ಮಂಗಳೂರು: `ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ’ ಮಂಗಳೂರು ಆಶ್ರಯದಲ್ಲಿ ನಡೆಯುವ
ಸಾಹಿತ್ಯ ಸಾಂಸ್ಕೃತಿಕ ಸಂಭ್ರಮ- 2018ನೇ ಸಾಲಿನ `ಸೌರಭ ರತ್ನ ರಾಜ್ಯ ಪ್ರಶಸ್ತಿ’ಯನ್ನು ಈ ಬಾರಿ ಡಾ| ರಜನಿ ವಿ.ಪೈ ಅವರಿಗೆ ನೀಡಿ ಗೌರವಿಸಲಿದೆ ಎಂದು ಕಥಾಬಿಂದು ಸಂಸ್ಥೆ ಪ್ರಕಟಿಸಿದೆ.
ಇವರು ಮುಂಬಯಿ ಮಹಾನಗರದಲ್ಲಿ ಹಲವಾರು ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸಮಾಜ ಸೇವೆ ಮೂಲಕ ಹೆಸರುವಾಸಿಯಾದ ಸಮಾಜ ಸೇವಕಿ ಡಾ| ರಜನಿ ಪೈ ಅವರಿಗೆ ಪ್ರದಾನಿಸಲಿದ್ದು, ಇದೇ ನ.15ರಂದು ಮಂಗಳೂರು ಮಂಗಳಾದೇವಿ ಕಲಾಮಂದಿರದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಸಲ್ಪಡುವ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಗೌರವ ಸನ್ಮಾನ ಸಮಾರಂಭ ನಡೆಯಲಿದೆ ಎಂದು ಕಥಾಬಿಂದು ಸಂಸ್ಥೆ ತಿಳಿಸಿದೆ.

