ಬಂಟ್ವಾಳ: ಯಕ್ಷಗಾನ ನಮ್ಮ ಶ್ರೇಷ್ಠ ಕಲೆಯಾಗಿದ್ದು, ನಮ್ಮ ಸಂಸ್ಕøತಿ, ಸಂಸ್ಕಾರವನ್ನು ಪ್ರತಿಬಿಂಬಿಸುತ್ತದೆ. ಭಾರತೀಯ ಸಂಸ್ಕøತಿಯ ಹಿಂದೆ ಮನುಷ್ಯತ್ವದ ಅರ್ಥವಿದೆ. ನಮ್ಮ ಸಂಸ್ಕøತಿ, ಸಭ್ಯತೆ ಚೆನ್ನಾಗಿದ್ದರೆ ಅದು ನಮ್ಮನ್ನು ಉಳಿಸುತ್ತದೆ. ಆಧುನಿಕತೆಯ ಭರಾಟೆಯಲ್ಲಿ ಯಕ್ಷಗಾನವನ್ನು  ಪ್ರೋತ್ಸಾಹಿಸುವುದರಿಂದ ನಮ್ಮ ಸಂಸ್ಕøತಿ ಉಳಿವಿಗೆ ದಾರಿಯಾಗುತ್ತದೆ. ಯಕ್ಷಗಾನವನ್ನು  ಪ್ರೋತ್ಸಾಹಿಸಿದವರ ಸಂಸ್ಮರಣೆ, ಕಲಾವಿದರಿಗೆ ಗೌರವ ಮತ್ತು ಯಕ್ಷಗಾನವನ್ನು ಉಳಿಸಿ ಬೆಳೆಸುತ್ತಿರುವ ಯಕ್ಷ ಮಿತ್ರರು ಶ್ರೀ ಕ್ಷೇತ್ರ ಪೂಂಜ ಇದರ ಕಾರ್ಯ ಶ್ಲಾಘನೀಯ ಎಂದು ಹಿರಿಯ ಸಾಹಿತಿ ಡಾ| ಏರ್ಯ ಲಕ್ಷ್ಮಿನಾರಾಯಣ ಆಳ್ವ ಹೇಳಿದರು.
ಇಲ್ಲಿನ ಸಿದ್ದಕಟ್ಟೆ ಹರ್ಷಲಿ ಸಭಾಭವನದ ವಠಾರದಲ್ಲಿ ಅ. 21ರಂದು ಸಿದ್ದಕಟ್ಟೆಯ ನೂತನ ಸಂಘ ಯಕ್ಷಮಿತ್ರರು ಶ್ರೀ ಕ್ಷೇತ್ರ ಪೂಂಜ, ಸಿದ್ದಕಟ್ಟೆ ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಜೆ ನಡೆದ ಪ್ರಶಸ್ತಿ ಪ್ರದಾನ, ಸಂಸ್ಮರಣೆ, ತಾಳಮದ್ದಳೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

