ಬೆಂಗಳೂರು: ಸ್ವಾಮಿ ನಿತ್ಯಾನಂದ ಅವರ ಪುರುಷತ್ವ ಪರೀಕ್ಷೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದಿದ್ದು, ಇದೋಗ ಮತ್ತಷ್ಟು ಪರೀಕ್ಷೆಗೊಳಪಡಿಸಲು ಅವರನ್ನು ಮಡಿವಾಳದಲ್ಲಿರವ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ  ಆಂಬ್ಯುಲೆನ್ಸ್ ಮೂಲಕ ರವಾನಿಸಲಾಗುತ್ತಿದೆ.

nithya
ಪುರುಷತ್ವ ಪರೀಕ್ಷೆಗೊಳಪಡಿಸಲು ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಬೆಳಿಗ್ಗೆಯಿಂದಲೇ ದಾಖಲಿಸಲಾಗಿತ್ತು. ಮೂತ್ರ ಪರೀಕ್ಷೆ, ವೃಷಣ ಪರೀಕ್ಷೆ ಮಾಡಿದ ಬಳಿಕ ನಿತ್ಯಾನಂದ ಪುರುಷ ಎಂದು ವಿಕ್ಟೋರಿಯಾ ವೈದ್ಯರು ಸಾಬೀತುಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಪರೀಕ್ಷೆಯ ವೇಳೆ ನಿತ್ಯಾನಂದನ ಜನನಾಂಗ ಉದ್ರೇಕಗೊಂಡಿದ್ದು, ವೀರ್ಯಾಣು, ಹಾಗೂ ಶಿಶ್ನ ಸಹಜ ಸ್ಥಿತಿಯಲ್ಲಿದೆ ಎನ್ನಲಾಗುತ್ತಿದೆ. ವೈದ್ಯರು ಹಾಗೂ ಎನ್ ಜಿ ಓದ ಇಬ್ಬರು ಯುವತಿಯರು ಸ್ವಾಮಿಯನ್ನು ಕಾಮಪ್ರಚೋದಕ ಪುಸ್ತಕ ನೀಡಿ ಹಸ್ತಮೈಥುನ ಮಾಡುವಂತೆ ಸೂಚಿಸಿದ್ದು, ಒತ್ತಾಯಕ್ಕೆ ಕಟ್ಟು ಬಿದ್ದು ಹಸ್ತಮೈಥುನ ಮಾಡಿದ್ದಾರೆನ್ನಲಾಗಿದ್ದು, ಪರೀಕ್ಷೆಯ ಬಳಿಕ ನಿತ್ಯಾನಂದ ಸಾಕಷ್ಟು ಬಳಲಿದ್ದಾರೆ ಎನ್ನಲಾಗಿದೆ.
ಇದೆಲ್ಲಾ ಪರೀಕ್ಷೆ ನಡೆದ ಬಳಿಕ ಇವರನ್ನು ಮಡಿವಾಳದ ವಿಧಿವಿಜ್ಞಾನ ಪರೀಕ್ಷೆಗೆ ಕರೆದೊಯ್ಯಲಾಗುತ್ತಿದ್ದು, ಅಲ್ಲಿ ಧ್ವನಿ ಪರೀಕ್ಷೆ ನಡೆಯಲಿದೆ.

By suddi9

Leave a Reply

Your email address will not be published. Required fields are marked *