ಬಂಟ್ವಾಳ: ಹಿಂದೂಗಳ ಶೃದ್ದಾಕೇಂದ್ರ ಶಬರಿಮಲೆಯಲ್ಲಿ ಈ ಹಿಂದಿನಂತೆ ಸಂಪ್ರದಾಯ ಮುಂದುವರಿಯಬೇಕು, ಸು.ಕೋ.ನೀಡಿದ ಆದೇಶಕ್ಕೆ ಕೇರಳ ಸರಕಾರ ಮೇಲ್ಮನವಿ‌ಸಲ್ಲಿಸಬೇಕು ಎಂದು ಒತ್ತಾಯಿಸಿ ಬಂಟ್ವಾಳ ತಾಲೂಕು ಅಯ್ಯಪ್ಪ ಭಕ್ತ ವೃಂದದ ವತಿಯಿಂದ ಒಂದುದಿನದ ಉಪವಾಸ ಸತ್ಯಾಗ್ರಹ,ಭಜನೆ ಸೋಮವಾರ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಸ್ಥಾನದ ಬಳಿ ನಡೆಯಿತು. ಬೆಳಿಗ್ಗೆ ಸಂಸದ ನಳಿನ್ ಕುಮಾರ್ ಕಟೀಲ್ ಅವರು ದೀಪ ಬೆಳಗಿಸುವ ಮೂಲಕ ಉಪವಾಸ ಸತ್ಯಾಗ್ರಹಕ್ಕೆ ಚಾಲನೆ ನೀಡಿದರು.IMG-20181029-WA0006

ಬಳಿಕ ಮಾತನಾಡಿದ ಸಂಸದರು ಮಹಿಳೆಯರಲ್ಲೂ ಜೀವಮಾನದಲ್ಲಿ ಒಮ್ಮೆಯಾದರೂ ಶಬರಿಮಲೆಗೆ ಹೋಗಬೇಕೆಂಬ ಆಸೆಯಿದ್ದರೂ,ಅಲ್ಲಿನ ಸಂಪ್ರದಾಯವನ್ನು ಮುರಿಯುವುದು ಸರಿಯಲ್ಲ ಎಂದರು. ಇದು ಧಾರ್ಮಿಕ ನಂಬಿಕೆಯ ವಿಚಾರವಾಗಿದ್ದು, ಶತಮಾನದ ಇತಿಹಾಸವಿರುವ ಶಬರಿಮಲೆಯ ಸಂಪ್ರದಾಯಕ್ಕೆ ಧಕ್ಕೆಯಾಗದಂತೆ ಜನರ ಭಾವನೆಯನ್ನು ಆರ್ಥೈಸಿಕೊಂಡು ಅಯ್ಯಪ್ಪ ಭಕ್ತರಿಗೆ ನ್ಯಾಯ ಸಿಗುವ ನಿಟ್ಟಿನಲ್ಲಿ ಕೇರಳ ಸರಕಾರ ಮೇಲ್ಮನವಿ ಸಲ್ಲಿಸುವ ಮೂಲಕ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದರು. ಬಳಿಕ ಭಜನಾ ಕಾರ್ಯಕ್ರಮ ಆರಂಭಗೊಂಡಿತು.IMG-20181029-WA0011

