ಮೂಡುಬಿದಿರೆ: ತಂತ್ರಜ್ಞಾನ ಇಂದು ವೇಗವಾಗಿ ಬದಲಾಗುತ್ತಲೇ ಇದೆ. ನಾವು ಹಿಂದೆ ಕನಸು ಕಂಡಿದ್ದೆಲ್ಲವೂ ಇಂದು ತಂತ್ರಜ್ಞಾನದ ಮುಖಾಂತರ ನಮ್ಮ ಮುಂದೆ ನಡೆಯುತ್ತಿದೆ. ನಾವಿಂದು ನಮ್ಮ ಸವಾಲುಗಳಿಗೆಲ್ಲವೂ ಪರಿಹಾರಕ್ಕಾಗಿ ತಂತ್ರಜ್ಞಾನದ ಮೊರೆ ಹೋಗುತ್ತಿದ್ದೇವೆ ಎಂದು ಪಿಲಿಕುಳ ನಿಸರ್ಗಧಾಮದ ನಿರ್ದೇಶಕ ಡಾ.ಕೆ.ವಿ.ರಾವ್ ಹೇಳಿದರು.

yen quest news
ಯೇನಪೋಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ಶಾಂತಿ ಮತ್ತು ಅಭಿವೃದ್ಧಿಗಾಗಿ ವಿಶ್ವ ವಿಜ್ಞಾನ ದಿನಾಚರಣೆಯ ಅಂಗವಾಗಿ ನಡೆದ ಯೆನ್‍ಕ್ವೆಸ್ಟ್-2018 ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಯೇನಪೋಯ ಕಾಲೇಜಿನ ಪ್ರಾಂಶುಪಾಲ ಡಾ. ಆರ್.ಜಿ.ಡಿಸೋಜಾ ಸ್ವಾಗತಿಸಿದರು. ಶ್ರೀಮತಿ ಸಷ್ಮಾ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯಕ್ರಮದ ಸಮನ್ವಯಕಾರ ಮೋಹಿತ್ ಪ್ರಸನ್ನ ವಂದಿಸಿದರು. ಕಾವ್ಯ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *