿಗದಿಯಾಗಿದ್ದು ಈ ಕಾರ್ಯಕ್ರಮ  ಯಶಸ್ವಿಯಾಗಲು ಪಿ.ಡಿ.ಒ.ಮತ್ತು ಕಾರ್ಯದರ್ಶಿ ಗಳ ಸಹಕಾರ ಅಗತ್ಯವಾಗಿ ಬೇಕಾಗಿದೆ ಎಂದು ಇ.ಒ.ರಾಜಣ್ಣ ತಿಳಿಸಿದರು.IMG_6444
IMG_6443ಈ ಕಾರ್ಯಕ್ರಮ ದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯಕ್, ತಾ.ಪಂ.ಅದ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅದ್ಯಕ್ಷೆ ಧನಲಕ್ಮೀ ಸಿ ಬಂಗೇರ, ತಾ.ಪಂ.ಇಒ, ಬಂಟ್ವಾಳ ತಹಶೀಲ್ದಾರ, ಹಾಗೂ ಎಲ್ಲಾ ತಾಲೂಕು ಮಟ್ಟದ ಅಧಿಕಾರಿ ಗಳು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.  ಕಾರ್ಯಕ್ರಮ ವನ್ನು ಯಾವರೀತಿ ಯಲ್ಲಿ ಮಾಡುವುದು ಎನ್ನುವ ಬಗ್ಗೆ ಚರ್ಚೆ ನಡೆದು ಅಧಿಕಾರಿ ಗಳಿಗೆ ವಿವಿಧ ಜವಬ್ದಾರಿ ಗಳನ್ನು ನೀಡಲಾಯಿತು. ‌

By suddi9

Leave a Reply

Your email address will not be published. Required fields are marked *