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಅವರು ಭಾಗವಹಿಸಿ ಮಾತನಾಡಿ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶದಲ್ಲಿ ಹಿಂದೂಗಳ ನಂಬಿಕೆ,ಸಂಪ್ರದಾಯದ ಮೇಲೆ ನಿರಂತರವಾಗಿ ನಡೆಯುತ್ತಿರುವ ಅಕ್ರಮಣದ ವಿರುದ್ದ ಹಿಂದೂ ಸಮಾಜ ಎದ್ದುನಿಲ್ಲಬೇಕಾದ ಕಾಲ ಸನ್ನಿಹಿತವಾಗಿದೆ ಎಂದರು. ಕೇರಳದ ಕೆಲವು ದೇವಾಲಯದಲ್ಲಿ ಈಗಲೂ ಪುರುಷರಿಗೆ ಪ್ರವೇಶ ನಿಷೇಧವಿದೆ.ಇದು ಅಲ್ಲಿನ ಸಂಪ್ರದಾಯವಾಗಿದೆ.ಶಬರಿಮಲೆಯಲ್ಲು ಸಂಪ್ರದಾಯ ಮುರಿಯುವ ಹುನ್ನಾರದ ವಿರುದ್ದದ ಹೋರಾಟಕ್ಕೆ ಹಿಂದೂ ಸಮಾಜ ಸದಾ ಸಿದ್ದರಿರಬೇಕೆಂದರು.IMG-20181029-WA0024

ಕೊಡಗಿನ ಸಂತ್ರಸ್ಥರಿಗೆ ಎಲ್ಲರು ನೆರವು ನೀಡಲೇಬೇಕು ಇದಕ್ಕೆ ನಮ್ಮ ಸಹಕಾರವು ಇದೆ .ಇದರ ನೆಪದಲ್ಲಿ ಕರ್ನಾಟಕದ ಮೈತ್ರಿ ಸರಕಾರ ದೇವಾಲಯದ ಹುಂಡಿಯಿಂದಲೇ ಲೂಟಿ ಮಾಡಲು ಮುಂದಾಗಿರುವುದನ್ನು ಖಂಡಿಸಿದ ಡಾ.ಭಟ್ ಅವರು ದೇವಾಲಯದ ಹಣ ದೇವಾಲಯದ ಅಭಿವೃದ್ದಿಗೆ ವಿನಿಯೋಗವಾಗಬೇಕು ಎಂದರು.ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ್ ಸ್ವಾಮೀಜಿ ಅವರು ಭಾಗವಹಿಸಿ ಆಶೀರ್ವಚನಗೈದು ಭಜನೆಯಲ್ಲು ಪಾಲ್ಗೊಂಡರು. ರಾಜ್ಯ ಬಿಜೆಪಿ ಸಹವಕ್ತಾರೆ ಸುಲೋಚನಾ ಭಟ್,ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ ಮೊದಲಾದವರು ಸಭೆಯನ್ನುದ್ದೇಶಿಸಿ ಮಾತನಾಡಿದರು.

ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು,ಉಪಾಧ್ಯಕ್ಷೆ ಕಸ್ತೂರಿ ಪಂಜ,ಸದಸ್ಯ ತುಂಗಪ್ಪ ಬಂಗೇರ,ರವೀಂದ್ರಕಂಬಳಿ, ಮಾಜಿಸದಸ್ಯ ಚೆನ್ನಪ್ಪಕೋಟ್ಯಾನ್,ಬಿಜೆಪಿ ಮುಖಂಡರಾದ ಜಿ.ಆನಂದ, ದಿನೇಶ್ ಅಮ್ಟೂರು,ರಾಮದಾಸ ಬಂಟ್ವಾಳ,ಮೋನಪ್ಪ ದೇವಸ್ಯ,ನಾರಾಯಣ ಪೂಜಾರಿ ಬೊಳ್ಳುಕಲ್ಲು,ರಮಾನಾಥ ರಾಯಿ, ಗೋವಿಂದಪ್ರಭು,ಉದಯಕುಮಾರ್ ರಾವ್, ಪುರುಷೋತ್ತಮಶೆಟ್ಟಿ ವಾಮದಪದವು,ವಿಜಯ ರೈ, ಶ್ರೀಕಾಂತ ಶೆಟ್ಟಿ ಸಜೀಪ,ಮುಂಬೈಯ ಕಾರ್ಪೊರೇಟರ್ ಸಂತೋಷ ಶೆಟ್ಟಿದಲಂಬಿಲ,ಪ್ರಭಾಕರ ಪ್ರಭು, ನಂದನರಾಮರೈ,ಗಣೇಶ್ ರೈ ಮಾಣಿ,ಷುರುಷ ಎನ್. ಸಾಲಿಯಾನ್, ಸಂಘಪರಿವಾರ ಸಂಘಟನೆಯ ಮುಖಂಡರಾದ ರಾಧಕೃಷ್ಣ ಅಡ್ಯಂತಾಯ,ರವಿರಾಜ ಬಿ.ಸಿ.ರೋಡ್ ,ಉಮೇಶ್ ಅರಳ,ವಕೀಲ ಪ್ರಸಾದ್ ಕುಮಾರ್ ರೈ,ವೆಂಕಟೇಶ್ ನಾವುಡ ಪೊಳಲಿ,ಗಂಗಾಧರ ಪರಾರಿ, ಪುರಸಭಾ ಸದಸ್ಯೆ ವಿದ್ಯಾವತಿ ಪ್ರಮೋದ್ ಕುಮಾರ್ ,ಮಾಜಿ ಸದಸ್ಯೆ ಯಶೋಧ ಹಾಗೂ ಅಯ್ಯಪ್ಪ ಭಕ್ತವೃಂದ ಸಮಿತಿಯ ಪದಾಧಿಕಾರಿಗಳು,ಸದಸ್ಯರು ಉಪಸ್ಥಿತರಿದ್ದರು.

