ಮಂಗಳೂರು: ತಮಿಳುನಾಡಿನ ದಿಂಡಿಗಲ್‍ನಲ್ಲಿ 6ನೇ ಫೆಡರೇಶನ್ ಕಪ್ ರಾಷ್ಟೀಯ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಕರ್ನಾಟಕ ಮಹಿಳಾ ತಂಡ ಹ್ಯಾಟ್ರಿಕ್ ಚಾಂಪಿಯನ್‍ಶಿಪ್‍ನ ಸಾಧನೆ ತಮ್ಮದಾಗಿದೆ. ಭಾರತಿಯ ಬಾಲ್ ಬ್ಯಾಡ್ಮಿಂಟನ್ ಫೆಡರೇಶನ್ ಹಾಗೂ ತಮಿಳುನಾಡು ಬಾಲ್ ಬ್ಯಾಡ್ಮಿಂಟನ್ ಸಂಸ್ಥೆಯ ವತಿಯಿಂದ ದಿಂಡಿಗಲ್‍ನ ಪಿ.ಎಸ್.ಎನ್.ಎ. ಕಾಲೇಜಿನ ಆವರಣದಲ್ಲಿ ಜರುಗಿದ ಈ ಚಾಂಪಿಯನ್‍ಶಿಪ್‍ನ ಫೈನಲ್ಸ್‍ನಲ್ಲಿ ರಾಜ್ಯ ವನಿತೆಯರು ಅತಿಥೇಯ ತಮಿಳುನಾಡು ತಂಡವನ್ನು 32-35, 35-30 ಹಾಗೂ 35-26 ಅಂಕಗಳ ರೋಚಕ ಹೋರಾಟದಲ್ಲಿ ಮಣಿಸಿ 6ನೇ ಫೆಡರೇಶನ್ ಕಪ್ ಪ್ರಶಸ್ತಿ ಪಡೆದರು.

Ball badminton federation cup and south zone

ನಾಲ್ಕರ ಘಟ್ಟದ ಪಂದ್ಯಗಳಲ್ಲಿ ರಾಜ್ಯ ತಂಡ ಬಿಹಾರ ವಿರುದ್ಧ 35-18 ಹಾಗೂ 35-23 ಅಂಕಗಳಿಂದ ಹಾಗೂ ತಮಿಳುನಾಡು ಆಂದ್ರಪ್ರದೇಶದ ವಿರುದ್ಧ 35-21 ಹಾಗೂ 35-26 ಅಂಕಗಳಿಂದ ಸೋಲಿಸಿ ಫ್ಯೆನಲ್‍ಗೆ ಅರ್ಹತೆ ಪಡೆದಿತ್ತು. ರಾಜ್ಯ ತಂಡದ ನಾಯಕಿ ಜಿ. ಜಯಲಕ್ಷೀ ಟೂರ್ನಿಯ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿ ಪಡೆದುಕೊಂಡರು. ರಾಜ್ಯ ಪುರುಷರ ತಂಡ ನಾಲ್ಕನೇ ಸ್ಥಾನ ಪಡೆಯಿತು.
ಫೆಡರೇಶನ್ ಕಪ್‍ನ ಪೂರ್ವಭಾವಿಯಾಗಿ ನಡೆದಿದ್ದ 42ನೇ ದಕ್ಷಿಣ ವಲಯ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲೂ ತಮಿಳುನಾಡು ತಂಡವನ್ನು ಮಣಿಸಿ ರಾಜ್ಯ ತಂಡ ಹ್ಯಾಟ್ರಿಕ್ ಚಾಂಪಿಯನ್‍ಶಿಪ್‍ಗೆ ಅರ್ಹತೆಯನ್ನು ಪಡೆಯಿತು. ದಕ್ಷಿಣ ವಲಯದಲ್ಲಿ ರಾಜ್ಯ ಪುರುಷರ ತಂಡ ತೃತೀಯ ಸ್ಥಾನದ ಸಾಧನೆ ಮಾಡಿದೆ.

By Suddi9

Leave a Reply

Your email address will not be published. Required fields are marked *