ಎಡಪದವು: ಸಿಲೆಬಸ್ ಬದಲಾವಣೆಯ ಪ್ರಯುಕ್ತ ಪ್ರಸಕ್ತ ಸನ್ನಿವೇಶದಲ್ಲಿ ಶಿಕ್ಷಕ ಶಿಕ್ಷಕಿಯರಿಗೆ ತರಬೇತಿಯು ಅತ್ಯವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಆಂಗ್ಲ ಮಾಧ್ಯಮ ಶಾಲಾ ಸಂಘ (ರಿ) ವತಿಯಿಂದ ನವೆಂಬರ್ 16 ಮತ್ತು 17ರಂದು ಮಂಗಳೂರಿನ ಬಲ್ಮಠಲ್ಲಿನ ಸಹೋದಯ ಹಾಲ್‍ನಲ್ಲಿ ಎರಡು ದಿನಗಳ ಕಮ್ಮಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಐಡಿಯಲ್ ಆಂಗ್ಲ ಮಾಧ್ಯಮ ಶಾಲೆಯ ಸಂಚಾಕರು ಹಾಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಆಂಗ್ಲ ಮಾಧ್ಯಮ ಶಾಲಾ ಸಂಘ (ರಿ) ಇದರ ಅಧ್ಯಕ್ಷರಾದ ವೈ. ಮೊಹಮ್ಮದ್ ಬ್ಯಾರಿ ಅವರು ಸುದ್ದಿ9 ಗೆ ತಿಳಿಸಿದ್ದಾರೆ.

14y mahamad
ನ.16 ಬೆಳಿಗ್ಗೆ 8ರಿಂದ 9ರ ತನಕ ಉಪಹಾರ ಹಾಗೂ ನೋಂದಣಿ, 9ರಿಂದ 12.30ರ ತನಕ ವಿಜಯ ಕಾಲೇಜ್ ಮೂಲ್ಕಿ ಇದರ ಪ್ರೊ. ವಿಜಯ ಕುಮಾರಿ ಅವರಿಂದ ಗಣಿತ ಉಪನ್ಯಾಸ, ಮಧ್ಯಾಹ್ನ 1ರಿಂದ 2ರ ತನಕ ಔಟಿಸ್ಟಿಕ್ ಆಂಡ್ ಡಿಸ್ಲೆಕ್ಸಿಕ್ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವ ಸಲುವಾಗಿ ವಿಕಾಸನಾ ಟ್ರಸ್ಟ್ ನ ಗೀತಾ ಶೆಟ್ಟಿ ಹಾಗೂ ಡಾ ಶೈಲಜಾ ಅವರಿಂದ, ಮಧ್ಯಾಹ್ನ 2ರಿಂದ 5ರತನಕ ರಾಸಾಯನ ಶಾಸ್ತ್ರ ವಿಷಯದಲ್ಲಿ ಎಂಜಿಎಂ ಕಾಲೇಜ್ ಉಡುಪಿ ಇದರ ಉಪನ್ಯಾಸಕ ಪ್ರೊ.ಭಾಸ್ಕರ ಆಚಾರ್ಯ ಅವರಿಂದ ಉಪನ್ಯಾಸ ನಡೆಯಲಿದೆ.
ನ.17ರಂದು 8ರಿಂದ 9 ಉಪಾಹಾರ, 9ರಿಂದ 12ರತನಕ ಭುವನೇಂದ್ರ ಕಾಲೇಜ್ ಕಾರ್ಕಳ ಇದರ ಉಪನ್ಯಾಸಕ ಪ್ರೊ. ಈಶ್ವರ್ ಭಟ್ ಅವರಿಂದ ಜೀವಶಾಸ್ತ್ರದ ಕುರಿತು ಉಪನ್ಯಾಸ, 1.30ರಿಂದ 5ರತನಕ ವಿಜಯ ಕಾಲೇಜ್ ಮೂಲ್ಕಿ ಉಪನ್ಯಾಸಕ ವೆಂಕಟೇಶ್ ಭಟ್ ಅವರಿಂದ ಭೌತ ಶಾಸ್ತ್ರ ವಿಚಾರದಲ್ಲಿ ಉಪನ್ಯಾಸ ನಡೆಯಲಿದೆ ಎಂದು ವಿವರಿಸಿದರು. ಸಂಘದ ಅಧ್ಯಕ್ಷ ವೈ. ಮಹಮ್ಮದ್ ಬ್ಯಾರಿ, ಕಾರ್ಯದರ್ಶಿ ಕೆ. ರವೀಂದ್ರ ಶೆಟ್ಟಿ, ಕೋಶಧಿಕಾರಿ ಸವಣೂರು ಸೀತಾರಾಮ ರೈ, ಸ.ಕಾರ್ಯದರ್ಶಿ ಜಯಸೂರ್ಯ ರೈ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 9880314522,  9448254262 ದೂ, ಸಂಖ್ಯೆಯನ್ನು ಸಂಪರ್ಕಿಸಬಹುದು.

By suddi9

Leave a Reply

Your email address will not be published. Required fields are marked *