ಶಾಸಕ ಯು.ರಾಜೇಶ್ ನಾಯ್ಕ್ ,ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ ಅವರು ಬೆಳಿಗ್ಗೆಯಿಂದ ಸಂಜೆ ಉಪವಾಸ ಮುಕ್ತಾಯದವರೆಗೂ ಸ್ವತ: ಉಪವಾಸದಲ್ಲಿದ್ದು ಭಜನೆಯಲ್ಲಿ ನಿರತರಾಗಿ ಗಮನಸೆಳೆದರು.

ಹೋರಾಟಕ್ಕೆ ಸಿದ್ದರಾಗಿ: ಶ್ರೀಕಾಂತ್ ಸಂಜೆ ಶಾಸಕ ರಾಜೇಶ್ ನಾಯ್ಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸತ್ಯಾಗ್ರಹದ ಸಮಾರೋಪ ಸಮಾರಂಭದಲ್ಲಿ ಪತ್ರಕರ್ತ ಶ್ರೀಕಾಂತ ಶೆಟ್ಟಿ ಅವರು ಸಮಾರೋಪ ಭಾಷಣಗೈದು ಶಬರಿಮಲೆ ಕ್ಷೇತ್ರದ ಪಾವಿತ್ರ್ಯದ ಬಗ್ಗೆ ಕೇರಳದ ಕಮ್ಯುನಿಷ್ಠ್ ಸರಕಾರ ಇನ್ನಿಲ್ಲದ ಷಡ್ಯಂತ್ರ ನಡೆಸುತ್ತಿದ್ದು,ಇದರ ವಿರುದ್ದ ಹಿಂದೂ ಸಮಾಜ ಹೋರಾಟಕ್ಕೆ ಸಿದ್ದರಾಗಬೇಕಾಗಿದೆ ಎಂದರು.