Siddakatte
ಹಿರಿಯ ಯಕ್ಷಗಾನ ಅರ್ಥದಾರಿ, ವಿಮರ್ಶಕ ಡಾ| ಎಂ. ಪ್ರಭಾಕರ ಜೋಷಿ ಅವರು ಮಾತನಾಡಿ, ಕಲೆ ಮತ್ತು ಕ್ರೀಡೆ ನಮ್ಮನ್ನು ಉಲ್ಲಾಸಗೊಳಿಸುವ ವಿಚಾರಗಳು. ಪ್ರಸ್ತುತ ಕಲೆಗೆ ಮೌಲ್ಯ,  ಪ್ರೋತ್ಸಾಹ ದೊರಕುತ್ತಿದ್ದು, ಕಲಾವಿದರು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಯಕ್ಷಗಾನದ ಬಗೆಗಿನ ಯಕ್ಷಮಿತ್ರರು ಸಂಘದ ಪ್ರಯತ್ನ ಮುಂದುವರೆಯಲಿ. ಅನನ್ಯ ಕಲಾವಿದರನ್ನು ಗುರುತಿಸುವಂತಾಗಲಿ ಎಂದರು.
ಮೂಡಬಿದಿರೆ ಇತಿಹಾಸ ಸಂಶೋಧಕ ಡಾ| ಪುಂಡಿಕಾೈ ಗಣಪಯ್ಯ ಭಟ್ ಅವರು ಮಾತನಾಡಿ, ಯಕ್ಷಗಾನಕ್ಕೆ ವಿಶೇಷ ಕೊಡುಗೆ ನೀಡಿದ ಸಿದ್ದಕಟ್ಟೆಯಲ್ಲಿ ಯಕ್ಷ ಸಂಘಟನೆ ಇಲ್ಲದ ಕೊರತೆಯನ್ನು ನೂತನ ಸಂಘ ನೀಗಿಸಿದೆ. ಕಲಾವಿದ, ಪ್ರೇಕ್ಷಕ ಮತ್ತು ಸಂಘಟಕರು ಜತೆಗೂಡಿದಾಗ ಯಾವುದೇ ಕಲೆ ಬೆಳವಣಿಗೆಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ನೂತನ ಸಂಘ ಉತ್ತಮ ಕೊಡುಗೆಯಾಗಲಿ ಎಂಧು ಹೇಳಿದರು.
ಮೂಡಬಿದಿರೆ ಯಕ್ಷಗಾನ ವಿಮರ್ಶಕ ಎಂ. ಶಾಂತರಾಮ ಕುಡ್ವ ಅವರು ಮಾತನಾಡಿ, ಯುವ ಜನತೆ ಯಕ್ಷಗಾನದತ್ತ ಹೊರಳುತ್ತಿರುವುದು ಯಕ್ಷಗಾನದ ಬೆಳವಣಿಗೆಗೆ ಆಶಾದಾಯಕ ವಿಚಾರವಾಗಿದೆ. ನೂತನ ಸಂಘ ಸದಾಕಾಲ ಯಕ್ಷಗಾನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಕ್ರಿಯವಾಗಲಿ ಬೆಳೆಯಲಿ ಎಂದರು.
ಉಪನ್ಯಾಸಕ, ಲೇಖಕ ಡಾ| ಯೋಗೀಶ್ ಕೈರೋಡಿ ಅವರು ಪ್ರಾಸ್ತಾವಿಕ ಮಾತನಾಡಿ, ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ ಮತ್ತು ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ ಅವರಿಂದ ಯಕ್ಷಗಾನಕ್ಕೆ ಮಹತ್ತರ ಕೊಡುಗೆಯಾಗಿದ್ದು, ಯಕ್ಷಗಾನವನ್ನು ಪ್ರಧಾನವನ್ನಾಗಿಸಿದ್ದ ಆಚಾರ್ಯರ ಕೊಡುಗೆಯೂ ಅನನ್ಯ. ಅವರ ಸಂಸ್ಮರಣೆ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದರು.
ಶ್ರೀ ಕ್ಷೇತ್ರದ ಪೂಂಜದ ಅರ್ಚಕರಾಗಿದ್ದ ದಿ| ರಾಮಚಂದ್ರ ಆಚಾರ್ಯ, ಮತ್ತು ದಿ| ಅನಂತ ಆಚಾರ್ಯ ಅವರ ಸಂಸ್ಮರಣೆ ನಡೆಯಿತು. ಬೂಬ ಮಾಸ್ಟರ್ ಮತ್ತು ರಮೇಶ್ ಭಟ್ ಮಾದೇರಿ ಅವರು ಸಂಸ್ಮರಣಾ ಭಾಷಣ ಮಾಡಿದರು. ಯಕ್ಷಗಾನ ಕಲಾವಿದರಾದ ಗಣೇಶ್ ಶರ್ಮ ಕೀರಿಕ್ಕಾಡು, ಪದ್ಮನಾಭ ಶೆಟ್ಟಿಗಾರ್ ಸಿದ್ದಕಟ್ಟೆ, ರಾಷ್ಟ್ರೀಯ ಕ್ರೀಡಾಪಟು ರಮ್ಯಶ್ರೀ ಜೈನ್ ಸಿದ್ದಕಟ್ಟೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಪೂಂಜ ಇದರ ಆಸ್ರಣ್ಣ ಕೃಷ್ಣಪ್ರಸಾದ್ ಆಚಾರ್ಯ, ಅರ್ಚಕ ಪ್ರಕಾಶ್ ಆಚಾರ್ಯ, ಉಪ್ಪಿರ ಶ್ರೀ ಮುಜಿಲ್ನಾಯ ದೈವಸ್ಥಾನ ಅಧ್ಯಕ್ಷ ಶ್ರೀಪ್ರಕಾಶ್ ಜೈನ್ ಜಂಕಳ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಡಾ| ಯೋಗೀಶ್ ಕೈರೋಡಿ ಸ್ವಾಗತಿಸಿದರು. ನ್ಯಾಯವಾದಿ ಸುರೇಶ್ ಶೆಟ್ಟಿ ಸಿದ್ದಕಟ್ಟೆ ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.
ಮಧ್ಯಾಹ್ನ ಹಿರಿಯ ಯಕ್ಷಗಾನ ಅರ್ಥದಾರಿ ವಾಸು ಶೆಟ್ಟಿ ಕುತ್ಲೋಡಿ ಅವರು ನೂತನ ಸಂಘವನ್ನು ಉದ್ಘಾಟಿಸಿದರು. ಬಳಿಕ ಶರಸೇತು ಬಂಧನ ಮತ್ತು ಸಾರಥ್ಯ ತ್ಯಾಗ-ಕರ್ಣಾವಸಾನ ತಾಳಮದ್ದಳೆ ನಡೆಯಿತು.

 

By suddi9

Leave a Reply

Your email address will not be published. Required fields are marked *