ಮೂಡುಬಿದಿರೆ: ಊರಿಗೆ ಬರುವ ಪರವೂರಿನ ಜನರಿಗೆ ಊರಿನ ಬಗ್ಗೆ ಗೌರವ ಬರುವ ರೀತಿಯಲ್ಲಿ ಸರಿಯಾದ ಮಾಹಿತಿ ನೀಡುವ ಆಟೋ ಚಾಲಕರ ಸೇವೆ ಅಮೂಲ್ಯವಾದುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅದ್ಯಕ್ಷ ಡಾ.ಎಂ ಮೋಹನ ಆಳ್ವ ಹೇಳಿದರು.
ಮೂಡುಬಿದಿರೆ ಆಟೋ ರಿಕ್ಷಾ ಮಾಲಕ- ಚಾಲಕ ಸಂಘದ ವತಿಯಿಂದ ಬುಧವಾರ ರಾತ್ರಿ ನಡೆದ ಧನಲಕ್ಷ್ಮೀ ಪೂಜೆ, ವಾಹನ ಪೂಜೆಯ ಸಭಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ನೂತನ ಕಚೇರಿಗೆ ಶ್ರಮಿಸಿದ ನಿಕಟಪೂರ್ವ ಅಧ್ಯಕ್ಷ ಪ್ರಶಾಂತ್ ಅಂಚನ್ ಹಾಗೂ ಬೆಳ್ಳಿಹಬ್ಬದ ಅಧ್ಯಕ್ಷರಾಗಿ ಸಂಘದ ನೋಂದಣಿಗೆ ಶ್ರಮಿಸಿದ ರಾಮಚಂದ್ರ ಭಟ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯತು.ಮೂಡುಬಿದಿರೆಯ ನೂತನ ಶಾಸಕ ಉಮಾನಾಥ ಕೋಟ್ಯಾನ್ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಆಟೋ ಚಾಲಕ, ಗಾಯಕ ಪಿ.ಎಂ ಹಸನಬ್ಬ ಅವರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಕೆ.ಅಮರನಾಥ ಶೆಟ್ಟಿ, ಕೆ.ಅಭಯ ಚಂದ್ರ ಜೈನ್, ಅಟೋ ಮಾಲಕ ಚಾಲಕ ಸಂಘದ ಅಧ್ಯಕ್ಷ ಸುರೇಶ್ ಕೋಟ್ಯಾನ್, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ, ಸದಸ್ಯರಾದ ಬಾಹುಬಲಿ ಪ್ರಸಾದ್, ನಾಗರಾಜ ಪೂಜಾರಿ, ಪ್ರಸಾದ್, ರಾಜೇಶ್ ಕೋಟೆಗಾರ್, ಸುರೇಶ್ ಕೋಟ್ಯಾನ್, ಬಿಜೆಪಿ ಮುಖಂಡರಾದ ಸುದರ್ಶನ್ ಎಂ., ಮೇಘನಾಥ್ ಶೆಟ್ಟಿ, ವಕೀಲ ಎಂ.ಎಸ್ ಕೋಟ್ಯಾನ್, ಜೆಡಿಎಸ್ ಮುಖಂಡ ದಿವಾಕರ ಶೆಟ್ಟಿ ತೋಡಾರ್, ಸಂಘದ ಕಾನೂನು ಸಲಹೆಗಾರ, ವಕೀಲ ಶರತ್ ಶೆಟ್ಟಿ, ಸಂಘದ ಕಾರ್ಯದರ್ಶಿ ಆನಂದ ಪೂಜಾರಿ, ಕೋಶಾಧಿಕಾರಿ ಸುಂದರ ಎಂ.ಕುಂದರ್, ಗೌರವ ಸಲಹೆಗಾರರಾದ ಭಾಸ್ಕರ ಆಚಾರ್ಯ, ಪ್ರದೀಪ್ ರೈ, ಪ್ರಶಾಂತ್ ಅಂಚನ್, ಜಯರಾಮ್ ರಾವ್ ಉಪಸ್ಥಿತರಿದ್ದರು.
ಸುಂದರ ಆಟೋ ಅಲಂಕಾರ ಸ್ಪರ್ಧೆಯಲ್ಲಿ ಭುವನೇಶ್-ವಿದ್ಯಾಗಿರಿ ಆಟೋ (ಪ್ರಥಮ), ರಮೇಶ್ ಚಿತ್ತಾರ ಆಟೋ(ದ್ವಿತೀಯ) ಹಾಗೂ ಕೇಶವ ಜ್ಞಾನಸುಧ ಆಟೋ(ತೃತೀಯ) ಬಹುಮಾನ ಪಡೆದಿದ್ದಾರೆ.