ಹಿಂದುಗಳ ಪವಿತ್ರ ಕ್ಷೇತ್ರ ಶಬರಿಮಲೆಯ ವಿರುದ್ದ ಸಾಕಷ್ಟು ಅಪಪ್ರಚಾರ ನಡೆಸಿ ಸುದ್ದಿ ಮಾಡಲಾಗುತ್ತಿದ್ದರೂ,ಇಲ್ಲಿಗಾಗಮಿಸುವ ಭಕ್ತರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ ಎಂಬುದನ್ನು ಅರಿತುಕೊಳ್ಳಬೇಕು, ವೈರಾಗ್ಯ,ಬ್ರಹ್ಮಚರ್ಯೆಯ ಸಂಚಲನ ಇಂದಿಗೂ ಅಯ್ಯಪ್ಪಸನ್ನಧಿಯಲ್ಲಿದೆ ಎಂದು ಹೇಳಿದರು. ಅನ್ಯಧರ್ಮಿಯರ ಹುಂಡಿಗೆ ಭಕ್ತರು ಹಾಕುವ ಹಣವನ್ನು ಮುಟ್ಟಲು ಧಮ್ ಇಲ್ಲದ ಸರಕಾರ ಶಬರಿಮಲೆಯ ಹುಂಡಿಗೆ ಭಕ್ತರು ಭಕ್ತಿಯಿಂದ ಸಮರ್ಪಿಸುವ ಕೋಟ್ಯಾಂತರ ಹಣವನ್ನು ದೋಚುತ್ತಿದ್ದರೂ,ಅಲ್ಲಿನ ಅಭಿವೃದ್ದಿಗೆ ವಿನಿಯೋಗಿಸದೆ ಅನ್ಯಧರ್ಮಿಯರ ಆರಾಧನಾಲಯಕ್ಕೆ ಖರ್ಚುಮಾಡುತ್ತಿದೆ ಎಂದು ಟೀಕಾಪ್ರಹಾರಗೈದರು.

ಸು.ಕೋ.ಇತ್ತೀಚೆಗೆ ಹಲವಾರು ತೀರ್ಪುಗಳನ್ನು ನೀಡಿದ್ದರೂ,ಅವುಗಳಲ್ಲಿ ಬಹುತೇಕ ತೀರ್ಪು ಅನುಷ್ಠಾನಕ್ಕೆ ಬಂದಿಲ್ಲ.ಶಬರಿಮಲೆಯಲ್ಲು ಈ ಹಿಂದಿನಂತೆ ಸಂಪ್ರದಾಯ ಮುಂದುವರಿಯಬೇಕುಇದಕ್ಕೆ ಕೇರಳ ಸರಕಾರ ಸು.ಕೋ.ಮೇಲ್ಮನವಿ ಸಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.ಅಯ್ಯಪ್ಪ ಭಕ್ತ ವೃಂದ ಸಮಿತಿಯ ಅಧ್ಯಕ್ಷ ಬೋಜ ಸಾಲಿಯಾನ್,ಸಂಜೀವ ಗುರುಸ್ವಾಮಿ,ರಮಾನಂದ ಸ್ವಾಮಿ,ಉಮೇಶ್ ಸ್ವಾಮಿ,ನಾಗೇಶ್ ಸ್ವಾಮಿ,ಹಿಮಕರ ಸ್ವಾಮಿ,ವಾಸು ಸ್ವಾಮಿ ವೇದಿಕೆಯಲ್ಲಿದ್ದರು.

ದೇವದಾಸ ಶೆಟ್ಟಿ ಸ್ವಾಗತಿಸಿ ,ವಂದಿಸಿದರು.ಬಳಿಕ ಶಾಸಕ ರಾಜೇಶ್ ನಾಯ್ಕ್,ಹರಿಕೃಷ್ಣ ಬಂಟ್ವಾಳ ಅವರ ನೇತ್ರತ್ವದಲ್ಲಿ ತಹಶೀಲ್ದಾರ್ ಪುರಂದರ ಹೆಗ್ಡೆ ಅವರ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಯಿತು.ಅಯ್ಯಪ್ಪ ಸ್ವಾಮಿ ಭಾವಚಿತ್ರಕ್ಕೆ ಕರ್ಪೂರಾರತಿ ನಡೆದು,ಉಪಹಾಸ ಸತ್ಯಾಗ್ರಹಕ್ಕೆ‌ಮಂಗಳ ಹಾಡಲಾಯಿತು.

By suddi9

Leave a Reply

Your email address will not be published. Required fields are marked *